ತುಮಕೂರು

ಮನೆಮನೆಗೆ ಬಿಜೆಪಿ ಅಭಿಯಾನಕ್ಕೆ ಚಾಲನೆ

Published On :

ಚಿಕ್ಕನಾಯಕನಹಳ್ಳಿ: ತಾವು ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ  ಸ್ಪಷ್ಟ ನಿರ್ಧಾರ ತಾಳುವ ಶಕ್ತಿಯಿಲ್ಲದವರು ಕ್ಷೇತ್ರದಲ್ಲಿ ಚುನಾವಣಾ ಪ್ರವಾಸ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಟೀಕಿಸಿದರು.
ಜ.25ರಂದು ಅವರು ಪಟ್ಟಣದಲ್ಲಿ ರಾಜ್ಯಬಿಜೆಪಿ ಕರೆಯಂತೆ ಮನೆಮನೆಗೆ ಬಿಜೆಪಿ ಜನಜಾಗರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಮೇಲಿನಂತೆ ಮಾಜಿ ಶಾಸಕರನ್ನು ಟೀಕಿಸಿದರು. ಪ್ರಾರಂಭದಲ್ಲಿ ನಾನು ಕೆಜೆಪಿ  ಮತ್ತು ಯಡಿಯೂರಪ್ಪನವರ ಪರ ಎಂದು ಹೇಳಿಕೆ ನೀಡಿ ಈಗ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಅವರು ತಾವು ಗೊಂದಲಕ್ಕೊಳಗಾಗುವುದಲ್ಲದೆ, ಬೇರೆಯವರನ್ನು ಗೊಂದಲಕ್ಕೀಡುಮಾಡುತ್ತಿರುವುದು ಹಿರಿಯ ರಾಜಕಾರಿಣಿಯಾದವರಿಗೆ ಶೋಭೆಯಲ್ಲ. ಹೇಮಾವತಿ ಯೋಜನೆ ಜಾರಿಗೆ ನಾವು ಪ್ರಾಮಾಣಿಕ ಪ್ರಯತ್ನಮಾಡುತ್ತಿರುವಾಗ, ಯಾವುದೇ ಕಾರಣಕ್ಕೂ ನೀರಾವರಿ ತಾಲೂಕಿಗೆ ಜಾರಿಗೊಳಿಸಲು ಸಾಧ್ಯವಿಲ್ಲ, ಒಂದು ವೇಳೆ ಹಾಗೇನಾದರು ಯಾರಾದರು ನೀರು ತಂದರೆ ನಾವು ಸಹ ಅವರ ಹಿಂದೆ ಹೋಗುತ್ತೇನೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದರು. ಆದರೆ ಈಗ ಎಲ್ಲರಿಗಿಂತ ಮುಂಚೆ ರಾಜಕೀಯ ಪ್ರಾರಂಭಿಸಿದ್ದಾರೆ. ಇನ್ನು ಹಾಲಿ ಶಾಸಕರು ಬೇರೆಯವರು ಜಾರಿ ಮಾಡಿಸಿದ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡುವುದನ್ನು ಬಿಟ್ಟರೆ ಅವರ ಸಾಧನೆ ಶೂನ್ಯ. ತಮ್ಮ ಸಾಧನೆಗಳನ್ನು ಹಾಲಿ ಶಾಸಕರು ಜನತೆಯ ಮುಂದಿಡಲಿ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ನುಡಿದರ.
ಇನ್ನು 100 ದಿನಗಳು ಬಾಕಿಯಿದ್ದು,ಈ ಅವಧಿಯಲ್ಲಿ ಅದಲಗೆರೆ ಕೆರೆಯಿಂದ ಭೋಗಸಂದ್ರದ ಮೂಲಕ ಸಿಂಗದಹಳ್ಳಿ, ಗಂಟೇನಹಳ್ಳಿ, ಮದನಮಡು ಕೆರೆಗಳಿಗೆ ನೀರು ಹರಿಸುವ ಆಭಾಗದ ಜನರ ಬೇಡಿಕೆ ಪೂರಕವಾಗಿ ಕೆಲಸ ಮಾಡುವುದಾಗಿ ಅವರು ನುಡಿದರು. ಮತದಾರರು ಕ್ಷಣಿಕ ಸುಖಕ್ಕಾಗಿ ಆಸೆಪಡದೆ ಯೋಚಿಸಿ ಅಭಿವೃದ್ಧಿ ಪರವಾಗಿರುವವರಿಗೆ ಮತನೀಡಿ ಎಂದರು. ಕೆ.ವಿ.ಕವಿತಾ, ಮಿಲ್ಟ್ರಿಶಿವಣ್ಣ, ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್. ರಾಜಣ್ಣ, ಸಿ.ಎಲ್. ಜಯದೇವ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.