ತುಮಕೂರು

ಚುನಾವಣೆಗೆ ಸಜ್ಜಾಗುತ್ತಿದೆ ಜಿಲ್ಲಾಡಳಿತ

Published On :

ತುಮಕೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಚುನಾವಣಾ ಆಯೋಗದ ಸೂಚಿಸಿದ ಬೆನ್ನಲ್ಲೇ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.
ತುಮಕೂರು ನಗರಸಭೆಯ 35 ವಾರ್ಡ್, ಚಿ.ನಾ. ಹಳ್ಳಿ  ಪುರಸಭೆಯ 23 ವಾರ್ಡ್, ಪಾವಗಡ ಪುರಸಭೆಯ 23  ವಾರ್ಡ್, ಕುಣಿಗಲ್ ಪುರಸಭೆಯ 23 ವಾರ್ಡ್, ಗುಬ್ಬಿ ಪಟ್ಟಣ ಪಂಚಾಯಿತಿಯ 17 ವಾರ್ಡ್, ಮಧುಗಿರಿ ಪುರಸಭೆಯ 23 ವಾರ್ಡ್, ಶಿರಾ ನಗರಸಭೆಯ 31 ವಾರ್ಡ್, ಕೊರಟಗೆರೆ ಪಟ್ಟಣ ಪಂಚಾಯಿತಿಯ 14 ವಾರ್ಡ್, ತುರುವೇಕೆರೆ ಪ. ಪಂಚಾಯಿತಿಯ 14 ವಾರ್ಡ್, ತಿಪಟೂರು ನಗರಸಭೆಯ 31 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ.  
ಚುನಾವಣಾ ವೇಳಾಪಟ್ಟಿಯಂತೆ ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಸ್ಥಳಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿ ಜಿಲ್ಲಾಧಿಕಾರಿ ಆರ್. ಕೆ ರಾಜು ಅವರು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ 3 ನಗರಸಭೆ, 4 ಪುರಸಭೆ ಹಾಗೂ 3 ಪ.ಪಂ.ಗೆ ಚುನಾವಣೆ ನಡೆಯುವ ಬೆನ್ನಲ್ಲೇ ಚುನಾವಣಾ ಪ್ರಕ್ರಿಯೆ ನಡೆಯುವ ಸ್ಥಳಗಳನ್ನು ಜಿಲ್ಲಾಧಿಕಾರಿಗಳು ನಮೂದಿಸಿದ್ದಾರೆ.
ತುಮಕೂರು ನಗರಸಭೆ
ವಾರ್ಡ್ ಸಂಖ್ಯೆ 1ರಿಂದ 7 ರವರೆಗೆ ಕಂದಾಯ ಶಾಖೆ  ಕಟ್ಟಡ, ನಗರಸಭೆ, ತುಮಕೂರು. ವಾರ್ಡ್ ಸಂಖ್ಯೆ 8 ರಿಂದ 14 ನಗರಸಭೆ ಅಧ್ಯಕ್ಷರ ಕೊಠಡಿ ಪಕ್ಕದ ಕೊಠಡಿ, ವಾರ್ಡ್ ಸಂಖ್ಯೆ 15 ರಿಂದ 21 ಎಸ್‌ಜೆಎಸ್‌ಆರ್‌ವೈ ಕಚೇರಿ, ನಗರಸಭೆ, ವಾರ್ಡ್ ಸಂಖ್ಯೆ 22 ರಿಂದ 28 ತಾಂತ್ರಿಕ ಶಾಖೆಯ ಕಟ್ಟಡ(ಎಡಿಬಿ) ನಗರಸಭೆ ತುಮಕೂರು. ವಾರ್ಡ್ ಸಂಖ್ಯೆ 29 ರಿಂದ 35 ನಗರಸಭೆ ಕಟ್ಟಡ , ಮೊದಲನೇ ಮಹಡಿ, ನಗರಸಭೆ ತುಮಕೂರು.
ತಿಪಟೂರು ನಗರಸಭೆ
ವಾರ್ಡ್ ಸಂಖ್ಯೆ 1ರಿಂದ 8 ಕೊಠಡಿ ಸಂಖ್ಯೆ 1, 9 ರಿಂದ 16 ಕೊಠಡಿ ಸಂಖ್ಯೆ 2, 17 ರಿಂದ 24 ವಾರ್ಡ್ ಸಂಖ್ಯೆ 3, 25 ರಿಂದ 31 ಕೊಠಡಿ ಸಂಖ್ಯೆ 4 ಸಾಮರ್ಥ್ಯ ಸೌಧ, ಹಾಸನ ಸರ್ಕಲ್, ತಿಪಟೂರು ನಗರಸಭೆ ಶಿರಾ ವಾರ್ಡ್ ಸಂಖ್ಯೆ 1 ರಿಂದ 8 ನಗರಸಭೆ ಸಭಾಂಗಣ, ಮೊದಲನೇ ಮಹಡಿ, ಶಿರಾ, ವಾರ್ಡ್ ಸಂಖ್ಯೆ 9 ರಿಂದ 16 ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆ, ಮುಖ್ಯ ರಸ್ತೆ ಸಿರಾ. ವಾರ್ಡ್ ಸಂಖ್ಯೆ 17 ರಿಂದ 24 ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೋಕೋಪಯೋಗಿ ಮತ್ತು ಒಳನಾಡು ಜಲ ಸಾರಿಗೆ ಇಲಾಖೆ. ವಾರ್ಡ್ 25 ರಿಂದ 31 ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ.
ಕುಣಿಗಲ್ ಪುರಸಭೆ
ವಾರ್ಡ್ 1 ರಿಂದ 8 ಸಹಾಯಕ ಕೃಷಿ ನಿರ್ದೇಶಕರ ಕಚೇರಿ, 9 ರಿಂದ 16 ಬಿಆರ್‌ಸಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಾರ್ಡ್ 17ರಿಂದ 23 ಪುರಸಭೆ ಕಾರ್ಯಾಲಯ
ಮಧುಗಿರಿ ಪುರಸಭೆ
 ವಾರ್ಡ್ 1ರಿಂದ 8 ಪುರಸಭೆ ಕಾರ್ಯಾಲಯ, ವಾರ್ಡ್ 9 ರಿಂದ 15 ಆರೋಗ್ಯ ನಿರೀಕ್ಷಕರ ಕೊಠಡಿ,16 ರಿಂದ 23  ಮುಖ್ಯಾಧಿಕಾರಿಗಳ ಕೊಠಡಿ.
ಪಾವಗಡ ಪುರಸಭೆ
ವಾರ್ಡ್ 1 ರಿಂದ 8 ಕೊಠಡಿ ಸಂಖ್ಯೆ 1, ವಾರ್ಡ್ 9 ರಿಂದ 16, ವಾರ್ಡ್ ಕೊಠಡಿ ಸಂಖ್ಯೆ 2, ಕಿರಿಯ ಅಭಿಯಂತರರ ಕೊಠಡಿ, ಪುರಸಭೆ. ವಾರ್ಡ್ 17 ರಿಂದ 23 ಕೊಠಡಿ ಸಂಖ್ಯೆ 3 ವಿ.ಪಿ. ಕೊಠಡಿ, ಪುರಸಭೆ.
ಚಿ.ನಾ ಹಳ್ಳಿ ಪುರಸಭೆ
ವಾರ್ಡ್ ಸಂಖ್ಯೆ 1 ರಿಂದ 7 ವಲಯ ಅರಣ್ಯಾಧಿಕಾರಿಗಳ ಕಚೇರಿ, ವಾರ್ಡ್ 8 ರಿಂದ 15 ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಕಚೇರಿ, ವಾರ್ಡ್ 16 ರಿಂದ 23 ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿ, ಪುರಸಭೆ.
ಗುಬ್ಬಿ ಪ.ಪಂ
ವಾರ್ಡ್ 1 ರಿಂದ 9 ಕೊಠಡಿ ಸಂಖ್ಯೆ 1 ನೆಲ ಮಹಡಿ, ಪ.ಪಂ. ಕಾರ್ಯಾಲಯ, ವಾರ್ಡ್ 10 ರಿಂದ 17 ಕೊಠಡಿ ಸಂಖ್ಯೆ 2, 1 ನೇ ಮಹಡಿ, ಪ.ಪಂ.
ತುರುವೇಕೆರೆ ಪ.ಪಂ
ವಾರ್ಡ್ ಸಂಖ್ಯೆ 1 ರಿಂದ 7 ಕೊಠಡಿ ಸಂಖ್ಯೆ 1, ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿ, ನೆಲಮಹಡಿ, ಪ.ಪಂ., ವಾರ್ಡ್ 8 ರಿಂದ 14, ಕೊಠಡಿ ಸಂಖ್ಯೆ 2, ಸದಸ್ಯರ ಕೊಠಡಿ , ನೆಲ ಮಹಡಿ,
ಕೊರಟಗೆರೆ ಪ.ಪಂ
 ವಾರ್ಡ್ 1 ರಿಂದ 7 ಸಭಾ ಕೊಠಡಿ, 1ನೇ ಅಂತಸ್ತು, ಪ.ಪಂಚಾಯತ್, ವಾರ್ಡ್ 8 ರಿಂದ 14 ಕೊಠಡಿ ಸಂಖ್ಯೆ 1, 1ನೇ ಅಂತಸ್ತು, ಪ.ಪಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.