ತುಮಕೂರು

ಕೈವಾರ ತಾತಯ್ಯನ ಚಿಂತನೆಗಳ ಅಧ್ಯಯನ ಇಂದಿನ ಅವಶ್ಯಕತೆ: ಜಯರಾಂ ಅಭಿಮತ

Published On :

ತುಮಕೂರು: ಕೈವಾರ ತಾತಯ್ಯನವರೆಂದೇ ಪ್ರಸಿದ್ಧರಾದ ಕೈವಾರ ಕಾಲಜ್ಞಾನಿ ನಾರೇಯಣರವರ ತಾತ್ವಿಕ ಚಿಂತನೆಗಳ ಬಗ್ಗೆ ಅಧ್ಯಯನ ನಡೆಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಆರ್. ಜಯರಾಮ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ  ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ  ಹಾಗೂ ಸಂಶೋಧನ ವಿಭಾಗವು ಸೋಮವಾರ  ಆಯೋಜಿಸಿದ್ದ ಕೈವಾರ ಕಾಲಜ್ಞಾನಿ ನಾರೇಯಣರವರ ತಾತ್ವಿಕ ವಿಚಾರಗಳು ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಧ್ಯಾನಯೋಗಿ ಹಾಗೂ ರಾಜಯೋಗಿಗಳಾಗಿದ್ದ ಕೈವಾರ ತಾತಯ್ಯನವರು ಬೋಧಿಸಿದ ವಿಚಾರಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದರು.
ಸತತ ಪರಿಶ್ರಮದಿಂದ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿಕೊಂಡಿದ್ದ ಕೈವಾರ ನಾರೇಯಣರು ಆನಂದದ ಉತ್ಕೃಷ್ಟ ಸ್ಥಿತಿಯನ್ನು ತಲುಪಿದವರಾಗಿದ್ದರು. ತಮ್ಮ ಮೌಲಿಕ ಕೃತಿಗಳ ಮೂಲಕ ಅಪರೂಪದ ಚಿಂತನೆಗಳನ್ನು ಸಮಾಜಕ್ಕೆ ಉಣಬಡಿಸಿದ ವಿಶಿಷ್ಟ ವ್ಯಕ್ತಿತ್ವ ಅವರದಾಗಿತ್ತು ಎಂದು ವಿವರಿಸಿದರು.
ಆಧ್ಯಾತ್ಮದ ಅರಿವು ಮೂಡಿಸಬೇಕಿದೆ: ಸಮ್ಮೇಳನವನ್ನು ಉದ್ಘಾಟಿಸಿದ ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿಯವರು, ಕೈವಾರ ನಾರೇಯಣರ ವಿಚಾರಗಳು ಸಮಾಜದ ಪ್ರತಿಯೊಬ್ಬರನ್ನೂ ತಲುಪುವ ಅವಶ್ಯಕತೆಯಿದೆ. ಜನರಲ್ಲಿ ಆಧ್ಯಾತ್ಮದ ಅರಿವು ಮೂಡಿಸಬೇಕಿದೆ ಎಂದರು.
ಸಮ್ಮೇಳನದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಪ್ರಕಟಿಸಿದ ಕೃತಿಯನ್ನು ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಎನ್. ಲಕ್ಷ್ಮೀಕಾಂತ ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತ ಡಾ. ಬಾಬು ಕೃಷ್ಣಮೂರ್ತಿ, ತುಮಕೂರು ವಿ.ವಿ. ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಡಾ. ಎಂ. ಜಯರಾಮು, ಹಣಕಾಸು ಅಧಿಕಾರಿ ಬಿ. ಕೆ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಹೇಮಲತಾ ಜಯರಾಜ್ ಸ್ವಾಗತಿಸಿದರು. ಡಾ. ಜಿ. ಬಸವರಾಜ ಪ್ರಾರ್ಥಿಸಿದರು. ಡಾ. ಮೀನಾಕ್ಷಿ ಖಂಡಿಮಠ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಕೈವಾರ ತಾತಯ್ಯನವರ ತಾತ್ವಿಕ ಚಿಂತನೆಗಳ ಕುರಿತು ವಿವಿಧ ವಿಷಯ ತಜ್‌ಞರು ಪ್ರಬಂಧ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.