ತುಮಕೂರು

ತೆಂಗಿನ ಕಾಯಿ ಕೀಳಲು ಮರಹತ್ತಿದ ಶಾಲಾ ಬಾಲಕ ಬಿದ್ದು ಸಾವು

Published On :

ಮಧುಗಿರಿ: ತೆಂಗಿನ ಮರ ಹತ್ತಿ ಕಾಯಿ ಕೀಳಲು ಹೋದ ಶಾಲಾ ಬಾಲಕನೊಬ್ಬ ಆಯಾ ತಪ್ಪಿ  ಮರದಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಜಿಲ್ಲಾ ಆಸ್ಪತ್ರೆಗೆ  ಸಾಗಿಸುವ ಮಾರ್ಗ ಮಧ್ಯೆ ಕೊರಟಗೆರೆಯಲ್ಲಿ ಮೃತಪಟ್ಟಿರುವ  ಘಟನೆ ಗುರುವಾರ ನಡೆದಿದೆ.
 ಮಧುಗಿರಿ ತಾಲೂಕಿನ ಚೀಲನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  ಶೋಬೇನಹಳ್ಳಿ ಗ್ರಾಮದ ಶಂಕರಪ್ಪ ಅವರ ಮಗ  ಪ್ರದೀಪ್ (11) ಮೃತಪಟ್ಟ ದುರ್ದೈವಿ, ಈತ ಚೀಲನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.  ಶಾಲಾ  ಆವರಣದಲ್ಲಿರುವ ತೆಂಗಿನ  ಕಾಯಿ ಕೀಳಲು ಮರ ಹತ್ತಿ ಆಯಾ ತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೂಡ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
 ಶಾಲಾ ಮುಖ್ಯ ಶಿಕ್ಷಕರೇ ವಿದ್ಯಾರ್ಥಿಯನ್ನು ತೆಂಗಿನ ಮರ ಹತ್ತಿ ಕಾಯಿ ಕೀಳಲು ಹೇಳಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
 ಗಣರಾಜ್ಯೋತ್ಸವ ಆಚರಣೆಗೆ ಕಾಯಿ ಕೀಳುವಂತೆ ವಿದ್ಯಾರ್ಥಿ ಪ್ರದೀಪನನ್ನು ಮುಖ್ಯ ಶಿಕ್ಷಕರೇ ಮರ ಹತ್ತಿಸಿದ್ದಾರೆ. ಮರ ಹತ್ತುವಾಗ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡ ವಿದ್ಯಾರ್ಥಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಿಇಓ ವೈ.ಎನ್. ರಾಮಕೃಷ್ಣಯ್ಯ ತಿಳಿಸಿದ್ದಾರೆ.  ಈ ವಿಚಾರದಲ್ಲಿ ಮುಖ್ಯ ಶಿಕ್ಷಕರದ್ದು ತಪ್ಪು ಎಂದು ತಿಳಿದು ಬಂದಿದೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಆಂಜನಪ್ಪ ತಿಳಿಸಿದ್ದಾರೆ.  ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.