ತುಮಕೂರು

ಸಾಂಸ್ಕೃತಿಕ ಚಲನ ಚಿತ್ರೋತ್ಸವಕ್ಕೆ ಚಾಲನೆ

Published On :

ಶಿರಾ: ಪ್ರಸಕ್ತ ಸಾಲಿನ ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ ಚಲನ ಚಿತ್ರೋತ್ಸವಕ್ಕೆ ಸಪ್ತಗಿರಿ ಚಿತ್ರಮಂದಿರದಲ್ಲಿ ತಹಸೀಲ್ದಾರ್ ಕಾಂತರಾಜು  ಚಾಲನೆ ನೀಡಿದರು.
ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂತರಾಜು ಅವರು ಹಿಂದಿನ ಕಾಲದಲ್ಲಿ ಹಿರಿಯರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ನೀತಿ ಕತೆಗಳನ್ನು ಹೇಳುವ ಮೂಲಕ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿದ್ದರು. ಇಂದು ಮನೆಯಲ್ಲಿ ಹಿರಿಯರೂ ಇಲ್ಲ ಹಾಗೂ ಕಥೆಗಳನ್ನು ಕೇಳುವ ತಾಳ್ಮೆಯೂ ಇಲ್ಲ. ಆದ್ದರಿಂದ ಸರ್ಕಾರ ಮಕ್ಕಳಿಗೆ ಅನುಕೂಲವಾಗುವಂತೆ ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಮಾನವೀಯ ಮೌಲ್ಯ ಬಿಂಬಿಸುವ ಇಂತಹ ಚಲನಚಿತ್ರ ಗಳನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜಕುಮಾರ್ ಮಾತನಾಡಿ ಸರ್ಕಾರ ಮಕ್ಕಳಿಗೆ ಅನುಕೂಲವಾಗುವಂತೆ ಫೆ. 28ರವರೆಗೆ ತಾಲೂಕಿನ 6 ಸಾವಿರ ಮಕ್ಕಳಿಗೆ ಆದರ್ಶನೀಯ ಮೌಲ್ಯ, ಮನರಂಜನೆ ನೀಡಲು ಮುಂದಾಗಿದೆ ಎಂದರು.
ರಾಷ್ಟ್ರೀಯ ಮೌಲ್ಯಗಳನ್ನು ಬಿಂಬಿಸುವ ವೀರಾಂಜನೇಯ ಹಾಗೂ ಚಿಲಿಪಿಲಿ ಹಕ್ಕಿಗಳು ಎಂಬ ಎರಡು ಚಲನಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿರುವುದು ವಿದ್ಯಾರ್ಥಿಗಳ ಭಾಗ್ಯ. ಚಿತ್ರಮಂದಿರ ಮಾಲಿಕರು ಮಕ್ಕಳಿಗೆ ಶೌಚಾಲಯ ಹಾಗೂ ಕುಡಿಯುವ ನೀರು ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಪುಟ್ಟನರಸಯ್ಯ, ರಾಜಸ್ವ ನಿರೀಕ್ಷಕ ಜುಂಜೇಗೌಡ, ಶಿಕ್ಷಣ ಸಂಯೋಜಕ ಪಾಟೀಲ್ ಪ್ರಭುವೀರ್, ಸತ್ಯನಾರಾಯಣ, ನರಸಿಂಹಯ್ಯ, ಚಿತ್ರಮಂದಿರ ವ್ಯವಸ್ಥಾಪಕ ಹನುಮಂತರಾಯಪ್ಪ, ಕರಿಯಣ್ಣ ಮತ್ತಿತರರು ಹಾಜರಿದ್ದರು.

ಮಹಿಳೆಯರು ತಮ್ಮ ಸಮಸ್ಯೆ ನಿವಾರಿಸಿಕೊಳ್ಳುವಲ್ಲಿ ಧೈರ್ಯ ತೋರಬೇಕು
ಪಾವಗಡ: ಮಹಿಳೆಯರು ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಧೈರ್ಯ ತೋರಬೇಕು ಎಂದು ಗಡಿನಾಡು ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಚಿತ್ತಗಾನಹಳ್ಳಿ ಚಂದ್ರಶೇಖರ್ ಹೇಳಿದರು.  ತಾಲೂಕಿನ ಮಹಿಳಾ ಸಾಂತ್ವನ ಕೇಂದ್ರ  ವತಿಯಿಂದ ಚಿತ್ತಗಾನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳೆಯರ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣು ಸಮಾಜದ ಕಣ್ಣು ಎಂಬ ವಾಕ್ಯದಡಿ ಮಹಿಳೆಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಧೈರ್ಯ ಹಾಗೂ ಆತ್ಮ ಸ್ಥೈರ್ಯದಿಂದ ಮುನ್ನುಗ್ಗಬೇಕೆಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.