ಆರ್ಟಿಸಾನ್ ಹಬ್ ಸ್ಥಾಪನೆಗೆ ವೇದಿಕೆ ಸಜ್ಜು
ಕ.ಪ್ರ.ವಾರ್ತೆ ತುಮಕೂರು ಜು.14
ಒಂದೇ ಕಡೆ ಸುಮಾರು 150 ಉತ್ಪನ್ನಗಳ ಕ್ಲಸ್ಟರ್ ಸ್ಥಾಪಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಆರ್ಟಿಸಾನ್ ಹಬ್ ಸ್ಥಾಪನೆಗೆ ವೇದಿಕೆ ಸಜ್ಜಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ಜು. 27 ರಂದು ಮಹತ್ವದ ಸಭೆ ಕೂಡ ಏರ್ಪಾಟಾಗಿದೆ.
ಈ ಸಂಬಂಧ ಚರ್ಚಿಸುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ತುಮಕೂರಿನ ಜಯನಗರದ ಬಸ್ಸ್ಟಾಪ್ ಪಕ್ಕದಲ್ಲಿರುವ ಭಾರದ್ವಾಜ್ ಟವರ್ಸ್ನ ಮೊದಲನೇ ಮಹಡಿಯಲ್ಲಿ ಆರ್ಟಿಸಾನ್ ಹಬ್ ಸಮಾಲೋಚನಾ ಸಭೆ ಏರ್ಪಾಟಾಗಿದೆ ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ (ಆರ್ಫ್) ಅಧ್ಯಕ್ಷ ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯ ಪ್ರತಿಯೊಂದು ಬೆಳೆಗೆ ಮೌಲ್ಯವರ್ಧಿತ ಬೆಲೆ, ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮತ್ತು ಜಿಲ್ಲೆಯಲ್ಲಿ ದೊರಕುವ ಕಚ್ಚಾವಸ್ತುಗಳಿಂದ ಉತ್ಪನ್ನಗಳನ್ನಾಗಿ ಮಾಡಲು ಪೂರಕ ಸೌಲಭ್ಯಗಳನ್ನು ಒದಗಿಸಲು ಒಂದೇ ಕಡೆ ಸುಮಾರು 150 ಉತ್ಪನ್ನಗಳ ಕ್ಲಸ್ಟರ್ಗಳನ್ನು ಸ್ಥಾಪಿಸಿ, ಅಂತರಾಷ್ಟ್ರೀಯ ಗುಣಮಟ್ಟದ ಆರ್ಟಿಸಾನ್ ರೀಸರ್ಚ್ ಹಬ್ ಸ್ಥಾಪಿಸುವ ಸಂಬಂಧ ಈ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಚಾಲನೆ: ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಜಿಲ್ಲೆಯಲ್ಲಿ ದೇಸಿ ಆರ್ಟಿಸಾನ್ ಹಬ್ ಸ್ಥಾಪಿಸಲು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮತಿಗಾಗಿ ಮನವಿ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯದ ಆಯುಕ್ತ ಎಂ. ಮಹೇಶ್ವರರಾವ್, ಯೋಜನೆ ಅನುಷ್ಠಾನದ ಬಗ್ಗೆ ಸಾಧ್ಯತಾ ವರದಿ (ಫೀಸಿಬಲಿಟಿ ರಿಪೋರ್ಟ್) ಸಿದ್ಧಪಡಿಸಲು ಅನುಮತಿ ಕೋರಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಮಾದರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಗವರ್ನಿಂಗ್ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೈಸ್ ಅಂಡ್ ಗೈನ್ (ವಲ್ರ್ಡ್ ಆಫ್ ಇಂಟರೆಸ್ಟಿಂಗ್ ಸೈನ್ಸ್ ಎಜುಕೇಷನ್ ಅಂಡ್ ಗ್ರೀನ್ ವ್ಯಾಲಿ ಆಡ್ ವ್ಯಾಲ್ಯೂ ಫಾರ್ಮರ್ಸ್ ಅಂಡ್ ದೇಸಿ ಆರ್ಟಿಸಾನ್ಸ್ ಆಕ್ಟಿವಿಟೀಸ್, ಇನ್ನೊವೇಟಿವ್ ನರ್ಚರ್) ಎಂಬ ಸಮಿತಿಯನ್ನು ರಚಿಸಿ ಆ ಮೂಲಕ ಯೋಜನೆ ಯಶಸ್ಸಿಗೆ ನಿರಂತರವಾಗಿ ಶ್ರಮಿಸಲು ನಿರ್ದಿಷ್ಟ ರೂಪು ರೇಷೆಗಳೊಂದಿಗೆ, ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿನ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜನ ಜಾಗೃತಿ ಸಭೆಗಳನ್ನು ನಡೆಸುವ ಅಗತ್ಯವಿದೆ. ಹಾಗೂ ಜಿಲ್ಲೆಯ ಮಾಜಿ ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜು. 15 ರಂದು ಸಭೆ ಕರೆಯಲಾಗಿದೆ ಎಂದು ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.
ಎಲ್ಲರೂ ಭಾಗಿ: ಜು. 15 ರಂದು ಬೆಳಗ್ಗೆ 9 ಗಂಟೆಗೆ ನಗರದ ಶೆಟ್ಟಿಹಳ್ಳಿ ಮುಖ್ಯರಸ್ಥೆಯಲ್ಲಿರುವ ಜಯನಗರ ಬಸ್ಸ್ಟಾಪ್ನ ಪಕ್ಕದಲ್ಲಿರುವ ಭಾರದ್ವಾಜ್ ಟವರ್ರ್ಸ್ ಮೊದಲನೇ ಮಹಡಿಯಲ್ಲಿ ಈ ಪ್ರಸ್ತಾಪಿತ ಆರ್ಟಿಸಾನ್ ಹಬ್ ಸಭೆ ಕರೆಯಲಾಗಿದೆ. ಸಮಾಲೋಚನಾ ಸಭೆಯ ಉದ್ಠಾಟನೆಯನ್ನು ಸಂಸದ ಜಿ.ಎಸ್. ಬಸವರಾಜುನೆರವೇರಿಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಷಫಿ ಅಹಮದ್, ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಡಾ.ಎಂ.ಆರ್. ಹುಲಿನಾಯ್ಕರ್ ಉಪಸ್ಥಿತರಿರುವರು.
ಆಸಕ್ತರಿಗೂ ಆಹ್ವಾನ: ಜಿಲ್ಲೆಯ ಆಸಕ್ತ ಸಂಘ -ಸಂಸ್ಥೆಗಳ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು, ಕುಲ ಕಸುಬುದಾರರು, ಪರಿಣತ ತಜ್ಞರು, ಆಸಕ್ತ ರೈತರು ಸೇರಿದಂತೆ ಆಸಕ್ತರೆಲ್ಲರೂ ಭಾಗವಹಿಸಬಹುದಾಗಿದೆ ಎಂದು ಆರ್ಫ್ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.
27 ರಂದು ಸಚಿವರೊಂದಿಗೆ ಸಭೆ: ಜು. 27 ರಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರವರ ಅಧ್ಯಕ್ಷತೆಯಲ್ಲಿ ಆರ್ಟಿಸಾನ್ ಹಬ್ಗೆ ಸಂಬಂಧಿಸಿದಂತೆ ಮಹತ್ವದ ಸಭೆ ಏರ್ಪಾಟಾಗಿದೆ ಎಂದು ಕುಂದರನಹಳ್ಳಿ ರಮೇಶ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

