ತುಮಕೂರು

ಎನ್‌ಎಸ್‌ಐ ಕಲೆಕ್ಷನ್‌ರಿಂದ ಅಂಧರಿಗೆ ನೇತ್ರದಾನ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಜು.1
ತುಮಕೂರು ಎನ್.ಎಸ್.ಐ ಕಲೆಕ್ಷನ್ ಮುಖ್ಯಸ್ಥ ಎನ್.ಎನ್. ಶ್ರೀಧರ್ ಅವರ ಮಾವನವರಾದ ಬೆಂಗಳೂರು ರಾಜಾಜಿನಗರದಲ್ಲಿ ವಾಸವಾಗಿದ್ದ ಸಿ.ಆರ್. ವೆಂಕಟರಮಣಸ್ವಾಮಿ ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದ್ದಾರೆ.
ಎನ್.ಎಸ್.ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥರಾದ ಎನ್.ಎನ್. ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ಬೆಂಗಳೂರಿನ ಲಯನ್ಸ್ ಐ ಹಾಸ್ಪಿಟಲ್ ನೇತ್ರ ತಜ್ಞರ ಸಹಕಾರದೊಂದಿಗೆ ಪಡೆದ ಎರಡು ನೇತ್ರಗಳನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಈ ಕಾರ್ಯದಿಂದ ಇಬ್ಬರು ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟಂತಾಗಿ ಪಡೆದ ಭಾಗ್ಯವಂತರು ಟ್ರಸ್ಟ್‌ನ ಸದಸ್ಯರು  ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ. ಇದೇ ರೀತಿ ನೇತ್ರದಾನ ಹಾಗೂ ದೇಹ ದಾನ ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯೂಯಲರಿ ಪ್ಯಾಲೇಸ್, ಬಿ.ಹೆಚ್. ರಸ್ತೆ, ತುಮಕೂರು ದೂ. 0816-2273479 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.