ಕನ್ನಡ ಚಿತ್ರರಂಗದ ಮೇರು ಪ್ರತಿಭೆ ನರಸಿಂಹರಾಜು
ತಿಪಟೂರು: ತಾಲೂಕಿನಲ್ಲಿ ಹುಟ್ಟಿ ಕನ್ನಡ ಚಿತ್ರರಂಗದಲ್ಲಿ ಮೇರು ಪ್ರತಿಭೆಯಾಗಿ ಬೆಳೆದ ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟ ನರಸಿಂಹರಾಜುರವರನ್ನು ತಿಪಟೂರಿನಲ್ಲಿ ನೆನೆಯದೇ ನಾವೆಲ್ಲಾ ಮರೆತಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕುಮಾರ್ ಯಾದವ್ ಅಭಿಪ್ರಾಯಪಟ್ಟರು.
ನಗರದ ಬಯಲು ರಂಗಮಂದಿರದಲ್ಲಿ ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜುರವರ 90ನೇ ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಅವರು ಇಂತಹ ಮಹಾನ್ ಕಲಾವಿದನನ್ನು ನಿರಂತರ ನೆನಪಿಸುವ ಕೆಲಸ ಆಗಬೇಕಿದೆ.ನಗರದಲ್ಲಿ ಅವರ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರಂಗಮಂದಿರವನ್ನು ಶೀಘ್ರ ಮುಗಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದರು.
ಸ್ವಾತಂತ್ರ್ಯ ಹೋರಾಟಗಾರ ಹನುಮಂತಪ್ಪ ಮಾತನಾಡಿ ಮಹಾನ್ ಕಲಾವಿದ ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜು ಹುಟ್ಟೂರಾದ ನಗರದಲ್ಲಿ ಅವರ ನೆನಪನ್ನು ಉಳಿಸುವ ನಿರಂತರ ಚಟುವಟಿಕೆಗಳ ಮೂಲಕ ಸಾಮಾಜಿಕ ಚೈತನ್ಯ ತುಂಬಬೇಕೆಂದು ತಿಳಿಸಿದರು.
ವಕೀಲರಾದ ಶೋಭಾ ಜಯದೇವ್ ಮಾತನಾಡಿ ಎಂತಹ ಪಾತ್ರಗಳಿಗೂ ಜೀವ ತುಂಬುತ್ತಿದ್ದ ನರಸಿಂಹರಾಜು ಕಲೆಯನ್ನು ಸಾಮಾಜಿಕ ಪಾಠವಾಗಿಯೂ ಪರಿಗಣಿಸಿದ್ದರು.
ಯಾವುದೇ ಪಾತ್ರಕ್ಕೆ ಹಾಸ್ಯ ಲೇಪ ಕೊಡುತ್ತಲೆ ಗಂಭೀರವಾದ ವಿಚಾರಗಳನ್ನು ಮುಟ್ಟಿಸುತ್ತಿದ್ದರು. ಅವರ ನೆನಪಲ್ಲಿ ನಗರದಲ್ಲಿ ಪ್ರತಿ ವರ್ಷ ಅರ್ಥಪೂರ್ಣ ಕಾರ್ಯಕ್ರಮ ನಡೆಯುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆ ಘಟಕದ ಅಧ್ಯಕ್ಷೆ ಲೀಲಾ ಪ್ರಕಾಶ್,ಕರವೇ ತಾ.ಪ್ರಧಾನ ಕಾರ್ಯದರ್ಶಿ ಭಾಸ್ಕರ್,ಉಪಾಧ್ಯಕ್ಷ ರಾಜು, ಖಜಾಂಚಿ ಎಜಾಸ್,ಕಾರ್ಯದರ್ಶಿಗಳಾದ ಮರುಳಪ್ಪ, ಆಶಾಕುಮಾರ್, ಯಶೋಧಮ್ಮ, ಗೀತಾಬಾಯಿ, ರಂಗ ನಿರ್ದೇಶಕ ಸತೀಶ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

