ತುಮಕೂರು

ಕೆಜೆಪಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ

Published On :

ತುಮಕೂರು: ಇಲ್ಲಿನ ಶೆಟ್ಟಿಹಳ್ಳಿ ಗೇಟ್ ಬಳಿ ಇರುವ ಕೆಂಪಣ್ಣ ವೃತ್ತದಲ್ಲಿ ಕೆಜೆಪಿ ವತಿಯಿಂದ ರಾಷ್ಟ್ರೀಯ ಮತದಾರ ದಿನ ಆಚರಿಸಲಾಯಿತು.
ಕೆಜೆಪಿ ಯುವ ಘಟಕದ ಕಾರ್ಯಕರ್ತರು ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮತದಾನದ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಬಿತ್ತಿ ಪತ್ರ ವಿತರಿಸಿದರು.
ಕೆಜೆಪಿ ಯುವ ಮುಖಂಡ ಓಂಕಾರ್ ಅವರು ಕಾರ್ಯಕರ್ತರಿಗೆ ಹಾಗೂ ನಾಗರಿಕರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ನೂತನವಾಗಿ ಮತದಾರ ಪಟ್ಟಿಗೆ ಹೆಸರು ಸೇರಿಸುವವರಿಗೆ ಅರ್ಜಿಗಳನ್ನು ವಿತರಿಸಿ ಬೂತ್ ಅಧಿಕಾರಿಗಳ ವಿವರಗಳನ್ನು ಪಡೆದರು.
ಕೆಜೆಪಿ ಜಿಲ್ಲಾ ಸಂಚಾಲಕ ಹೆಬ್ಬಾಕ ರವಿಶಂಕರ್, ಕೆಜೆಪಿ ಯುವ ಮುಖಂಡ ಜ್ಯೋತಿ ಗಣೇಶ್ ಉಪಸ್ಥಿತರಿದ್ದರು. ಮುಖಂಡರಾದ ವಿಷ್ಣುವರ್ಧನ್, ಹನುಮಂತರಾಜು, ಶಂಕರ್, ಓಂಕಾರ್, ರವಿಗೌಡ, ವಿರುಪಾಕ್ಷ, ಮೋಹನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.