150 ಗ್ರಾಂ ಚಿನ್ನ ಹಿಂದಿರುಗಿಸಿದ ಪ್ರಾಮಾಣಿಕ ಆಟೋ ಚಾಲಕ
ತುಮಕೂರು: ತಮ್ಮ ಮಗಳ ಮದುವೆಗೆಂದು ಕುಂದಾಪುರದಿಂದ ಆಗಮಿಸಿದ್ದ ಕುಟುಂಬಮೊಂದು ನಗರದ ಬಡಾವಣೆಯೊಂದಕ್ಕೆ ಹೋಗಲು ಆಟೋ ವಿಚಾರಿಸಲು ಬಂದು ಆಟೋದಲ್ಲಿಯೇ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗೊಂದನ್ನು ಅದರ ಮಾಲೀಕರಿಗೆ ಪೊಲೀಸರ ಸಮ್ಮುಖದಲ್ಲಿ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ 20 ವರ್ಷಗಳಿಂದ ಆಟೋ ಚಾಲನೆ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿರುವ ಶಿರಾಗೇಟ್ನ ದೇವಣ್ಣ ಮಂಗಳವಾರ ರಾತ್ರಿ 9.30ರ ಸುಮಾರಿನಲ್ಲಿ ನಗರದ ರೇಲ್ವೆ ಸ್ಟೇಷನ್ ಮುಂಭಾಗ ಪ್ರಯಾಣಿಕರಿಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದು, ಈ ವೇಳೆ ಕುಂದಾಪುರ-ಯಶವಂತಪುರ ರೈಲಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಚಂದ್ರಶೇಖರ್ ಆರಾಧ್ಯ ಮತ್ತು ಶಾಮಲ ದಂಪತಿ ನಗರದ ಹೊರಪೇಟೆಗೆ ಹೋಗಲು ದೇವಣ್ಣ ಅವರ ಆಟೋ ವಿಚಾರಿಸಿದ್ದು, ಈ ವೇಳೆ ತಮ್ಮ ಜೊತೆ ತಂದಿದ್ದ ಒಂದು ಟ್ರಾವಲ್
ಬ್ಯಾಗ್ನನ್ನು ಆಟೋದಲ್ಲಿಟ್ಟು ವಿಚಾರಿಸುತಿದ್ದು ಹೊರಪೇಟೆಗೆ ಹೋಗಲು 30 ರು. ಕೇಳಿದ್ದರಿಂದ ನೀಡಲು ಒಪ್ಪದೇ ಬೇರೆ ಆಟೋ ಮಾಡಿಕೊಂಡು ಹೋಗಿದ್ದರು.
ಸುಮಾರು ಐದತ್ತು ನಿಮಿಷಗಳ ನಂತರ ಆಟೋ ರೀಕ್ಷಾದ ಹಿಂಬದಿಯ ಸೀಟು ನೋಡಿದ ದೇವಣ್ಣ ಅವರಿಗೆ ಕಪ್ಪು ಟ್ರಾವಲ್ ಬ್ಯಾಗೊಂದನ್ನು ಮೆರೆತು ಹೋಗಿರುವ ಬಗ್ಗೆ ತಿಳಿದು ನೇರವಾಗಿ ಹೊರಪೇಟೆ ವೃತ್ತಕ್ಕೆ ಹುಡುಕಿಕೊಂಡು ಹೋಗಿದ್ದು, ಅಲ್ಲಿ ಸರಿಯಾದ ವಿಳಾಸ ತಿಳಿಯದೆ ಸುಮಾರು ಸಮಯದ ನಂತರ ಬ್ಯಾಗಿನೊಂದಿಗೆ ಮನೆಗೆ ಹಿಂದಿರುಗಿದರು. ಎಂದಿನಂತೆ ಮಾರನೆಯ ದಿನವೂ ಯಾರಾದರೂ ಬಂದು ವಿಚಾರಿಸಿದರೆ ಕೊಡುವ ಉದ್ದೇಶದಿಂದ ಇಲ್ಲವೇ ಪೊಲೀಸ್ ಠಾಣೆಗೆ ತಲುಪಿಸುವ ಉದ್ದೇಶದಿಂದ ಬ್ಯಾಗನ್ನು ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡು ಆಟೋ ಓಡಿಸುತ್ತಿದ್ದರು.
ಹಸ್ತಾಂತರ: ಬುಧವಾರ ರಾತ್ರಿ 9 ಗಂಟೆಯ ವೇಳೆಯಲ್ಲಿ ಎಂದಿನಂತೆ ರೇಲ್ವೆ ನಿಲ್ದಾಣದ ಬಳಿ ಬಂದು ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗ ಹೊರಪೇಟೆಯ ಚಂದ್ರು ಎಂಬ ಪರಿಚಯಸ್ಥ ಆಟೋ ಚಾಲಕರೊಬ್ಬರು ಬಹಳ ಚಿಂತಾಕ್ರಾಂತರಾಗಿ ಆಟೋಸ್ಟಾಂಡಿನಲ್ಲಿ ಕುಳಿತಿದ್ದನ್ನು ಕಂಡು ವಿಚಾರಿಸಲಾಗಿ, ನಮ್ಮ ಸಂಬಂಧಿಕರೊಬ್ಬರು ಮಂಗಳವಾರ ರೈಲು ಇಳಿದು ಹೊರಪೇಟೆಗೆ ಆಟೋದಲ್ಲಿ ಬರುವಾಗ ಬ್ಯಾಗ ಕಳೆದುಕೊಂಡು ಬಂದಿದ್ದಾರೆ. ಅದರಲ್ಲಿ ಬೆಲೆಬಾಳುವ ವಸ್ತುಗಳಿದ್ದವು ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ. ತಕ್ಷಣವೇ ತಮ್ಮ ಆಟೋದಲ್ಲಿ ನಿನ್ನೇ ಆಟೋ ಕೇಳಲು ಬಂದ ವ್ಯಕ್ತಿಯೊಬ್ಬರು ಬ್ಯಾಗು ಮರೆತು ಹೋಗಿದ್ದು, ಇದು ನಿಮ್ಮದೆಯೇ ನೋಡಿ ಎಂದು ತಮ್ಮ ಬಳಿ ಇಟ್ಟುಕೊಂಡಿದ್ದ ಬ್ಯಾಗನ್ನು ಚಂದ್ರ ಅವರಿಗೆ ತೋರಿಸಿದ್ದಾರೆ. ತಮ್ಮ ಸಂಬಂಧಿಕರು ಕಳೆದುಕೊಂಡಿರುವ ಬ್ಯಾಗು ಇದೇ ಎಂದು ಪತ್ತೆ ಹೆಚ್ಚಿದ ನಂತರ ಆಟೋ ಚಾಲಕ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಪ್ರತಾಪ್ ಅವರ ಮಾರ್ಗದರ್ಶನದಂತೆ, ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿ.ಎಸ್.ಐ ರಾಧಾಕೃಷ್ಣ ಅವರ ಸಮ್ಮುಖದಲ್ಲಿ ಸಂಬಂಧಪಟ್ಟ ವಾರಸುದಾರರಿಗೆ ಬ್ಯಾಗನ್ನು ಹಸ್ತಾಂತರಿಸಲಾಯಿತು.
ಸದರಿ ಬ್ಯಾಗಿನಲ್ಲಿ ಸುಮಾರು 150 ಗ್ರಾಂನ ಚಿನ್ನಾಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳಿದ್ದು, ಎಲ್ಲವೂ ಸರಿಯಿದೆ ಎಂದು ವಾರಸುದಾರರು ಒಪ್ಪಿಕೊಂಡಿದ್ದಾರೆ. ಮಗಳಿಗೆ ನೀಡಲು ಒಡವೆ ಖರೀದಿಸಿ ತಂದು ಅದನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದ ಚಂದ್ರಶೇಖರ್ ಆರಾಧ್ಯ ಮತ್ತು ಶಾಮಲ ದಂಪತಿ ಆಟೋ ಚಾಲಕ ದೇವಣ್ಣ ಮಾನವೀಯತೆಯನ್ನು ಕೊಂಡಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

