ಗುಬ್ಬಿ ಪಪಂ: 67 ಅಭ್ಯರ್ಥಿಗಳು
ಗುಬ್ಬಿ: ಪಟ್ಟಣ ಪಂಚಾಯಿತಿ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಇಂದು 5 ಮಂದಿ ಅಭ್ಯರ್ಥಿಗಳು
ತಮ್ಮ ನಾಮಪತ್ರ ಹಿಂಪಡೆದ್ದಾರೆ. ಅಂತಿಮವಾಗಿ ಕಣದಲ್ಲಿ 67 ಅಭ್ಯರ್ಥಿಗಳು ಉಳಿದಿದ್ದಾರೆ.
ಕಾಂಗ್ರೆಸ್ ಸೇರ್ಪಡೆ
ಪಾವಗಡ: ಗ್ರಾಪಂ ಅಧ್ಯಕ್ಷೆ ಪುಷ್ಪಾ ಸದಾಶಿವರೆಡ್ಡಿ ಮುಖಂಡರಾದ ಅಶ್ವತ್ಥಪ್ಪ, ತಿಮ್ಮಾರೆಡ್ಡಿ ಮಾಜಿ ತಾಪಂ ಸದಸ್ಯ ರಾಮಾಂಜಿನಪ್ಪ ನೇತ್ರತ್ವದಲ್ಲಿ ಜೆಡಿಎಸ್ ಮುಖಂಡರಾದ ವಿರಪಸಮುದ್ರ ಗ್ರಾಪಂ ವ್ಯಾಪ್ತಿಯ ಮಾಚರಾಜನಹಳ್ಳಿ ಸಂಜೀವರೆಡ್ಡಿ ಹಾಗೂ ಬಿಜೆಪಿ ಮುಖಂಡ ಕರಿಯಪ್ಪ ಹಾಗೂ ಬೆಂಬಲಿಗರು ಬುಧವಾರ ಕಾಂಗ್ರೆಸ್ ಮುಖಂಡ ಮಾನಂ ವೆಂಕಟಸ್ವಾಮಿ ನಿವಾಸದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಮುಖಂಡರಾದ ಗಂಗರಾಮಯ್ಯ, ವಸಂತ್ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಹಿಳೆ ಶವ ಪತ್ತೆ
ಚಿಕ್ಕನಾಯಕನಹಳ್ಳಿ: ಪಟ್ಟಣದ ಸಮೀಪವಿರುವ ಜೋಗಿಹಳ್ಳಿ ಬಳಿ ತೋಟದ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಸುಮಾರು 5 ಎತ್ತರವಿರುವ 40 ರಿಂದ 45 ವರ್ಷ ಪ್ರಾಯದ ಹೆಂಗಸಿನ ಶವ ಅರೆಬೆಂದ ಸ್ಥಿತಿಯಲ್ಲಿ ದೊರೆತಿದೆ. ಜೋಗಿಹಳ್ಳಿ ಗ್ರಾಮದ ನಂಜುಂಡಯ್ಯ ತನ್ನ ತೋಟದ ಬಳಿ ಹೋದಾಗ ಶವ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ದೇಹದ ಬಹುತೇಕ ಭಾಗ ಸುಟ್ಟಿರುವುದರಿಂದ ಶವ ಗುರುತು ಕಂಡುಹಿಡಿಯುವುದು ತಲೆ ನೋವಾಗಿದೆ. ಶವವನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಮೃತ ಮಹಿಳೆ ಗಿಳಿ ಹಸಿರು ಬಣ್ಣದ ಸೀರೆ ಮತ್ತು ನೇರಳೆ ಬಣ್ಣದ ರವಿಕೆ ಧರಿಸಿದ್ದಾಳೆ. ಕತ್ತಿನಲ್ಲಿ ಬಂಗಾರದಂತಹ ಲೋಹದ ಸರ ಹಾಕಿದ್ದು, ಅದು ತುಂಡಾಗಿದ್ದು ಸ್ವಲ್ಪಭಾಗ ಶವದ ಬಳಿ ದೊರೆತಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ಪ್ರಭಾಕರ್, ಪಿಎಸ್ಐ ಗೋವಿಂದರಾಜು ಭೇಟಿ ನೀಡಿದ್ದರು.
ವಿದ್ಯಾರ್ಥಿನಿ ನಾಪತ್ತೆ
ತಿಪಟೂರು: ತಾಲೂಕಿನ ಅರಳಗುಪ್ಪೆ ಗ್ರಾಮದ ಬಸವರಾಜು ಎಂಬುವರ ಪುತ್ರಿ 9ನೇ ತರಗತಿ ವಿದ್ಯಾರ್ಥಿನಿ ಪೂಜಾ ಮನೆಯಿಂದ ಹೊರ ಹೋದವಳು ವಾಪಸ್ ಮನಗೆ ಬಂದಿರುವುದಿಲ್ಲ. ಸುಮಾರು 15ವರ್ಷ ವಯಸ್ಸಾಗಿದ್ದು, ದುಂಡುಮುಖ, ನೀಳ ಶರೀರ, ಎಣ್ಣೆಗೆಂಪು ಬಣ್ಣ, 4.5 ಅಡಿ ಉದ್ದ ಇದ್ದಾಳೆ. ಮನೆಯಿಂದ ಹೋಗುವಾಗ ಕಂದು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಮಾಹಿತಿ ಸಿಕ್ಕಲ್ಲಿ ಕೆ.ಬಿ. ಕ್ರಾಸ್ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

