ತುಮಕೂರು

ಮದುವೆ ಆಗುತ್ತೇನೆಂದು ಕೈ ಕೊಟ್ಟ ಪ್ರೇಮಿ

Published On :

ಕುಣಿಗಲ್: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಮಜಾ ಮಾಡಿ ಕೈ ಕೊಟ್ಟ ಪ್ರಿಯಕರನ ವಿರುದ್ಧ ಯುವತಿ ದೂರು ನೀಡಿದ್ದಾಳೆ.
ಎಂಬಿಎ ವ್ಯಾಸಂಗ ಮಾಡುತ್ತಿದ್ದ ಪಟ್ಟಣದ ಯುವತಿಯೊಬ್ಬಳನ್ನು ಪಟ್ಟಣದ 11ನೇ ವಾರ್ಡ್‌ನ ಲಕ್ಷ್ಮೀಶ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಮದುವೆಯಾಗುತ್ತೇನೆಂದು ನಂಬಿಸಿ ಪ್ರವಾಸಕ್ಕೆ ಕರೆದೊಯ್ದು ದೈಹಿಕ ಸಂಬಂಧಕ್ಕೆ ಒತ್ತಾಯ ಮಾಡಿದ್ದಾನೆ. ಇದಕ್ಕೆ ಯುವತಿ ವಿರೋಧಿಸಿದರೂ ಬಲವಂತದಿಂದ ದೈಹಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ಮದುವೆಯಾಗುವಂತೆ ಪ್ರಿಯಕರನ ಬಳಿ ಯುವತಿ ಅಂಗಲಾಚಿದಾಗ ಆತ ನಾನು ಅಂಗವಿಕಲ, ಆರ್ಥಿಕವಾಗಿ ಸದೃಢವಾಗಿಲ್ಲ, ಆರ್ಥಿಕವಾಗಿ ಮುಂದೆ ಬಂದ ಮೇಲೆ ಮದುವೆಯಾಗುವುದಾಗಿ ತಿಳಿಸಿದ್ದಾನೆ. ಗರ್ಭಿಣಿಯಾದ ಯುವತಿ ಮದುವೆಯಾಗುವಂತೆ ಪೀಡಿಸಿದಾಗ ತುಮಕೂರಿನ ಅರುಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಸಹ ಮಾಡಿಸಿದ್ದನೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಇಷ್ಟೆಲ್ಲಾ ಆದರೂ ಮದುವೆ ಮಾಡಿಕೊಳ್ಳುವಂತೆ ಯುವತಿಯು ಲಕ್ಷ್ಮೀಶ, ಆತನ ಮನೆಯವರನ್ನೂ ಕೇಳಿಕೊಂಡಾಗ ಮನೆಯವರು ಹಣದ ಆಮಿಷ ನೀಡಿ, ಪ್ರಾಣ ಬೆದರಿಕೆ ಹಾಕಿದ್ದಾರೆಂದು ಯುವತಿ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜಾಸಾಬ್ ಅಧಿಕಾರ ಸ್ವೀಕಾರ ವೇಳೆ ಪ್ರೊ.ಶಿವಲಿಂಗಯ್ಯ ಗೈರು
ತುಮಕೂರು: ತುಮಕೂರು ವಿವಿ ನೂತನ ಕುಲಪತಿ ಡಾ. ಎ.ಎಚ್. ರಾಜಾಸಾಬ್ ಅವರ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಪ್ರಭಾರ ಕುಲಪತಿ ಡಾ.ಡಿ. ಶಿವಲಿಂಗಯ್ಯ ಅವರ ಗೈರು ಹಾಜರಿ ಚರ್ಚೆಗೀಡಾಗಿದೆ. ಅಧಿಕಾರ ಹಸ್ತಾಂತರಿಸಬೇಕಿದ್ದ ಶಿವಲಿಂಗಯ್ಯ ಎಲ್ಲಿ ಹೋಗಿದ್ದರು ಎಂಬ ಮಾಹಿತಿಯನ್ನು ವಿವಿ ಆಡಳಿತ ಮಂಡಳಿ ನೀಡಿಲ್ಲ. ಶಿವಲಿಂಗಯ್ಯ ಏಕ ಕಾಲದಲ್ಲಿ ಪ್ರಭಾರ ಕುಲಪತಿ, ಕುಲಸಚಿವ ಹಾಗೂ ಹಾಗೂ ವಿವಿಯ ಹಿರಿಯ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತ್ರಿಪಾತ್ರಾಭಿನಯ ಮಾಡುತ್ತಿದ್ದರು.

ಇಂದು ವಾರ್ಷಿಕ ಮಹಾಸಭೆ
ತಿಪಟೂರು: ತಿಪಟೂರು ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘದ 6ನೇ ವರ್ಷದ ಸರ್ವಸದಸ್ಯರ ಮಹಾಸಭೆಯನ್ನು 28ರಂದು ಬೆಳಗ್ಗೆ 10.30ಕ್ಕೆ ಕಚೇರಿಯ ಆವರಣದಲ್ಲಿ ಏರ್ಪಡಿಸಲಾಗಿದೆ. ಆದ್ದರಿಂದ ಸದಸ್ಯರೆಲ್ಲರೂ ಆಗಮಿಸಬೇಕಾಗಿದೆ ಸಂಘವು ತಿಳಿಸಿದೆ.

ಅವೋಪ ನೂತನ ಮಂಡಳಿ
ತುಮಕೂರು: ತುಮಕೂರಿನ ಗಾಂಧಿನಗರದ ಕಸ್ತೂರ್‌ಬಾ ರಸ್ತೆಯಲ್ಲಿರುವ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ (ಅವೋಪ) 2013-15 ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಗಿದೆ. ಹೆಚ್.ಎನ್. ರಾಧಾಕೃಷ್ಣ ಗುಪ್ತ ಅಧ್ಯಕ್ಷರಾಗಿ, ಈ.ಆರ್. ಗೋಪಾಲಕೃಷ್ಣ ಉಪಾಧ್ಯಕ್ಷರಾಗಿ ಎಸ್. ಪ್ರಸನ್ನ ಕಾರ್ಯದರ್ಶಿಯಾಗಿ, ಸಿ. ಶ್ರೀನಿವಾಸ್ ಜಂಟಿ ಕಾರ್ಯದರ್ಶಿಯಾಗಿ, ಕೆ.ಎಸ್. ಗಂಗಾಧರಶೆಟ್ಟಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮಂಜುಳಾ ವಿಜಯಶಂಕರ್, ರಾಮರತ್ನ, ಡಾ. ವಿವೇಕಾನಂದಶೆಟ್ಟಿ, ಟಿ. ನರಸಿಂಹಮೂರ್ತಿ, ಗೋವಿಂದರಾಜ ಗುಪ್ತ, ಟಿ.ಎನ್. ಗಂಗಾಧರ ಆಯ್ಕೆಯಾಗಿದ್ದಾರೆ.

ನಾಳೆ ಪ್ರವಚನ
ತುಮಕೂರು: ವಿದ್ಯಾಮಾನ್ಯ ತೀರ್ಥರ ಜನ್ಮಶತಮಾನೋತ್ಸವದ ಅಂಗವಾಗಿ ಮಹಾಭಾರತ ಶುದ್ಧಪಾಠದ ಪ್ರಸಾರೋತ್ಸವವನ್ನು 100 ಊರುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತುಮಕೂರಿನ ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಜು. 29 ಹಾಗೂ ಜು. 30 ಸಂಜೆ 6 ಕ್ಕೆ ಪ್ರವಚನ ಏರ್ಪಡಿಸಲಾಗಿದೆ.

ಅರ್ಜಿ ಆಹ್ವಾನ
ಮಧುಗಿರಿ: ಮಧುಗಿರಿಯ ವಿಪ್ರ ಯುವ ವೇದಿಕೆ ಆಶ್ರಯದಲ್ಲಿ 2012-13ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.75 ಕ್ಕಿಂತ ಅಧಿಕ ಅಂಕ ಗಳಿಸಿದ ಮಧುಗಿರಿ ತಾಲೂಕಿನ ವಿಪ್ರ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  ಆ.2ರ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಬಿ.ಆರ್.ಸತ್ಯನಾರಾಯಣ 9448662403, 9901106767 ಇವರಿಗೆ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.