ತುಮಕೂರು

ರಸ್ತೆ ಮಾರ್ಗ ವಿವಾದ ಬಗೆಹರಿಸಿದ ತಾಲೂಕು ಆಡಳಿತ

Published On :

ಕುಣಿಗಲ್: ತಾಲೂಕಿನ ಅಮೃತೂರು ಸಮೀಪದ ಕೊಡಿಗೆಹಳ್ಳಿ ದಲಿತರ ಜಮೀನಿಗೆ ರಸ್ತೆ ಮಾರ್ಗ ಕಲ್ಪಿಸುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಉಂಟಾಗಿದ್ದ ಸಮಸ್ಯೆಯನ್ನು, ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ಬಗೆಹರಿಸಲಾಗಿದೆ.
ಅಮೃತೂರಿನ ಕೊಡಿಗೆಹಳ್ಳಿ ಬಡಾವಣೆಯ  ಸ.ನಂ.126, 128ರಲ್ಲಿದ್ದು ಮುಖ್ಯರಸ್ತೆಗೆ ಹೊಂದುಕೊಂಡಿದೆ. ಈ ಸರ್ವೇ ನಂಬರ್‌ಗೆ ಹೊಂದುಕೊಂಡಂತೆ ಪಕ್ಕದ ಸರ್ವೇ ನಂಬರ್ ಪ್ರದೇಶದಲ್ಲಿ ಮತ್ತೊಂದು ಬದಿಗೆ ಹೊಂದುಕೊಂಡ ಐವತ್ತು ಎಕರೆಗೊ ಹೆಚ್ಚು ಪ್ರದೇಶದಲ್ಲಿ ಒಟ್ಟಾರೆ ನಲವತ್ತಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಜಮೀನು ಮಂಜೂರಾಗಿದ್ದು ಈ ಪೈಕಿ ಕೆಲವರು ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ಎಲ್ಲಾ ಕುಟುಂಬದವರು ಪ್ರದೇಶದಲ್ಲಿ ವ್ಯವಸಾಯ ಮಾಡಿಕೊಂಡಿದ್ದರು.
ಸದರಿ ಜಮೀನಿಗೆ ತೆರಳು ಸೂಕ್ತ ರಸ್ತೆ ಸಂಪರ್ಕ ಇಲ್ಲದೆ ಸುತ್ತಿ ಬಳಸಿಕೊಂಡು ಬಂದು ಜಮೀನುಗಳಲ್ಲಿ ವ್ಯವಸಾಯ ಮಾಡುವ ಸ್ಥಿತಿ ಉಂಟಾಗಿತ್ತು, ಆ ಬಗ್ಗೆ ಆ ಭಾಗದ ದಲಿತರು, ದಲಿತ ಮುಖಂಡರಾದ ರಾಮಲಿಂಗಯ್ಯ, ನಾರಾಯಣ್ ಗಮನಕ್ಕೆ ತಂದು ದಾಖಲೆ ಪರಿಶೀಲಿಸಲಾಗಿ, ಸದರಿ ಪ್ರದೇಶಕ್ಕೆ ರಸ್ತೆ ಸಂಪರ್ಕ ಇರುವುದು ದಾಖಲೆಯಲ್ಲಿ ಕಂಡು ಬಂದಿತು.
ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳಿಗೆ ಕಳೆದ ಎರಡು ವರ್ಷಗಳ ಹಿಂದೆಯೇ ಪತ್ರ ಬರೆದು ರಸ್ತೆ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿ, ಹೋರಾಟ ಮಾಡುವ ಎಚ್ಚರಿಕೆ ನೀಡಿದ ಮೇರೆಗೆ, ಕಳೆದ ತಿಂಗಳ ಕೊನೆ ವಾರದಲ್ಲಿ ಸರ್ವೇ ಇಲಾಖಾಧಿಕಾರಿಗಳು ಸರ್ವೆ ಮಾಡಿ, 128 ಹಾಗೂ 126ರ ಪ್ರದೇಶದಲ್ಲಿ ಒತ್ತುವರಿ ಗುರುತಿಸಿದ್ದರು.   
ಆದರೆ, ಸರ್ವೇ ಸಮರ್ಪಕವಾಗಿ ಮಾಡಿಲ್ಲವೆಂದು ಹಾಲಿ ಜಾಗದ ಅಲ್ಪಸಂಖ್ಯಾತ ಸಮುದಾಯದವರು ಸೇರಿದಂತೆ ನಿವಾಸಿಗಳು ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ದಲಿತರು ಹಾಗೂ ಕೊಡಿಗೆಹಳ್ಳಿ ಬಡಾವಣೆ ನಿವಾಸಿಗಳ ನಡುವೆ ಸಂಘರ್ಷದ ವಾತವರಣಕ್ಕೆ ಕಾರಣವಾಗುವ ಸನ್ನಿವೇಶ ನಿರ್ಮಾಣವಾಗಿತ್ತು.
ಎಚ್ಚೆತ್ತ ಉಪ ವಿಭಾಗಾಧಿಕಾರಿ ನಕುಲ್, ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ದಲಿತರ ಪರವಾಗಿ ಮುಖಡರಾದ ರಾಮಲಿಂಗಯ್ಯ, ದಲಿತನಾರಾಯಣ, ಕೃಷ್ಣಮೂರ್ತಿ, ಶ್ರೀನಿವಾಸ್, ಬಜಾವಣೆ ನಿವಾಸಿಗಳ ಪರವಾಗಿ ರೇವಣ್ಣಸಿದ್ದಯ್ಯ, ಕುಮಾರ್ ಇತರರ ಸಮ್ಮುಖದಲ್ಲಿ ಅಮೃತೂರು ಗ್ರಾಪಂ ಕಾರ್ಯಾಲಯದಲ್ಲಿ ಸಭೆ ನಡೆಸಿ, ಎರಡೂ ಕಡೆಯ ಮುಖಂಡ ಮನವೊಲಿಸಿ 12 ಅಡಿ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಪಡೆಯುವ ಮೂಲಕ ಕಳೆದ ಕೆಲವರ್ಷಗಳಿಂದ ಜೀವಂತವಾಗಿದ್ದ ದಲಿತ ಜಮೀನುಗಳಿಗೆ ರಸ್ತೆ ಸಮಸ್ಯೆಯನ್ನು ಬಗೆಹರಿಸಿದರು.
ವಿಶೇಷ ತಹಸೀಲ್ದಾರ್ ಅನಂತರಾಮು, ತಹಸೀಲ್ದಾರ್ ಜಗದೀಶ್. ತಾಪಂ ಇಒ ಡಾ.ರಾಮಚಂದ್ರಪ್ಪ, ಪಿಎಸ್‌ಐ ಮಂಜುನಾಥಹೂಗಾರ್ ಇತರರು ಪಾಲ್ಗೊಂಡಿದ್ದರು.
ಅಮೃತೂರಿಗೆ ತೆರಳುವ ಮುನ್ನ ಚಿಕ್ಕಮಳಲವಾಡಿ ಗ್ರಾಮಕ್ಕೆ ಭೇಟಿ ನೀಡಿದ ಎಸಿ ನಕುಲ್, ಆಶ್ರಯ ನಿವೇಶನ ವಿತರಣೆಯಲ್ಲಿ ಜಿಪಂ ಮಾಜಿ  ಸದಸ್ಯರೊಬ್ಬರು ಗೋಲ್‌ಮಾಲ್ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ವಕೀಲ ಪ್ರಕಾಶ್, ಗ್ರಾಮಸ್ಥರು ಸಲ್ಲಿಸಿರುವ ಅರ್ಜಿ ಬಗ್ಗೆ ಗ್ರಾಮಸ್ಥರು ಎರಡು ಬಣದೊಂದಿಗೆ  ಚರ್ಚಿಸಿ, ಸಮಸ್ಯೆ ಆಶ್ರಯ ಸಮಿತಿಯಲ್ಲಿ ತೀರ್ಮಾನಿಸುವಂತೆ ಸೂಚಿಸಿ, ಆಶ್ರಯ ಸಮಿತಿಯಲ್ಲಿ ಬಗೆಹರಿಯದಿದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಬಗೆಹರಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.