ತುಮಕೂರು

'ವೈಯಕ್ತಿಕ ಸಬಲೀಕರಣಕ್ಕೆ ಹಣಕಾಸಿನ ಶಿಸ್ತು ಅಗತ್ಯ'

Published On :

ತುಮಕೂರು: ವೈಯಕ್ತಿಕ ಸಬಲೀಕರಣಕ್ಕೆ ಹಣಕಾಸಿನ ಶಿಸ್ತು ಅಗತ್ಯ ಎಂದು  ಮಂಗಳೂರು ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಎ. ರೇಗೋ ಸಲಹೆ ನೀಡಿದರು.
ಅವರು ಇಲ್ಲಿನ ವಿದ್ಯಾವಾಹಿನಿ  ಪ.ಪೂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಖ್ಯಾತ ಯೋಜನಾ ತಜ್ಞ ಡಾ. ಡಿ.ಎಂ. ನಂಜುಂಡಪ್ಪ ಸ್ಮರಣಾರ್ಥ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಬಲೀಕರಣದಲ್ಲಿ ಆರ್ಥಿಕ ಸಬಲೀಕರಣ, ಸಾಮಾಜಿಕ ಸಬಲೀಕರಣ ಮತ್ತು ವೈಯಕ್ತಿಕ ಸಬಲೀಕರಣ ಎಂಬ ಮೂರು ವಿಭಾಗಗಳನ್ನು ಗುರುತಿಸಬಹುದು ಎಂದ ಅವರು ವಿದ್ಯಾವಂತರಲ್ಲಿ ಸಾಮಾಜಿಕ ಕಳಕಳಿ ಹೆಚ್ಚಬೇಕು ಎಂದು ತಿಳಿಸಿದರು. ವಿದ್ಯಾವಂತರು ತಮ್ಮ ತಮ್ಮ ಕುಟುಂಬ ಮತ್ತು ಸಂಬಂಧಿಕರಿಗೆ ಆರ್ಥಿಕ ಅಭಿವೃದ್ಧಿಯ ಕುರಿತು ಮಾರ್ಗದರ್ಶನ ಮಾಡುವ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಬಹುದು ಎಂದರು. ಕುಟುಂಬದ ನೆಲೆಯಲ್ಲಿ ಮಹಿಳಾ ಸಬಲೀಕರಣ ಆಗಬೇಕು. ಯುವಕರನ್ನು ಶಿಕ್ಷಣ ಮತ್ತು ತರಬೇತಿ ಮೂಲಕ ಉತ್ಪಾದಕ ಘಟಕಗಳನ್ನಾಗಿ ಮಾರ್ಪಡಿಸಬೇಕು. ಜನರಲ್ಲಿ ಹಣಕಾಸು ಶಿಸ್ತು ಅಗತ್ಯ. ಇದು ಅವರನ್ನು ಸಬಲರನ್ನಾಗಿಸುತ್ತದೆ ಎಂದರು. ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ಧಾನಂದ್ ಅವರು ಕಾರ್ಯಕ್ರಮ ಉದ್ಘಾಟಿಸಿ ನಾವಿಂದು ವೈರುಧ್ಯಗಳ ಯುಗದಲ್ಲಿ ಬದುಕುತ್ತಿದ್ದೇವೆ. ಸಮಾಜದಲ್ಲಿ ಪರಿಣಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸಮಸ್ಯೆಗಳು ಹೆಚ್ಚುತ್ತಿವೆ. ಸಂಸಾರದ ಆದಾಯ ಹೆಚ್ಚುತ್ತಿದೆ. ಜತೆಗೆ ವಿಚ್ಛೇದನಗಳು ಹೆಚ್ಚುತ್ತಿವೆ ಎಂದರು.
ಬದುಕಿಗೆ ಮಾನವೀಯತೆ ಮುಖ್ಯ. ನೆರೆಹೊರೆಯವರನ್ನು ಪ್ರೀತಿಸುವ, ದುಡಿದು ತಿನ್ನುವ, ಬಾಳಿ ಬದುಕುವ ಗುಣಗಳು ವ್ಯಕ್ತಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಿ ಸಂಸ್ಕೃತಿ ಮತ್ತು ನೈತಿಕತೆ ಉಳಿಸಬೇಕು ಎಂದರು.ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವಿ ಪ್ರಾಧ್ಯಾಪಕ ಡಾ. ರಮೇಶ್ ಸಾಲಿಯಾನ ಅತಿಥಿಗಳನ್ನು ಪರಿಚಯಿಸಿದರು. ಪದ್ಮಶ್ರೀ ಪ್ರಾರ್ಥಿಸಿ ಪ್ರಾಚಾರ್ಯ ಎಸ್. ಕುಮಾರಸ್ವಾಮಿ ಸ್ವಾಗತಿಸಿ ಪ್ರೊ. ಚೆನ್ನಪ್ಪ ನಿರೂಪಿಸಿ ಪ್ರೊ. ಸಿ.ಎಸ್. ಸೋಮಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.