'ಸಿನಿಮಾ, ಟಿವಿ ಮಾಧ್ಯಮ ವಾಣಿಜ್ಯೀಕರಣ'
ಪಾವಗಡ: ಸಿನಿಮಾರಂಗ ಹಾಗೂ ಟಿವಿ ಮಾಧ್ಯಮಗಳು ಇಂದು ವಾಣಿಜ್ಯೀಕರಣಗೊಂಡಿದ್ದು ಇದರಿಂದ ನೈಜ ಕಲೆ ಹಾಗೂ ಸಂಸ್ಕೃತಿಯ ಮೌಲ್ಯ ಕುಸಿತಗೊಂಡಿದೆ ಎಂದು ಆಂಧ್ರ ಗಡಿನಾಡು ಕನ್ನಡ ಘಟಕದ ಮಾಜಿ ಅಧ್ಯಕ್ಷ ಹ.ರಾಮಚಂದ್ರಪ್ಪ ವಿಷಾದಿಸಿದರು.
ಗಡಿನಾಡು ಪ್ರದೇಶಭಿವೃದ್ಧಿ ಪ್ರಾಧಿಕಾರ ಹಾಗೂ ರಂಗ ಸುಚಿ ಟ್ರಸ್ಟ್ ವತಿಯಿಂದ ಬುಧವಾರ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಗಂಗಾಂತರಂಗ ಎಂಬ ದೃಶ್ಯರೂಪಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇಂದು ನೈಜ್ಯ ಕಲೆ ಹಾಗೂ ಸಂಸ್ಕೃತಿಯ ಮೌಲ್ಯ ಕುಸಿತಗೊಂಡಿದ್ದು ಸಿನಿಮಾ ಹಾಗೂ ದೃಶ್ಯ ಮಾಧ್ಯಮಗಳು ತಮಗೆ ಬೇಕಾದ ರೀತಿಯ ಕಮರ್ಷಿಯಲ್ ದೃಶ್ಯಗಳನ್ನು ಬಿತ್ತರಿಸುವುದರಿಂದ ಸಮಾಜದಲ್ಲಿ ಅಡ್ಡ ಪರಿಣಾಮ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ರಂಗಭೂಮಿ ಕಲೆಯನ್ನು ಪ್ರೇಕ್ಷಕರು ನಿರಂತರ ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ಅಧುನಿಕ ಸಮಾಜದಲ್ಲಿ ಕಲೆ ನಶಿಸುವ ಹಂತದಲ್ಲಿದೆ ಎಂದ ಅವರು ಗಂಗಾಂತರಂಗ ಎಂಬ ರಂಗ ರೂಪಕ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿದ ಎಚ್.ವಿ.ರಾಮಚಂದ್ರರಾವ್ ಹಾಗೂ ಉತ್ತಮ ರಂಗ ದ್ರಶ್ಯ ರೂಪಕಗಳನ್ನು ಗಡಿ ಗ್ರಾಮಗಳಲ್ಲಿ ಆಯೋಜಿಸಿ ಕಲೆಯ ಮೇರಗು ನೀಡುವಲ್ಲಿ ನಿರತವಾದ ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸೇವೆಯನ್ನು ಪ್ರಶಂಸಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಬೆಳ್ಳಿಬಟ್ಟಲು ಎಚ್.ವಿ.ರಾಮಚಂದ್ರರಾವ್ ನೆರೆವೇರಿಸಿ ರಂಗ ಕಲೆಯ ಬಗ್ಗೆ ವಿವರಿಸಿ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ತಾಪಂ ಇಒ ರಂಗನಾಥ್, ತಾ.ಕಸಾಪ ಅಧ್ಯಕ್ಷ ಅಂತರಗಂಗೆ ಶಂಕರಪ್ಪ, ರೋಟರಿ ಅಧ್ಯಕ್ಷ ರಾಮಾನಾಥ್, ತಾ.ಕಸಾಪ ನಿರ್ದೇಶಕರಾದ ಕಟ್ಟಾ ನರಸಿಂಹಮೂರ್ತಿ, ಆರ್.ಟಿ.ಖಾನ್, ಡಿ.ಎಚ್ ಕೃಷ್ಣಮೂರ್ತಿ, ಈರಣ್ಣ, ಶಿಕ್ಷಕರಾದ ದೊಡ್ಡೇನಹಳ್ಳಿ ಬಸವರಾಜ್, ಶ್ರೀನಿವಾಸ್, ಜೆರಾಕ್ಸ್ ಬಾಬು ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

