ತುಮಕೂರು

ಪ್ರಭಾಕರ ನಾಪತ್ತೆ ಸುತ್ತ ಸಂದೇಹ ಹುತ್ತ

Published On :

ಕನ್ನಡಪ್ರಭ ವಾರ್ತೆ, ಕೊರಟಗೆರೆ, ಜು.24
ತಾಲೂಕಿನ ಜಟ್ಟಿ ಅಗ್ರಹಾರದ ಧರ್ಮಾತ್ಮ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ಜೂನ್ 24 ರಂದು ಮನೆಯಿಂದ ಹೋದವರು ಹಿಂತಿರುಗಿ ಬಂದಿಲ್ಲ. ಆದ್ದರಿಂದ ನನ್ನ ಪತಿ ಪ್ರಭಾಕರ್ ಅವರನ್ನು ಪತ್ತೆಮಾಡಿ ಕೊಡುವಂತೆ ಪತ್ನಿ ಶಿಕ್ಷಕಿ ವಸಂತಕುಮಾರಿ ಕೊರಟಗೆರೆ ಪೊಲೀಸ್ ಠಾಣೆಗೆ ಜೂನ್ 28 ರಂದು ದೂರು ನೀಡಿದ್ದಾರೆ. ಆದರೆ ಇವರ ಕಣ್ಮರೆಯ ಹಿಂದೆ ಹಲವು ಊಹಾ ಪೋಹಗಳು ಹಬ್ಬಿವೆ. ನಾಪತ್ತೆಯಾಗಿರುವ ಪ್ರಭಾಕರ್ ಸುಮಾರು ವರ್ಷಗಳಿಂದಲೂ ತಾಲೂಕಿನಲ್ಲಿ ಸರ್ಕಾರೇತರ ಸಂಸ್ಥೆ (ಎನ್‌ಜಿಓ) ನಡೆಸುತ್ತಿದ್ದು ಈ ಸಂಸ್ಥೆಯಿಂದ ಸರ್ಕಾರದ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.
ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರದ ರಾಜೀವ್ ಗಾಂಧಿ ಉದ್ಯಮಿ ಮಿತ್ರ ಯೋಜನೆಯಡಿ ಜಿಲ್ಲೆಯ ನಿರುದ್ಯೋಗಿಗಳಿಗೆ ಸಾಲ ಕೊಡಿಸುವುದಾಗಿ ಹೇಳಿ ಫಲಾನುಭವಿಗಳಿಂದ ಮುಂಗಡವಾಗಿ ಹಣ ಪಡೆದ ಕೆಲವೇ ದಿನಗಳಲ್ಲಿ ನಾಪತ್ತೆಯಾಗಿರುವುದು ಸಾರ್ವಜನಿಕರ ಅನುಮಾನಗಳಿಗೆ ಆಸ್ಪದ ನೀಡಿದೆ.
ಈ ಸಂಬಂಧ ಎನ್‌ಜಿಓ ವತಿಯಿಂದ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿ ಒಂದು ಲಕ್ಷ ರೂ ಸಾಲ ನೀಡಲು 10 ಸಾವಿರ ರು.ಗಳಂತೆ ಮುಂಗಡ ಹಣ ಪಡೆದು ಸಾಲದ ಹಣಕ್ಕೆ ಪ್ರತಿಯಾಗಿ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿದೆ ಎಂದು ತಾಲೂಕಿನ ಮಲ್ಲೇಕಾವು ಗ್ರಾಮದ ವಾಸಿ ಟಿ.ಸಿ.ಸಾಗರ್ ಎಂಬುವರು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದರಿಂದ ವಂಚನೆ ಪ್ರಕರಣ ಕೂಡಾ ಪ್ರಭಾಕರ್ ಮೇಲೆ ದಾಖಲಾಗಿದೆ. ಇದೇ ರೀತಿ ಸಾಕಷ್ಟು ಮಂದಿಯಿಂದ ಹಣ ಪಡೆದಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಬಹುತೇಕ ಮಂದಿ ದೂರು ನೀಡಲು ಹಿಂದೇಟಾಕುತ್ತಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಪ್ರಭಾಕರ್‌ರವರು ಹಲವು ಮಂದಿಯ ಬಳಿ ಸಾಲವಾಗಿ ಲಕ್ಷಾಂತರ ರು. ಪಡೆದಿದ್ದು ಹಣ ನೀಡಿದವರಿಂದ ಹಣ ವಾಪಸ್ಸಿಗೆ ಒತ್ತಡ ಹೆಚ್ಚಾಗಿತ್ತು ಎನ್ನಲಾಗಿದೆ. ಆದರೆ ಪೊಲೀಸರ ತನಿಖೆಯಿಂದ  ಈ ಪ್ರಕರಣದ ಹಿಂದಿನ ಮರ್ಮ ಹೊರಬರಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.