'ವಿವೇಕಾನಂದ, ನೇತಾಜಿ ದೇಶದ ತೇಜಸ್ವಿ ಪುರುಷರು'
ತುಮಕೂರು: ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ಚಂದ್ರಬೋಸ್ ಅವರು ದೇಶದ ತೇಜಸ್ವಿ ಪುರುಷರು ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿ ಅಭಿಪ್ರಾಯಪಟ್ಟರು.
ಅವರು ಗೂಳೂರಿನ ಸುಫ್ಹಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಯಾರನ್ನು ಬೇಕಾದರೂ ಕ್ಷಮಿಸುತ್ತಿದ್ದರು. ಆದರೆ, ಹೇಡಿಗಳನ್ನು ಮಾತ್ರ ಎಂದೂ ಕ್ಷಮಿಸುತ್ತಿರಲಿಲ್ಲ. ಅವರೊಂದು ಪುರಷಮಣಿಯಾಗಿದ್ದರು. ಹೆದರುವವರನ್ನು ಮಾತ್ರ ಹೆದರಿಸುತ್ತಾರೆ ಎಂಬ ಪಾಠವನ್ನು ಬಾಲ್ಯದಲ್ಲೇ ಕಲಿತು ದಿಟ್ಟತನ, ಧೀಮಂತತನವನ್ನು ಮೈಗೂಡಿಸಿಕೊಂಡರು ಎಂದು ತಿಳಿಸಿದರು.
ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳುತ್ತಾ ದೇಶದ ಉದ್ದಗಲಕ್ಕೂ ದೇಶಪ್ರೇಮಿಯೋಧರ ಪಡೆ ಕಟ್ಟಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಇಂದು ನಮ್ಮ ಯುವ ಜನಾಂಗಕ್ಕೆ ಆದರ್ಶವಾಗಲಿ ಎಂದ ಶ್ರೀಗಳು, ಹುಟ್ಟಿದ ತಪ್ಪಿಗೆ ಬದುಕುವುದು ಬದುಕಲ್ಲ. ಇತಿಹಾಸವಾಗುವ ಮೊದಲು ಇತಿಹಾಸ ಸೃಷ್ಟಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಕೆ. ರವಿಕುಮಾರ್ ಮಾತನಾಡಿ ದೇಶದ ಬಡವರ ನಡುವೆ ಬಾಳಿ ಅವರ ಬವಣೆಗಳನ್ನು ಅರ್ಥಮಾಡಿಕೊಂಡು ಅವರಲ್ಲಿ ಬದಲಾವಣೆ ತರಬಯಸಿದವರು ಸ್ವಾಮಿ ವಿವೇಕಾನಂದರು ಎಂದರು.
ವಿಷಾದ: ಕ್ರಾಂತಿಯ ಹಾದಿಯಲ್ಲಿ ಸಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲಿಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟ ನೇತಾಜಿ ಸುಭಾಷ್ಚಂದ್ರ ಬೋಸ್ ಅವರಿಗೆ ಈ ದೇಶದಲ್ಲಿ ನೀಡಬೇಕಾದ ಗೌರವವನ್ನು ನೀಡಲಾಗುತ್ತಿಲ್ಲ ಎಂದು ವಿಷಾದಿಸಿದರು. ತುಮಕೂರು ವಿವಿಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎಂ. ಕೊಟ್ರೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಭಾರತ ಕಂಡ ಅಪರೂಪದ ಶಕ್ತಿಗಳು. ಅವರು ಬಾಳಿದ ಹಾಗೂ ಅವರು ತೋರಿಸಿ ಹೋಗಿರುವ ದಾರಿಯಲ್ಲಿ ನಾವು ಬಾಳಬೇಕಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಮಾತನಾಡಿದರು. ನವದೆಹಲಿಯ ಯು.ಜಿ.ಸಿ. ನಾಮಿನಿ, ತುಮಕೂರು ವಿ.ವಿ.ಯ ಕಾಲೇಜು ಅಭಿವೃದ್ಧಿ ಪರಿಷತ್ನ ನಿರ್ದೇಶಕ, ಕಾಲೇಜಿನ ಪ್ರಾಂಶುಪಾಲ ಡಾ. ಇಂತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

