ತುಮಕೂರು

ಸಂಗೊಳ್ಳಿ ರಾಯಣ್ಣ ನಿಜವಾದ ಸ್ವಾತಂತ್ರ್ಯ ಹೋರಾಟಗಾರ

Published On :

ಚಿಕ್ಕನಾಯಕನಹಳ್ಳಿ: ದೇಶದ ಉಳಿವಿಗಾಗಿ ಹೋರಾಡಿ ವೀರಸ್ವರ್ಗ ಸೇರಿದ  ಹುತಾತ್ಮ ಸಂಗೊಳ್ಳಿ ರಾಯಣ್ಣ ನಿಜವಾದ ಸ್ವಾತಂತ್ರ ಹೋರಾಟಗಾರ ಎಂದು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರದ ಸಾಹಿತಿ ಕೇಶವಾದಿತ್ಯ ನುಡಿದರು.
ಅವರು ಇಲ್ಲಿನ ಶ್ರೀಗುರುರೇವಣಸಿದ್ದೇಶ್ವರ ಮಠದಲ್ಲಿ  ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ 182ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದುದು ರಾಯಣ್ಣ ಹುಟ್ಟಿದ ದಿನ, ದೇಶ ಗಣತಂತ್ರವನ್ನು ಹೊಂದಿದ್ದು ರಾಯಣ್ಣ ಹುತಾತ್ಮನಾದ ದಿವಸ. ಇದು ಕಾಕತಾಳೀಯವಲ್ಲ. ರಾಯಣ್ಣನ ಕ್ಷಾತ್ರತೇಜಸ್ಸೇ ಅಂತಹದ್ದು. ಯೋಗಗಳು ನಮ್ಮ ಯೋಗ್ಯತೆ ಮೀರಿ ಬರುತ್ತವೆ. ರಾಯಣ್ಣನನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ತರವಲ್ಲ, ಆತ ದೇಶದ ಆಸ್ತಿ. ಆದರೆ ಡೋಂಗಿ ಹೋರಾಟಗಾರರನ್ನು ದೇಶ ಇಂದಿಗೂ ಕೊಂಡಾಡುತ್ತಿದೆ, ರಾಯಣ್ಣನಂತಹ ಅಪ್ರತಿಮ ವೀರನ್ನನು ದೇಶಮರೆತಿದೆ ಎಂದು ಗದ್ಗದಿತರಾದರು. ನಮ್ಮದೇಶಕ್ಕೆ ಬೇಕಿರುವುದು ಕಾರ್ಲ್ ಮಾರ್ಕ್ಸ, ಲೆನಿನ್‌ಗ್ರಾಡ್, ಪಠ್ಯಗಳಲ್ಲ. ಬದಲಿಗೆ ನಮ್ಮವರೇ ಆದ ವೀರಪುರುಷರ ಸಾಹದ ಕಥೆಗಳು. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಹುಡುಕುವನು ಎಂದರ್ಥ. ಯಾವುದೇ ವಿದ್ಯೆ ಗುರುವಿನ ಮೂಲಕ ಸಿಗಬೇಕು. ಇತಿಹಾಸ ತಿಳಿದವನು ಮಾತ್ರ ಇತಿಹಾಸ ನಿರ್ಮಿಸಬಲ್ಲ. ಅದರಂತೆ ರಾಯಣ್ಣ ಈ ದೇಶದ ಮಹಿಮೆಯನ್ನು ತಿಳಿದದ್ದರಿಂದ, ದೇಶದ ಸ್ವಾತಂತ್ರಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಎಂದರು.
ಕಾಂಗ್ರೆಸ್ ಮುಖಂಡ ಸೀಮೆ ಎಣ್ಣೆಕೃಷ್ಣಯ್ಯ, ರಾಯಣ್ಣ ನಮ್ಮವನು ಎಂಬುದೇ ನಮಗೆ ಹೆಮ್ಮೆಯಾಗಿದೆ. ಆತನ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪಿಸುವುದು ನಮ್ಮ ಹೊಣೆಯಾಗಿದೆ ಎಂದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಧನಪಾಲ್, ನರಸಿಂಹಮೂರ್ತಿ, ಸಿ.ಎಲ್. ರವಿಕುಮಾರ್, ಬೀರಪ್ಪ, ಕೆ.ರಾಮ್ಯಯ, ರಮೇಶ್ ಮುಂತಾದವರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.