ಸ್ವಿಸ್ ಬ್ಯಾಂಕಿನಲ್ಲಿ ದೇಶದ ಆಸ್ತಿ: ಹಿರಣ್ಣಯ್ಯ
ಚಿಕ್ಕನಾಯಕನಹಳ್ಳಿ: ದೇಶದ ಆಸ್ತಿಯನ್ನು ಸ್ವಿಸ್ ಬ್ಯಾಂಕ್ನಲ್ಲಿಟ್ಟಿರುವುದೇ ನಮ್ಮ ದೇಶದ ರಾಜಕಾರಣಿಗಳ ಸಾಧನೆ ಎಂದು ನಾಟಕರತ್ನ ಮಾಸ್ಟರ್ ಹಿರಣ್ಣಯ್ಯ ನುಡಿದರು.
ಮಂಗಳವಾರ ಅವರು ಕುಪ್ಪೂರು ಗದ್ದಿಗೆ ಮಠದ ಶ್ರೀಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಕುಪ್ಪೂರು ಮರುಳಸಿದ್ದಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ದೇಶದ ಹಿತಾಸಕ್ತಿಗೆ ಪೂರಕವಾಗಿ ಆಡಳಿತ ನಡೆಸುವ ಭರವಸೆಯ ಪ್ರಣಾಳಿಕೆಯೆಂಬ ನಂಬಿಕೆಯ ಮೂಲಕ ಮತಪಡೆದು ವಂಚಿಸುವ ರಾಜಕಾರಣಿಗಳು ಮೂಢನಂಬಿಕೆ ವಿರೋಧಿಸಿ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಇಂತಹ ರಾಜಕಾರಣಿಗಳಿಗೆ ಮಠಗಳ ಬಗ್ಗೆ ಮತ್ತು ಮೂಢನಂಬಿಕೆ ಬಗ್ಗೆ ಮಾತನಾಡುವ ನೈತಿಕತೆಯೆಲ್ಲಿದೆ. ದೇಶದ ಸಂವಿಧಾನದ ಆಶಯದಡಿಯಲ್ಲಿ ಆಡಳಿತ ನಡೆಸುತ್ತೇವೆಂದು ಪ್ರಮಾಣ ವಚನ ಸ್ವೀಕರಿಸುವ ಇವರು ಗದ್ದಿಗೆಯೇರಿದ ಮೇಲೆ ಮಾಡುವುದೇನು ಎಂಬದು ಇಡೀ ದೇಶಕ್ಕೆ ಗೊತ್ತಿದೆ. ಇಷ್ಟಕ್ಕು ಜನಸಾಮಾನ್ಯರ ನಂಬಿಕೆಯನ್ನು ಮೂಢನಂಬಿಕೆ ಎನ್ನುವ ಅಧಿಕಾರವನ್ನು ಇವರಿಗೆ ನೀಡಿದವರು ಯಾರು.ನಂಬಿಕೆಗಳನ್ನು ಮೂಢನಂಬಿಕೆ ಎಂದು ಹೀಯಾಳಿಸುತ್ತಾ ಹೋದರೆ ಕೊನೆಗೆ ನಮ್ಮ ಹುಟ್ಟಿನ ಬಗ್ಗೆಯೇ ಅನುಮಾಗಳೇಳುತ್ತವೆ. ವಿಚಾರವಾದಿಗಳೆಂಬ ವಿಕಾರವಾದಿಗಳು ಮತ್ತು ಮುಖ್ಯಮಂತ್ರಿಗಳು ಮೂಢನಂಬಿಕೆಯೆಂದು ಹಿಂದೂಧರ್ಮದ ಆಚಾರ ವಿಚಾರಗಳನ್ನು ಟೀಕಿಸಿದಷ್ಟು ಸುಲಭವಾಗಿ, ಬೇರೆ ಧರ್ಮದವರ ಆಚಾರ ವಿಚಾರಗಳನ್ನು ಟೀಕಿಸುವ ತಾಕತ್ತಿದೆಯಾ ಎಂದು ಅವರು ಪ್ರಶ್ನಿಸಿದರು.
ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಸ್ವಾಮೀಜಿ, ಶರೀಮಲಯ ಶಾಂತಮುನಿಸ್ವಾಮೀಜಿ, ಕೆಜೆಪಿ ಮುಖಂಡರಾದ ಲೋಕೇಶ್ವರ್, ಕೆಎಂಎಲ್.ಶಾಂತಕುಮಾರ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

