ತುಮಕೂರು

ಬೆಸ್ಕಾಂ ಸಿಬ್ಬಂದಿ ಸುರಕ್ಷತಾ ಕ್ರಮ ಅನುಸರಿಸಲಿ

Published On :

ತಿಪಟೂರು: ಬೆಸ್ಕಾಂ ನೌಕರರು ಇಲಾಖೆಯ ಕಾಮಗಾರಿ ಅಥವಾ ರಿಪೇರಿಯಲ್ಲಿ ತೊಡಗುವಾಗಲಿ ತಮ್ಮ ವೈಯಕ್ತಿಕ ಹಾಗೂ ಇಲಾಖೆ ಸುರಕ್ಷತೆ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಾಗಿ ಬೆಸ್ಕಾಂ ಜಾರಿಗೆ ತಂದಿರುವ ಸುರಕ್ಷತಾ ಕ್ರಮಗಳು ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಬೇಕು ಎಂದು ತಿಪಟೂರು ಉಪವಿಭಾಗದ ಬೆಸ್ಕಾ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಉಮಾಶಂಕರ್ ಕಿವಿಮಾತು ಹೇಳಿದ್ದಾರೆ.
ನಗರದ ಬೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿ ಆವರಣದವಲ್ಲಿ ಹಮ್ಮಿಕೊಂಡಿದ್ದ ಇಲಾಖಾ ನೌಕರರ ಸುರಕ್ಷತಾ ಸಭೆಯಲ್ಲಿ ಮಾತನಾಡಿದ ಅವರು, ಬೆಸ್ಕಾಂನ ಯಾವುದೇ  ಎಂಜಿನಿಯರುಗಳಾಲಿ, ನೌಕರರಾಗಲಿ ಅಥವಾ ಲೈನ್ ಮ್ಯಾನ್‌ಗಳಾಗಲಿ ಬೆಸ್ಕಾಂಗೆ ಸಂಬಂಧಪಟ್ಟ ಯಾವುದೇ ಕಾಮಗಾರಿ, ರಿಪೇರಿ ಕಾರ್ಯ ಕೈಗೊಳ್ಳುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಕಂಬ, ಟಿಸಿ, ರಿಪೇರಿ-ಜೋಡಿಸುವಿಕೆ ಸೇರಿದಂತೆ ಇನ್ನಿತರೆ ಕೆಲಸಗಳನ್ನು ನೌಕರರು ಕೈಗೊಳ್ಳುವಾಗ ಸುರಕ್ಷಿತಾ ಅಂಗವಾಗಿ ಬೆಲ್ಟ್, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು.
ಕೆಪಿಟಿಸಿಎಲ್ ಎಂಜಿನಿಯರ್ ಕರಿಯಪ್ಪ ಮಾತನಾಡಿ, ಬೆಸ್ಕಾಂ ನೌಕರರು ದಿನನಿತ್ಯ ಉಪಯೋಗಿಸುವ ಏಣಿ, ಶೂ ಮತ್ತಿತರೆ ಉಪಕರಣಗಳು ಸುಸ್ತಿಯಲ್ಲಿರಬೇಕಲ್ಲದೆ, ಕೆಲಸದಲ್ಲಿ ಹೆಚ್ಚು ಗಮನ ನೀಡುವ ಮೂಲಕ ನೌಕರರು ಹೆಚ್ಚಿನ ಸುರಕ್ಷತೆ ಜೊತೆಗೆ ಮೇಲಾಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯನಿರತರಾಗಿರಬೇಕೆಂದು ಹತ್ತು ಹಲವು ಉದಾಹರಣೆ ಸಹಿತನೌಕರರಿಗೆ ಹಿತವಚನ ಹೇಳಿದರು.
ನಾರಾಯಣಪ್ಪ, ತೇಜಮೂರ್ತಿ, ಲಿಂಗದೇವರು, ಬೆಸ್ಕಾಂ ಕಲ್ಯಾಣ ಸಂಸ್ಥೆ ಸಿಇಸಿ ಸದಸ್ಯ ರಾಜಶೇಖರ್, ಚಿ.ನಾ.ಹಳ್ಳಿ ನೋಡಲ್ ಅಧಿಕಾರಿ ಚಿದಾನಂದಶೆಟ್ಟಿ, ತಿಪಟೂರು ನೋಡಲ್ ಅಧಿಕಾರಿ ಅಂಬಿಕಾ ಮಾತನಾಡಿದರು. ಶಾಖಾಧಿಕಾರಿಗಳಾದ ಚಂದ್ರಶೇಖರ್, ಬಸವರಾಜು, ವಿದ್ಯುತ್ ಗುತ್ತಿಗೆದಾರರು, ತಿಪಟೂರು ಉಪವಿಭಾಗದ ಶಾಖೆಯ ಶಾಖಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.