ಮಹಿಳೆಯ ಜೀವನ ಸುರಕ್ಷಿತವಲ್ಲ: ನ್ಯಾ. ಫೈರುಜಾ
ಕ.ಪ್ರ.ವಾರ್ತೆ ತುಮಕೂರು ಡಿ. 12
ಎಷ್ಟೇ ಮಾನವ ಹಕ್ಕಗಳಿದ್ದರೂ, ಸಂವಿಧಾನ ಎಲ್ಲ ವಿಧವಾದ ಹಕ್ಕುಗಳನ್ನು ನೀಡಿದ್ದರೂ ಮಹಿಳೆಯ ಜೀವನ ಇಂದಿಗೂ ಸುರಕ್ಷಿತವಾಗಿಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಜಿಲ್ಲಾ ಎರಡನೇ ಅಧಿಕ ಸಿವಿಲ್ ನ್ಯಾಯಾಧೀಶೆ ಫೈರುಜಾ ಮಾರ್ಮಿಕವಾಗಿ ನುಡಿದರು.
ಅವರು ಜಿಲ್ಲಾ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಹ ಯೋಗದೊಂದಿಗೆ ನಗರದ ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಿದ್ದ ವಿಶ್ವ ಮಾನವಹಕ್ಕು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಹಕ್ಕುಗಳು ಜಾರಿಯಾಗಿ ಅನೇಕ ದಶಕಗಳು ಕಳೆದಿದ್ದರೂ, ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಅರ್ಥೈಸುವ ವಿಧಾನ ಬದಲಾಗಿದೆ ಎಂದರು. ಜನ ಸಾಮಾನ್ಯರಿಗೆ ಅನೇಕ ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಅಪರಾಧಿಗಳಿಗೆ ಎಷ್ಟೇ ಶಿಕ್ಷೆ ನೀಡಿದರೂ ಸಮಾಜದಲ್ಲಿ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಯಾರು ಹುಟ್ಟಿನಿಂದಲೇ ಅಪರಾಧಿಗಳಾಗಿರುವುದಿಲ್ಲ ಎಂದರು.
ಸಮಯ ಸಂದರ್ಭಕ್ಕೆ ಅನುಗುಣವಾಗಿ ಅಪರಾಧ ಮಾಡುತ್ತಾರೆ. ಆತ್ಮಹತ್ಯೆ ಪ್ರಯತ್ನವೂ ಕೂಡ ಮಾನವಹಕ್ಕುಗಳ ಉಲ್ಲಂಘನೆ. ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಬಾರದು. ಸಮಾಜಕ್ಕೆ ಹಿತಕರವಾದ ದುಡಿಮೆ ಮಾಡಿ ಎಂದರು.
ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಸಮಸ್ಯೆಗಳನ್ನು ಗಮನಿಸಿ ಮದುವೆ ಮಾಡುವುದು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗೆಯೇ ಮಕ್ಕಳನ್ನು ಹೆರುವುದು ಮಾನವ ಹಕ್ಕು. ಈ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ನ್ಯಾ.ಫೈರುಜಾ ತಿಳಿಸಿದರು. ಮಾನವ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕಿದೆ ಮತ್ತು ಅವುಗಳ ಉಲ್ಲಂಘನೆಯಾದಾಗ ಏನೂ ಮಾಡಬೇಕು ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಸಬೇಕಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಾಲ್ಕನೇ ಅಧಿಕ ಸಿವಿಲ್ ಜಡ್ಜ್ ವೇದಮೂರ್ತಿ, ಮಾನವ ಹಕ್ಕುಗಳ ಪರಿಪಾಲನೆಯ ಬಗ್ಗೆ ಮಾಹಿತಿ ನೀಡಬೇಕಿದೆ. ಹೆಚ್ಚಿನದಾಗಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಾನವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರೆ ಸಾಲದು, ಉಲ್ಲಂಘನೆಯಾದರೆ ಜನ ಸಾಮಾನ್ಯರು ಏನು ಮಾಡಬೇಕು ಎಂಬುದನ್ನು ತಿಳಿಸಬೇಕಿದೆ. ನಮ್ಮ ಸಂವಿಧಾನದಲ್ಲಿ ಅವಕಾಶ ನೀಡಿರುವ ಮಾನವ ಹಕ್ಕುಗಳ ಕಾಯ್ದೆಯಡಿ ನ್ಯಾಯ ಪಡೆಯಬೇಕು ಎಂದರು.
ಜಿಲ್ಲಾ ಮಾನವ ಹಕ್ಕು ಆಯೋಗದ ಅಧ್ಯಕ್ಷ ಜಾವೇದ್, ಜೈಲ್ ಸೂಪರಿಂಟೆಂಡ್ ಸಮೀಯುಲ್ಲಾ, ತಿಮ್ಮಪ್ಪ ಭಜಂತ್ರಿ, ಮಾನವ ಹಕ್ಕು ಆಯೋಗದ ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

