ತುಮಕೂರು

ವಿದ್ಯೆ ಸಾಧಕರ ಸಂಪತ್ತು: ಹರಳೂರು ಶಿವಕುಮಾರ್

Published On :

ತುಮಕೂರು: ವಿದ್ಯೆ ಸಾಧಕರ ಸಂಪತ್ತು. ವಿದ್ಯಾರ್ಥಿಗಳಲ್ಲಿ ಸೋಮಾರಿತನವು ಎಂದಿಗೂ ಇರಬಾರದು. ಯಾರು ತಮ್ಮ ಜೀವನದಲ್ಲಿ ವಿದ್ಯೆಯೆಂಬ ಸಂಪದವನ್ನು ಗಳಿಸಿಕೊಳ್ಳುತ್ತಾರೋ ಅವರಿಗೆ ಮುಂದಿನ ದಿನಗಳಲ್ಲಿ ಕೀರ್ತಿ, ಯಶಸ್ಸು ಉತ್ತಮ ಭವಿಷ್ಯವು ದೊರಯುತ್ತದೆ ಎಂದು ಶ್ರೀ ವೀರಭದ್ರಸ್ವಾಮಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಹಾಗೂ ಸಾಹಿತಿ ಹರಳೂರು ಶಿವಕುಮಾರ ಅಭಿಪ್ರಾಯಪಟ್ಟರು.
ಹರಳೂರಿನ ಶ್ರೀ ವೀರಭದ್ರಸ್ವಾಮಿ ಪ್ರೌಢಶಾಲೆಯಲ್ಲಿ 2013-14ನೇ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಭಾಗಿಯಾಗಿದ್ದು ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿದರು.
ಬದುಕಿನಲಿ ವಿದ್ಯೆಯೆಂಬ ಸೌಭಾಗ್ಯವು ಮಾನವರ ಬದುಕಿಗೆ ಬೆಳಕಾಗಿ ಮುನ್ನಡೆಸಲು ಸಾಧ್ಯವೆಂದರು.
ಇದೇ ಸಮಯದಲ್ಲಿ ಶಾಲೆಯ ಪ್ರತಿಭಾ ಪುರಸ್ಕಾರ ನಿಧಿಗೆ ತಮ್ಮ ತಂದೆ-ತಾಯಿಯವರ ನೆನಪಿನಲ್ಲಿ ಹನ್ನೊಂದು ಸಾವಿರದ ನೂರ ಹನ್ನೊಂದು ರು.ಗಳನ್ನು ಶಾಶ್ವತ ನಿಧಿಗಾಗಿ ಮುಖ್ಯ ಶಿಕ್ಷಕಿ ಎಚ್.ವಿ. ಪುಟ್ಟಮ್ಮನವರಿಗೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆ.ಎಸ್. ಶಂಕರಯ್ಯನವರು ಗ್ರಾಮದ ಹಿರಿಯರಾದ ವೀರಭದ್ರಯ್ಯನವರು ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನವಿತ್ತರು.
ಅಧ್ಯಕ್ಷತೆ ವಹಿಸಿದ್ದ ಎಚ್.ಕೆ. ಕುಮಾರಯ್ಯನವರು ಮಕ್ಕಳು ಕಲಿಕೆಯಲ್ಲಿ ಆಸಕ್ತಿ ವಹಿಸಿ ಕಲಿಯಬೇಕೆಂದು ಕರೆ ನೀಡಿದರು.
ಶಾಲಾ ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಹಿಂದಿ ಶಿಕ್ಷಕಿ ಪಿ.ಕೆ. ಕಾಂತಮ್ಮನವರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.