ಚಿ.ನಾ.ಹಳ್ಳಿ ಪುರಸಭೆ: ಕಣದಲ್ಲಿ 72 ಮಂದಿ
ಚಿಕ್ಕನಾಯಕನಹಳ್ಳಿ: ಮಾರ್ಚ್ 7 ರಂದು ನಡೆಯಲಿರುವ ಪುರಸಭೆ ಚುನಾವಣೆಗೆ 72 ಮಂದಿ ಕಣದಲ್ಲಿ ಉಳಿದಿದ್ದಾರೆ. ನಾಮ ಪತ್ರ ಹಿಂಪಡೆಯುವ ಅಂತಿಮ ದಿನವಾದ ಬುಧವಾರ ಅರ್ಜಿಸಲ್ಲಸಿದ್ದ 82 ಜನರಲ್ಲಿ 10 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು,ಅಂತಿಮವಾಗಿ ಕಣದಲ್ಲಿ 72 ಮಂದಿ ಉಮೇದುವಾರರು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆದ 10 ಮಂದಿಯಲ್ಲಿ ಎರಡು ಕೆಜೆಪಿ ಪಕ್ಷದವರಾಗಿದ್ದು, ಉಳಿದ 8 ಜನ ಪಕ್ಷೇತರರಾಗಿದ್ದಾರೆ. ವಾರ್ಡ್ 1ರಲ್ಲಿ 2 ನಾಮಪತ್ರ ಹಿಂಪಡೆದಿದ್ದರೆ, 5ರಲ್ಲಿ 1 ,11ರಲ್ಲಿ 1,12ರಲ್ಲಿ 2,13ರಲ್ಲಿ 1,15ರಲ್ಲಿ 1,16ರಲ್ಲಿ2 ನಾಮಪತ್ರ ಹಿಂಪಡೆಯಲಾಗಿದೆ. ಕಣದಲ್ಲಿ 72 ಮಂದಿ ಹುರಿಯಾಳುಗಳು ಉಳಿದಿದ್ದಾರೆ ಎಂದು ತಹಶೀಲ್ದಾರ್ ಕೃಷ್ಣಸ್ವಾಮಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

