ತುಮಕೂರು

ಕುಣಿಗಲ್ನಲ್ಲಿ ಇನ್ನೂ ಜಾರಿಗೆ ಬರದ ಅನ್ನಭಾಗ್ಯ ಯೋಜನೆ

Published On :

ಕ.ಪ್ರ.ವಾರ್ತೆ ಕುಣಿಗಲ್  ಜು. 12  
ಸರ್ಕಾರದ ಮಹತ್ವಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದ್ದರೂ, ತಾಲೂಕಿನ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಸದುಪಯೋಗ ಸಿಗದಂತಾಗಿದೆ. ಸಂಬಂಧಪಟ್ಟವರು ಕೂಡಲೆ ಎಚ್ಚೆತ್ತು ಯೋಜನೆಯನ್ನು ಅರ್ಹರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಫಲಾನುಭವಿಗಳು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದೇ 10ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದೆ. ಈ ಬಗ್ಗೆ ತಾಲೂಕು ಆಹಾರ ವಿಭಾಗದ ಅಧಿಕಾರಿಗಳು ತಾಲೂಕಿನಲ್ಲೂ 10ರಂದೆ ಯೋಜನೆ ಆರಂಭಗೊಳ್ಳಲಿದ್ದು, ನ್ಯಾಯಬೆಲೆ ಅಂಗಡಿಯ ವಿದ್ಯುನ್ಮಾನ ತೂಕದ ಯಂತ್ರದ ಮೂಲಕವೆ ಖರೀದಿ ಮಾಡುವಂತೆ ಮಾಹಿತಿ ನೀಡಿದ್ದರು. ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಗೆ ಒಬ್ಬ ಸದಸ್ಯರಿರುವ 2043 ಕಾರ್ಡ್, ಇಬ್ಬರು ಸದಸ್ಯರಿರುವ 3617 ಕಾರ್ಡ್ ಹಾಗೂ ಮೂವರು ಅಥವಾ ಹೆಚ್ಚಿಗಿರುವ ಒಟ್ಟು 31604 ಕಾರ್ಡ್ಗಳಿವೆ. ತಾಲೂಕಿನಲ್ಲಿ ಯೋಜನೆ ಅನುಷ್ಠಾನಕ್ಕೆ ಒಟ್ಟಾರೆ104.11ಟನ್ ಅಕ್ಕಿ ಬೇಕಾಗಿದೆ.
ಶನಿವಾರದ ನಂತರ: ಬುಧವಾರವೇ ಯೋಜನೆ ಜಾರಿಗೊಂಡು ಅಕ್ಕಿ ದೊರೆಯುತ್ತದೆ ಎಂದು ಬಹುತೇಕ ಕಾರ್ಡ್ದಾರರು ನ್ಯಾಯಬೆಲೆ ಅಂಗಡಿಗಳ ಬಳಿ ಎಡತಾಕಿದರು. ಆದರೆ ನ್ಯಾಯಬೆಲೆ ಅಂಗಡಿಗಳಿಗೆ ಬೀಗ ಜಡಿದಿದ್ದು, ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೆ ಕೇಳಿದರೆ, ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಿ ನಂತರ ಇಲ್ಲಿ ನೀಡುತ್ತಾರೆಂದು ಹೇಳಿ ಸಾಗಿ ಹಾಕಿದರು.
 ಈ ಮಧ್ಯೆ ಸಂಬಂಧಪಟ್ಟ ಆಹಾರ ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇಂಡೆಂಟ್ (ಬೇಡಿಕೆ ) ಸಲ್ಲಿಸಲಾಗಿದೆ, ಗುರುವಾರ ಸಂಜೆ ಅಥವಾ ಶುಕ್ರವಾರ ಪೂರೈಕೆಯಾಗಲಿದ್ದು ಶನಿವಾರ ನಂತರ ವಿತರಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.   ಈ ಮಧ್ಯೆ ಎಪಿಎಲ್ ಕಾರ್ಡ್ಗಳಿಗೆ ಯಾವುದೇ ಆಹಾರ ಧಾನ್ಯ ನೀಡುವುದಿಲ್ಲವೆಂದು ಘೋಷಿಸಿ, ಬಿಪಿಎಲ್ ಕಾರ್ಡ್ಗೆ ಮಾತ್ರ ಆಹಾರ ಧಾನ್ಯವೆಂದು ತಿಳಿಸಿರುವ ಹಿನ್ನೆಲೆಯಲ್ಲಿ ಎಪಿಎಲ್ ಕಾರ್ಡ್ದಾರರು ತಮ್ಮ ಕಾರ್ಡ್ಗಳನ್ನು ಬಿಪಿಎಲ್ಗೆ ಪರಿವರ್ತಿಸಲು ತಾಲೂಕು ಕಚೇರಿಗೆ ಎಡತಾಕುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಭಾರಿ ಲೋಪ ದೋಷಗಳಾಗಿವೆ ಎಂಬ ವ್ಯಾಪಕ ಆರೋಪಗಳು ಸಹ ಕೇಳಿ ಬಂದು ಕಾರ್ಡ್ ವಿತರಣೆಯ ವ್ಯವಸ್ಥೆಯೆ ಗೊಂದಲದ ಗೂಡಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.