'ರೋಟರಿ ಇನ್ನರ್ವ್ಹೀಲ್ ಕ್ಲಬ್ನಿಂದ ಉತ್ತಮ ಕೆಲಸ'
ತಿಪಟೂರು: ಪ್ರತಿಯೊಬ್ಬರೂ ಸ್ನೇಹ ಮನೋಭಾವನೆಗಳನ್ನು ಬೆಳೆಸಿಕೊಂಡಲ್ಲಿ ಮುಂದೆ ಎಂಥಹ ಕಠಿಣ ಸಮಸ್ಯೆಗಳನ್ನಾದರೂ ಧೈರ್ಯವಾಗಿ ಎದರಿಸುವಲ್ಲಿ ಸಹಾಯಕವಾಗುತ್ತದೆ ಎಂದು ಐ.ಡಬ್ಲ್ಯೂ ಜಿಲ್ಲಾ ಛೇರ್ಮನ್ ಮೀನಾ ಅಂಬ್ಲಿ ತಿಳಿಸಿದರು.
ನಗರದ ಭಾರತೀಯ ವೈದ್ಯಕೀಯ ಸಂಘದ ಕಟ್ಟಡದಲ್ಲಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ನಡೆದ ರೋಟರಿ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿ ಮಾತನಾಡಿದ ಅವರು ಪರಸ್ಪರ ಸೌಹಾರ್ದದಿಂದ ಸಮಾಜಮುಖಿ ಕೆಲಸಗಳನ್ನು ಮಾಡಬೇಕಾದರೆ ಸಂಸ್ಥೆಯ ಎಲ್ಲಾ ಸದಸ್ಯರು ಸ್ನೇಹ, ಪ್ರೀತಿ, ವಾತ್ಸಲ್ಯ ಮನೋಭಾವನೆಗಳನ್ನು ಮೈಗೂಡಿಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕೆಂದರು.
ರೋಟರಿ ಇನ್ನರ್ವೀಲ್ ಕ್ಲಬ್ ನೂತನ ಅಧ್ಯಕ್ಷೆ, ವಕೀಲರಾದ ಶೋಭಾ ಜಯದೇವ್ ಸಂಸ್ಥೆಯ ಎಲ್ಲಾ ಸದಸ್ಯರು ಪರಸ್ಪರ ಕೈಜೋಡಿಸಿ ಮೈತ್ರಿ ಬೆಳೆಸಿಕೊಳ್ಳುವ ಮೂಲಕ ಕಾರ್ಯ ರೂಪಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂದರು. ಚಿ.ನಾ.ಹಳ್ಳಿ ಇನ್ನರ್ವೀಲ್ನ ಅಧ್ಯಕ್ಷೆ ಭವಾನಿ ಜಯರಾಮ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಇನ್ನರ್ವೀಲ್ನ ಮಾಳವಿಕ ಕೃಷ್ಣಮೂರ್ತಿ ನೂತನ ಸದಸ್ಯರಿಗೆ ಪದಕಧಾರಣೆ ಮಾಡಿದರು. ನೂತನ ಪದಗ್ರಹಣ ಅರ್ಹತಾ ಪತ್ರವನ್ನು ಐ.ಡಬ್ಲ್ಯೂ ಜಿಲ್ಲಾ ಛೇರಮನ್ ಮೀನಾ ಅಂಬ್ಲಿ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ಶಿವಶಂಕರ್, ಚಿ.ನಾ.ಹಳ್ಳಿ ಇನ್ನರ್ವೀಲ್ನ ಕಾರ್ಯದರ್ಶಿ ತೋಜೋವತಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

