ತುಮಕೂರು

ತೃತೀಯ ರಂಗಕ್ಕೆ ಸಕಾಲ: ನಾಡಗೌಡ

Published On :

ತುಮಕೂರು: ರಾಷ್ಟ್ರದಲ್ಲಿ ತೃತೀಯ ರಂಗ ರಚನೆಯಾಗಲು ಸೂಕ್ತ ಸಂದರ್ಭ ಈಗ ಒದಗಿ ಬಂದಿದೆ ಎಂದು ರಾಜ್ಯ ಜೆಡಿಯು ಅಧ್ಯಕ್ಷ ಡಾ. ಎಂ.ಪಿ.ನಾಡಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಯು ಮುಖಂಡರೊಂದಿಗೆ  ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್-ಬಿಜೆಪಿ ವಿರುದ್ಧ ಕಿಡಿ: ರಾಷ್ಟ್ರ ರಾಜಕಾರಣದಲ್ಲಿ ಭ್ರಷ್ಟಾಚಾರ, ಕೋಮುವಾದ, ಜನವಿರೋದಿ ಆಡಳಿತ ನಡೆಯುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸುಮಾರು 130 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪ್ರಧಾನಮಂತ್ರಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆಮಾಡುವ ಗೊಂದಲದಲ್ಲಿದೆ. ಬಿಜೆಪಿ ಹಿರಿಯ ಮುಖಂಡರನ್ನು ನಿರ್ಲಕ್ಷಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. 17 ವರ್ಷಗಳ ಮೈತ್ರಿಕೂಟದಲ್ಲಿದ್ದ ಎನ್‌ಡಿಎ ಅತಿ ದೂಡ್ಡ ಪಕ್ಷವಾದ ಜೆಡಿಯು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕೀ ಅಭ್ಯರ್ಥಿ ಆಯ್ಕೆ ಮಾಡಿರುವುದು ಬಿಜೆಪಿಯ ನಿಜರೂಪ ಗೊತ್ತಾಗಿದೆ ಎಂದರು.
ಇನ್ನೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹಳಿ ಇಲ್ಲದೆ ರೈಲು ಬಿಡುತ್ತಿದೆ. ದಿನಕ್ಕೊಂದು ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಮುಖ್ಯವಾಗಿ ಸಿಇಟಿ ಗೊಂದಲ ಮುಂದಿನ ಯುವಪೀಳಿಗೆಗೆ ಕೊಡಲಿ ಪೆಟ್ಟುಬಿದ್ದಂತಾಗಿದೆ. ಬಡ ವಿದ್ಯಾರ್ಥಿಗಳ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು ಇದನ್ನು ಅರಿಯದ ಸರ್ಕಾರ ಏಕಾಏಕೀ ತೀರ್ಮಾನಗಳನ್ನು ನೀಡುತ್ತ ಪ್ರಜಾಪ್ರಭುತ್ವ ಮರೆತಂತಿದೆ. ಇವುಗಳನ್ನೆಲ್ಲಾ ನಿವಾರಿಸಲು ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದರು. ಜೆಡಿಯು ಜಿಲ್ಲಾಧ್ಯಕ್ಷ ಕೆ.ಜಿ.ಎಲ್. ರವಿ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಯ್ಯ (ಸಾಗರನಹಳ್ಳಿ), ಸೀತಕಲ್ ಜಯದೇವ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜೆಡಿಯುಗೆ ಸೇರ್ಪಡೆ: ಕೆಜೆಪಿ ಜಿಲ್ಲಾ ಮುಖಂಡ ಇಮ್ತಿಯಾಜ್, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಎಸ್.ಸಿ. ಷಡಕ್ಷರಯ್ಯ ಡಾ.ಎಂ.ಪಿ.ನಾಡಗೌಡ ಸಮ್ಮುಖದಲ್ಲಿ ಜೆಡಿಯು ಸೇರಿದರು. ಜಿಲ್ಲಾ ಜೆಡಿಯು ಅಧ್ಯಕ್ಷ ಕೆ.ಜಿ.ಎಲ್.ರವಿ ಪಕ್ಷ ಧ್ವಜ ನೀಡುವುದರ ಮೂಲಕ ಈ ಇಬ್ಬರನ್ನು ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.