ನಿವೃತ್ತ ನೌಕರರ ಸಂಘದ ನಿಯೋಗದಿಂದ ಸಚಿವರ ಭೇಟಿ
ಕ.ಪ್ರ.ವಾರ್ತೆ ತುಮಕೂರು ಜು.9
ತುಮಕೂರಿನ ಹೆಚ್ಎಂಟಿ ನಿವೃತ್ತ ನೌಕರರ ಸಂಘ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ನಿಯೋಗ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಬೆಂಗಳೂರಿನ ಕೃಷ್ಣ ಬೈರೇಗೌಡ ಅವರ ನಿವಾಸಕ್ಕೆ ತೆರಳಿದ ನಿಯೋಗ ಹೆಚ್ಎಂಟಿ ನಿವೃತ್ತ ನೌಕರರಿಗೆ ಸ್ವಯಂ ನಿವೃತ್ತಿ ಹಣದಲ್ಲಿ ಹಿಡಿದಿರುವ ಮಧ್ಯಂತರ ಪರಿಹಾರದ ಹಣವನ್ನು ಹಿಂದಿರುಗಿಸುವಂತೆ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರಿಗೆ ಉಚಿತ ಬಸ್ ಪಾಸ್ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಿಕೊಡುವಂತೆ ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೇಂದ್ರ ಸಾರ್ವಜನಿಕ ಉದ್ಯಮಗಳ ಮಂತ್ರಿಗೆ ಮಧ್ಯಂತರ ಪರಿಹಾರದ ಹಣ ಹಿಂದಿರುಗಿಸುವಂತೆ ಪತ್ರ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರಿಗೆ ಉಚಿತ ಬಸ್ ಪಾಸ್ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಮುಂದಿನ ಅಧಿವೇಶನದಲ್ಲಿ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಎಂಟಿ ನಿವೃತ್ತ ನೌಕರರ ಪರವಾಗಿ ಟಿ.ಎನ್. ಚಂದ್ರನಾಥ್, ಕೆ.ವಿ. ಪ್ರಕಾಶ್, ಭಾರದ್ವಾಜ್, ನಿತಿಯಾನಂದಂ, ಎಂ.ಆರ್. ಸುದರ್ಶನ್, ನಾರಾಯಣಸ್ವಾಮಿ, ಸಯದ್ ಅಮಾನುಲ್ಲಾ, ಟಿ. ರಾಮಯ್ಯ, ಡಿ. ಜಯಣ್ಣ, ರಾಮಸ್ವಾಮಿ, ಟಿ. ಪಶುಪತಿ, ಮಂಜುನಾಥ್ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಪರವಾಗಿ ಬಿ.ಎಂ. ಚಿಕ್ಕಗಂಗಯ್ಯ, ಫಕೀರಪ್ಪ, ಶಿರೋರ್, ಬಿ.ಕೆ. ಬಸವರಾಜು, ಸಯದ್ ಹುಮಾಯೂನ್, ಕುಮಾರಸ್ವಾಮಿ, ತಿಮ್ಮಯ್ಯ, ಎಂ.ಎಸ್. ವೆಂಕಟನಾರಾಯಣ, ಟಿ.ಎಲ್. ಲಕ್ಷ್ಮೀಪತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

