ಇಂದು ಮಹಾಯೋಗಿ ವೇಮನ ಜಯಂತ್ಯುತ್ಸವ
ಪಾವಗಡ: ವೆಂಕಟಾಪುರ ವ್ಯಾಪ್ತಿಯ ರೆಡ್ಡಿ ಸಮುದಾಯ ವತಿಯಿಂದ ಜ.26ರಂದು ಶ್ರೀ ಮಹಾಯೋಗಿ ವೇಮನ ಜಯಂತ್ಯುತ್ಸವವನ್ನು ಮಧ್ಯಾಹ್ನ 2ಗಂಟೆಗೆ ದೊಮ್ಮತಮರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ವೆಂಕಟಾಪುರ ವ್ಯಾಪ್ತಿಯ ದೊಮ್ಮತಮರಿ, ಗುಮ್ಮಘಟ್ಟ, ಶ್ರೀನಿವಾಸಪುರ, ನೇರಳೇಕುಂಟೆ, ಮಾಧವರಾಯನಪಾಳ್ಯ, ಬೋಡರಹಳ್ಳಿ, ಮುರಾರಾಯನಹಳ್ಳಿ, ಕನಕಾಪುರ, ಅಕ್ಕಮ್ಮನಹಳ್ಳಿ, ಬಸವನಹಳ್ಳಿ, ಗೌಡೇಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೆಡ್ಡಿ ಜನಾಂಗದವರು ವೇಮನ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಿದ್ದು ಎರೇ ಹೊಸಹಳ್ಳಿ, ವೇಮನಾನಂದಾರ್ಯಸ್ವಾಮಿಗಳು ಹಾಗೂ ನಾದಾನಂದಾರ್ಯಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆ ಸ್ವಾತಂತ್ಯ ಹೋರಾಟಗಾರ ವೆಂಕಟಾಪುರ ವಿ.ಎನ್ ರೆಡ್ಡಿ ಹಾಗೂ ಅಧ್ಯಕ್ಷತೆಯನ್ನು ಬೆಂಗಳೂರು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಎಸ್.ಕೆ. ವೆಂಕಟರೆಡ್ಡಿ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮುಖಂಡ ಎನ್. ತಿಮ್ಮಾರೆಡ್ಡಿ, ಕೆಎಂಎಫ್ ಅಧ್ಯಕ್ಷ ಸೋಮಶೇಖರ್ರೆಡ್ಡಿ, ಶಾಸಕ ರಾಮಲಿಂಗರೆಡ್ಡಿ, ಆದಾಯ ತೆರಿಗೆ ಕಮಿಷನರ್ ವಳ್ಳೂರು ಮುರಳೀಮೋಹನ್ರೆಡ್ಡಿ, ಮಡಕಶಿರಾ ಮಾಜಿ ಶಾಸಕ ವೈ.ಟಿ. ಪ್ರಭಾಕರ್ ರೆಡ್ಡಿ, ಜ್ಯೋತಿರೆಡ್ಡಿ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ರೆಡ್ಡಿ ಸಮುದಾಯ ಪರವಾಗಿ ಸಂಘಟನಕಾರ ಬಾಲಾಜಿ ಮನವಿ ಮಾಡಿದ್ದಾರೆ.
ಪಂಪು ಮೋಟರ್ ಅಳವಡಿಸದೆ ತೊಂದರೆ
ಪಾವಗಡ: ಕೋಟಗುಡ್ಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಳವೆ ಬಾವಿ ಕೊರೆಸಿ ಸುಮಾರು 6ತಿಂಗಳಾಗಿದ್ದರೂ ಕೊಳವೆ ಬಾವಿಗೆ ಪಂಪು ಮೋಟರ್ ಅಳವಡಿಸದ ಕಾರಣ ನೀರಿನ ಸಮಸ್ಯೆ ತೀವ್ರವಾಗಿ ಬಿಸಿಯೂಟ ಸೇರಿದಂತೆ ಕಾಲೇಜು ಮಂದೆ ಬೆಳೆಸಿದ ಗಿಡಮರಗಳು ಸಂಪೂರ್ಣ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೋಟಗುಡ್ಡ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ತೋಟಗಾರಿಗೆ ಶಿಕ್ಷಕರು ಶ್ರಮವಹಿಸಿ ಕಾಲೇಜು ಮುಂಭಾಗ ಬೆಲೆಬಾಳುವ ಗಿಡಮರಗಳನ್ನು ಬೆಳೆಸಲಾಗಿದೆ. ಗಿಡ ಮರಗಳ ರಕ್ಷಣೆ, ಸರ್ಕಾರಿ ಕಾಲೇಜು ಸೇರಿದಂತೆ ಪಕ್ಕದಲ್ಲಿರುವ ಪ್ರಾಥಮಿಕಾ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಬಿಸಿಯೂಟಕ್ಕೆ ನೀರಿನ ಅವಶ್ಯಕತೆ ಹಿನ್ನೆಲೆಯಲ್ಲಿ ಶಾಸಕ ವೆಂಕಟರಮಣಪ್ಪ ಶಾಸಕರ ನಿಧಿಯಿಂದ ಕಾಲೇಜು ಪಕ್ಕದಲ್ಲಿ ಕೊಳವೆ ಬಾವಿ ಕೊರೆಸಲಾಗಿದ್ದು ಕೊಳವೆ ಬಾವಿ ಕೊರೆಸಿ 6 ತಿಂಗಳು ಕಳೆದರೂ ಪಂಪು ಅಳವಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಕಾರಣ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

