ತಿಪಟೂರು ತಾಲೂಕಿನ ಅಭಿವೃದ್ಧಿ ಹರಿಕಾರ ಬಿಎಸ್ವೈಗೆ ಫೆ.2ರಂದು ಅಭಿನಂದನೆ
ತಿಪಟೂರು: ತಿಪಟೂರು ತಾಲೂಕಿನ ಹತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ನೂರಾರು ಕೋಟಿ ರು.ಗಳ ಅನುದಾನಗಳನ್ನು ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೆಜಿಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಫೆಬ್ರವರಿ 2ರಂದು ತಾಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದಿಸಲು ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಕೆಜೆಪಿ ಮುಖಂಡ ಟಿ.ಎಸ್. ಲೋಕೇಶ್ವರ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರು ರಾಜ್ಯದ ಚುಕ್ಕಾಣಿ ಹಿಡಿದ ಮೂರುವರೆ ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಪ್ರಥಮ ಸ್ಥಾನ ಎಂದು ಗುರುತಿಸಿಕೊಳ್ಳುವಂತೆ ಅನುಷ್ಠಾನಗೊಳಿಸಿಕೊಂಡ ತಾಲೂಕಿನ ಹಾಲಿ ಶಾಸಕರು ಯಡಿಯೂರಪ್ಪನವರ ಹೆಸರು ಬಲದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಯೋಜನೆಗಳಿಗೆ ನೂರಾರು ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದರೂ, ಅವರನ್ನು ತಾಲೂಕಿಗೆ ಆಹ್ವಾನಿಸಿ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸಿಲ್ಲ.
ಆದ್ದರಿಂದ ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ತಾಲೂಕು ಕೆಜೆಜಿ ಘಟಕದ ವತಿಯಿಂದ ಫೆಬ್ರವರಿ 2ರ ಶನಿವಾರ ಸಂಜೆ 4ಗಂಟೆಗೆ ನಗರದ ಹಾಲ್ಕುರಿಕೆ ರಸ್ತೆಯ ಸುಜ್ಞಾನ ಶಾಲೆ ಪಕ್ಕದ ವಿಶಾಲ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಯಡಿಯೂರಪ್ಪನವರನ್ನು ಅಭಿನಂದಿಸಲಾಗುವುದೆಂದು ಲೋಕೇಶ್ವರ ತಿಳಿಸಿದರು.
ವಿವಿಧ ಮಠಾಧೀಶರು: ಈ ಸಮಾರಂಭದಲ್ಲಿ ತಾಲೂಕಿನ ವಿವಿಧ ಮಠಾಧೀಶರು, ಮಾಜಿ ಸಚಿವೆ ಶೋಬಾ ಕರಂದ್ಲಾಜೆ, ಸಂಸದ ಜಿ.ಎಸ್. ಬಸವರಾಜು, ಕೆಜೆಪಿ ರಾಜ್ಯ ಮುಖಂಡ ಧನಂಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್, ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಜ್ಯೋತಿ ಗಣೇಶ್, ತಾಲೂಕಿನ ಮಾಜಿ ಶಾಸಕ ಬಿ. ನಂಜಾಮರಿ, ಎಸ್.ಪಿ. ಗಂಗಾಧರಪ್ಪ, ಟಿ.ಜಿ. ತಿಮ್ಮೇಗೌಡ ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸಂಚಾಲಕ ಟಿ.ಆರ್. ರಘುಪತಿ, ಕಾರ್ಯದರ್ಶಿ ಮಲ್ಲೇಶ್, ಮುಖಂಡರಾದ ಮುನ್ನ, ಗಿರೀಶ್, ಮಾರನಗೆರೆ ನಿರಂಜನ್, ನಗರಸಭಾ ಸದಸ್ಯ ನಿಜಗುಣ, ಬಿ.ಟಿ. ಕುಮಾರ್, ಗಂಡಸಿ ಸುರೇಶ್, ರಂಗಾಪುರ ದೇವರಾಜು, ಆಲದಹಳ್ಳಿ ವಿಶ್ವಣ್ಣ, ಗುಂಗರಮಳೆ ನಂದೀಶ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

