ತುಮಕೂರು

ನೇತ್ರದಾನ

Published On :

ತುಮಕೂರು: ತುಮಕೂರು ಜಿಲ್ಲೆ, ಗುಬ್ಬಿ, ಕಾಯಿಪೇಟೆ ಬೀದಿಯಲ್ಲಿ ವಾಸವಾಗಿದ್ದ ಲೀಲಾವತಿ ಪೂರ್ಣಿಮಾ ಅವರು ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದ್ದಾರೆ. ತುಮಕೂರು ಎಸ್.ಐ.ಟಿ ಬಡಾವಣೆಯಲ್ಲಿ ವಾಸವಾಗಿದ್ದ ಸುನಂದ ಸೋಮಶೇಖರ್ ಕೂಡ ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದ್ದಾರೆ.
ಎನ್.ಎಸ್.ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥ ಎನ್.ಎನ್. ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯ ಹೆಸರಾಂತ ನೇತ್ರತಜ್ಞ ಡಾ. ದಿನೇಶ್‌ಕುಮಾರ್ ಮತ್ತು ಜಿ.ಎಸ್.ಎಸ್. ಐ ಹಾಸ್ಪಿಟಲ್ ನೇತ್ರತಜ್ಞ ಡಾ. ಜಿ.ಎಸ್.ಎಸ್. ಸ್ವಾಮಿ ಅವರ ಸಹಕಾರದೊಂದಿಗೆ ಪಡೆದ ನಾಲ್ಕು ನೇತ್ರಗಳನ್ನು ಬೆಂಗಳೂರು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಇದೇ ರೀತಿ ನೇತ್ರದಾನ ಹಾಗೂ ದೇಹ ದಾನ ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯೂಯಲರಿ ಪ್ಯಾಲೇಸ್, ಬಿ.ಹೆಚ್. ರಸ್ತೆ, ತುಮಕೂರು ದೂ- 0816-2273479 ಸಂಪರ್ಕಿಸಲು ಕೋರಲಾಗಿದೆ.

ಬಿಜೆಪಿಯಿಂದ ಅಜಾತಶತ್ರು ಅಟಲ್ ಜನ್ಮದಿನಾಚರಣೆ
ಚಿಕ್ಕನಾಯಕನಹಳ್ಳಿ: ಭಾರತ ಕಂಡ ಅಪ್ರತಿಮ ದೇಶಭಕ್ತ ಮತ್ತು ರಾಜಕೀಯ ಮುತ್ಸದ್ದಿಯೆಂದರೆ  ವಾಜಪೇಯಿ ಮಾತ್ರ ಎಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ ನುಡಿದರು.
ಅವರು ಬುಧವಾರ ಪಟ್ಟಣದ ಬಾಲಕಿಯರ ವಸತಿ ನಿಲಯದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹತ್ತು ವರ್ಷಗಳ ಹಿಂದೆ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ದೃಷ್ಟಿಕೋನವನ್ನು ಹಾಕಿಕೊಟ್ಟ ಅವರು ತಮ್ಮ ವಿರೋಧಿಗಳನ್ನು ಸಹ ಅಪ್ಪಿತಪ್ಪಿಯು ಕಟುವಾಗಿ ಟೀಕಿಸಿದವರಲ್ಲ. ಪ್ರಪಂಚದ ದೊಡ್ಡಣ್ಣ ಅಮೆರಿಕ ವಿರೋಧದ ನಡುವೆಯು  ಪೋಖ್ರಾನ್ ಅಣುಸ್ಫೋಟ ಮಾಡಿ ರಕ್ಷಣಾ ಕ್ಷೇತ್ರದಲ್ಲಿ ವಿಶ್ವಮಟ್ಟಕ್ಕೆ ಭಾರತ ಕೀರ್ತಿಯನ್ನು ಬೆಳಗಿಸಿದರು. ಅವರ ಕಾಲದ ದೂರಸಂಪರ್ಕ ಕ್ರಾಂತಿ, ದೇಶದ ಉದ್ದಗಲಕ್ಕೂ ಚಾಚಿರುವ ಚತುಷ್ಪಥ ರಸ್ತೆ ಮುಂತಾದವು  ಅವರನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಅಜರಾಮರರನ್ನಾಗಿಸಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.