'ಶಿಕ್ಷಣವಿಲ್ಲದ ಜೀವನ ಹಾಳು ಮನೆಯಂತೆ'
ತುಮಕೂರು: ಶೀಲ, ಸಂಸ್ಕೃತಿಗೆ ಶಿಕ್ಷಣವೇ ಮೂಲ. ಅದು ಪವಿತ್ರ ಜೀವನ ನೀಡುತ್ತದೆ. ಮನುಷ್ಯನನ್ನು ಪರಿಪೂರ್ಣವಾಗಿಸುತ್ತದೆ. ಶಿಕ್ಷಣವಿಲ್ಲದ ಜೀವನ ಹಾಳು ಮನೆಯಂತೆ, ಜಲವಿಲ್ಲದ ತಟಾಕದಂತೆ ಎಂದು ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ನಾಗಭೂಷಣ್ ತಿಳಿಸಿದರು.
ಅವರು ಸಿದ್ಧಗಂಗಾ ಮಹಿಳಾ ಕಾಲೇಜಿನ ಆವರಣದಲ್ಲಿ ನವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಶನ್ ಕೋರ್ಸ್ಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವ್ಯಕ್ತಿ ತನ್ನ ಸ್ಥಾನದಲ್ಲಿ ತಾನು ಮಾಡುವ ಕಾರ್ಯವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡಬೇಕು. ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆ. ಈ ಸಂಸ್ಥೆಯ ಆಶ್ರಯದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಬಂದಿರುವ ನೀವು ಈ ಸಿದ್ಧಗಂಗಾ ಮಠದ ಕೀರ್ತಿಗೆ ಕಾರಣರಾಗಿ ರಾಷ್ಟ್ರದ ಸಂಪತ್ತಾಗಬೇಕೆಂಬುದೇ ನನ್ನ ಆಶಯ ಎಂದು ಕಿವಿ ಮಾತು ಹೇಳಿದರು.
ಈ ಸಂಸ್ಥೆ ಬೆಳೆದು ಬಂದ ಬಗೆಯನ್ನು ತಮ್ಮ ಉಪನ್ಯಾಸದಲ್ಲಿ ತೆರೆದಿಟ್ಟ ಇತಿಹಾಸ ಪ್ರಾಧ್ಯಾಪಕ ಡಾ. ಡಿ.ಎನ್. ಯೋಗೀಶ್, 1963 ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು 130 ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ.
50 ಸಾವಿರ ವಿದ್ಯಾರ್ಥಿಗಳಿಗೆ 3 ಸಾವಿರ ಬೋಧಕರಿಗೆ 1 ಸಾವಿರ ಬೋಧಕೇತರರಿಗೆ ಆಶ್ರಯ ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ಇದು ಡಾ. ಶಿವಕುಮಾರ ಸ್ವಾಮೀಜಿಯವರ ತಪಸ್ಸಿನ ಫಲವೇ ಎಂದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ರಾಜಶೇಖರ್ರವರು ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸಿ ಓದಿಗೆ ಸಹಕಾರಿಯಾಗುತ್ತವೆ. ಹೆಚ್ಚೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ ಕಾಲೇಜಿಗೆ ಕೀರ್ತಿ ತನ್ನಿ ಎಂದರು.
ವೇದಿಕೆಯಲ್ಲಿ ಪ್ರೊ. ಎಸ್.ಎಲ್. ಕಾಡದೇವರ ಮಠ, ಪ್ರೊ. ಮಹಮ್ಮದ್ ಅತಾವುಲ್ಲಾ, ಪ್ರೊ. ಡಿ.ಆರ್. ಮೋಹನ ಕುಮಾರ, ಬಿ.ಜಿ.ಗಂಗಣ್ಣ, ರೇಣುಕಾಪ್ರಸಾದ, ಪ್ರೊ. ಬಿ.ಎಂ ಕಂಠಪ್ಪ, ಡಾ.ಕೆ.ಸಿ ಜಯಸ್ವಾಮಿ ಇತರರು ಇದ್ದರು.
ಸಂಚಾಲಕ ಪ್ರೊ. ಕೆ.ಆರ್. ಮಾಧವ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೌಮ್ಯಶ್ರೀ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

