ಅಜ್ಞಾನದಿಂದ ವಿಜ್ಞಾನದೆಡೆಗೆ ಕಾರ್ಯಕ್ರಮ
ಶಿರಾ: ಪಟ್ಟಣದ ರಂಗನಾಥ ನಗರ ಬಡಾವಣೆಯ ಶ್ರೀ ನವೋದಯ ಯುವ ವೇದಿಕೆ ವತಿಯಿಂದ ಹುಲಿಕಲ್ ನಟರಾಜ್ ಅವರಿಂದ ಅಜ್ಞಾನದಿಂದ ವಿಜ್ಞಾನ ದೆಡೆಗೆ ಎನ್ನುವ ಪವಾಡಗಳ ಅನಾವರಣ ಕಾರ್ಯಕ್ರಮವು ಜನವರಿ 27 ರ ಭಾನುವಾರ ಏರ್ಪಡಿಸಲಾಗಿದೆ.
ಇದೇ ಕಾರ್ಯಕ್ರಮದಲ್ಲಿ ನವೋದಯ ಯುವ ವೇದಿಕೆಯ ಲಾಂಛನವನ್ನು ನಗರಸಭೆ ಅಧ್ಯಕ್ಷ ಟಿ.ರಘು ಬಿಡುಗಡೆ ಮಾಡುವರು. ನವೋದಯ ಯುವ ವೇದಿಕೆಯ ಅಧ್ಯಕ್ಷ ಜಯರಾಮಯ್ಯ ಅಧ್ಯಕ್ಷತೆ ವಹಿಸುವರು.
ಕಾಂಗೈ ಯುವ ಮುಖಂಡ ಎಸ್.ಎಲ್. ರಂಗನಾಥ್ ಕಾರ್ಯಕ್ರಮ ಉದ್ಘಾಟಿಸುವರು. ಚಿಂತಕ ಕೆ.ದೊರೈರಾಜ್, ಕೃಷ್ಣಪ್ಪ, ದಸಂಸ ಮುಖಂಡರಾದ ಗಿರಿಯಪ್ಪ, ಕೆ.ವಿಶ್ವನಾಥ್, ಕ.ಸಾ.ಪ. ಅಧ್ಯಕ್ಷ ವೈ.ನರೇಶ್ ಬಾಬು, ನಗರಸಭೆ ಸದಸ್ಯ ಕೆ.ಮಂಜುನಾಥ್, ರಾಷ್ಟ್ರಪ್ರಶಸ್ತಿ ವಿಜೇತ ರೇವಣ್ಣ ಸಿದ್ದೇಶ್ವರ, ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯೆಣ್ಣೆಕಟ್ಟೆ ಮತ್ತಿತರರು ಭಾಗವಹಿಸುವರು.
ಪುಸ್ತಕ ಬಿಡುಗಡೆ: ಯುವ ಸಾಹಿತಿ ಎಸ್.ಎಲ್.ರಮೇಶ್ ವಿರಚಿತ ಕಾಮಧೇನು ಎನ್ನುವ ಸಾಮಾಜಿಕ ನಾಟಕ ಕಥಾ ಸಂಕಲನವನ್ನು ಇದೇ ಸಂದರ್ಭಲ್ಲಿ ಬಿಡುಗಡೆ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

