ಬ್ಯಾಂಕಿಂಗ್ ಸಮಸ್ಯೆಗೆ ದೂರು ಸ್ವೀಕಾರ
ಮೈಸೂರು: ಹೆಬ್ಬಾಳು ಕೈಗಾರಿಕ ಪ್ರದೇಶದ ತಯಾರಕರ ಸಂಘವು ಆರ್ಬಿಐ ಅಧಿಕಾರಿಗಳೊಂದಿಗೆ ಬ್ಯಾಂಕಿಂಗ್ ಸಮಸ್ಯೆ ಪರಿಹಾರ ಕುರಿತು ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಂಇ ಕೈಗಾರಿಕೋದ್ಯಮಿಗಳು ತಮ್ಮ ಸಮಸ್ಯೆಯನ್ನು ಪತ್ರದ ಮೂಲಕ ಕಳುಹಿಸಿಕೊಡಬೇಕು ಎಂದು ಸಂಘ ಮನವಿ ಮಾಡಿದೆ. ಆರ್ಬಿಐ ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ, ಎಸ್ಎಸ್ಎಂಇ ಕೈಗಾರಿಕೋದ್ಯಮಿಗಳು ಆ.3 ರೊಳಗೆ ತಮ್ಮ ಸಮಸ್ಯೆಗಳ ಕುರಿತು ಸಂಕ್ಷಿಪ್ತವಾದ ಪತ್ರವನ್ನು ಕಾರ್ಯದರ್ಶಿ, ಹೆಬ್ಬಾಳು ಕೈಗಾರಿಕಾ ಪ್ರದೇಶದ ತಯಾರಕರ ಸಂಘ, ಮೈಸೂರು-16 ಇಲ್ಲಿಗೆ ಅಥವಾ ಇ-ಮೇಲ್ ವಿಳಾಸ ್ಝಜಟಛಟಣಝಅಟಛ್ಝಟ.್ಛ್ಟಟ ಗೆ ಕಳುಹಿಸಿಕೊಡಬಹುದು ಎಂದು ಕಾರ್ಯದರ್ಶಿ ಸುಬ್ರಹ್ಮಣಿಯನ್ ತಿಳಿಸಿದ್ದಾರೆ.
ನಾಳೆ ಕೊನೆ ದಿನ
ಮೈಸೂರು: ಅಖಿಲ ನಾಮಧಾರಿಗೌಡರ ಸಂಘವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ, ಪದವಿ, ಸ್ನಾತಕೋತ್ತರ ಚಿನ್ನದ ಪದಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ಜು.31 ರೊಳಗೆ ಅರ್ಜಿ ಸಲ್ಲಿಸಿ. ವಿವರಗಳಿಗೆ ಮೊ.9980081550 ಸಂಪರ್ಕಿಸಬಹುದು.
ಡೆಂಘೀಗೆ ವಿದ್ಯಾರ್ಥಿ ಬಲಿ
ಅರಸೀಕೆರೆ: ಡೆಂಘೀಗೆ ತಾಲೂಕಿನ ಚಿಕ್ಕೂರು ನಾಯಕರ ಹಟ್ಟಿಯ ವಿದ್ಯಾರ್ಥಿ ಸುನಿಲ್ ಸೋಮವಾರ ಬಲಿಯಾಗಿದ್ದಾನೆ. ಡೆಂಘೀ ಜ್ವರದಿಂದ ಬಳಲುತ್ತಿದ್ದ ಬಾಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈತ ಮೃತಪಟ್ಟಿದ್ದಾನೆ. ಬಾಲಕನ ಶವ ಗ್ರಾಮಕ್ಕೆ ಬರುತ್ತಿದ್ದಂತೆ ಊರ ಜನ ಜಮಾಯಿಸಿದರು. ಬಾಲಕನ ಪೋಷಕರ ಆಕ್ರಂದನ ಎಲ್ಲರ ಮನ ಮಿಡಿಯಿತು. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಕೆ.ಎಂ.ಶಿವಲಿಂಗೆಗೌಡ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳಿದರು.
ಅಂದರ್ ಬಾಹರ್ 22 ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 22 ಮಂದಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅರಕಲಗೂಡು ತಾಲೂಕು, ಕೊಣನೂರು ಹೋಬಳಿ, ಕಡುವಿನಹೊಸಳ್ಳಿ ಗ್ರಾಮದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಡವಿನ ಹೊಸಳ್ಳಿಯ ವೆಂಕಟೇಗೌಡ (40), ಚನ್ನರಾಯನಾಯ್ಕ (50), ನಾಗರಾಜ (30), ಕುಶಾಲಗನರ ಹೋಬಳಿಯ ಶಿರಂಗಾಲ ಗ್ರಾಮದ ಪುರುಷೋತ್ತಮ (45), ಶಿರಂಗಾಲ, ಸುರೇಶ (40), ಸೋಮಶೇಖರ (45), ಮೂರ್ತಿ (34), ಪ್ರಕಾಶ (28), ಶ್ರೀನಿವಾಸ (48), ಲೋಕೇಶ (49), ನಟರಾಜ (48), ಸುರೇಶ (45), ಪುಟ್ಟರಾಜು (55), ಕಡವಿನಹೊಸಳ್ಳಿ ಬಸವರಾಜ (58) ಬಂಧಿತ ಆರೋಪಿಗಳು. ಪಣಕ್ಕಿಟ್ಟಿದ್ದ 19915 ರು. ನಗದು ವಶಪಡಿಸಿಕೊಂಡಿರುವ ಕೊಣನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಾಸನ ತಾಲೂಕು ದಾಸರಕೊಪ್ಪಲಿನ ರವಿ ಎಂಬುವರ ಹಿತ್ತಲಿನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾಸರಕೊಪ್ಪಲಿನ ರಾಮಮಂದಿರ ಬಳಿಯ ನಿವಾಸಿ ದಿನೇಶ (40), ದಿನೇಶ (40), ಸಿದ್ದಾಚಾರಿ (38), ವೆಂಕಟರಾಮು, ಉಮೇಶ (33), ಚಂದ್ರಚಾರಿ (31), ವಾಸುದೇವ (22), ದಿನೇಶ (41) ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 15285 ರು. ನಗದು ವಶಪಡಿಸಿಕೊಂಡಿರುವ ಬಡಾವಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮದ್ಯ: ಒಬ್ಬ ಬಂಧನ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ತಾಲೂಕಿನ ಬಾಣಾವರ ಹೋಬಳಿಯ ಹಿರಿಯೂರು ಗ್ರಾಮದಲ್ಲಿ ಇತ್ತೀಚೆಗೆ ಬಂಧಿಸಿದ್ದಾರೆ.
ಬಾಣಾವರ ಹೋಬಳಿ, ಹಿರಿಯೂರು ಗ್ರಾಮದ ರಾಜಣ್ಣ (41) ಬಂಧಿತ ಆರೋಪಿ. ಇವರು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮದ್ಯ ಮಾರಾಟಕ್ಕಿಟ್ಟಿದ್ದ 886 ರು. ಬೆಲೆಯ 40 ರಾಜಾ ವಿಸ್ಕಿ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡ ಬಾಣಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ವಶ
ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ, ಬಾಗೂರನಹಳ್ಳಿ ಗ್ರಾಮದ ದೇವರಾಜ ಎಂಬುವರ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿ ದೇವರಾಜ ಪರಾರಿಯಾಗಿದ್ದಾನೆ. ಮದ್ಯ ಮಾರಾಟಕ್ಕಿಟ್ಟಿದ್ದ 962 ರು. ಬೆಲೆಯ ಮದ್ಯದ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡಿರುವ ಗಂಡಸಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಯನ ಸ್ಪರ್ಧೆ
ಮೈಸೂರು: ರೋಟರಿ ಕ್ಲಬ್ ಆಫ್ ಮೈಸೂರು ಬೃಂದಾವನ್ ರಾಗ ರೋಟರಿ ಹೆಸರಿನಲ್ಲಿ ಜಿಲ್ಲಾ ಅಂತರ ಶಾಲಾ ಹಾಡುಗಾರಿಕೆ ಸ್ಪರ್ಧೆಯನ್ನು ಆ.4ರ ಬೆಳಗ್ಗೆ 9ಕ್ಕೆ ಆಯೋಜಿಸಿದೆ.
ಭಾಗವಹಿಸುವ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿಯೊಡನೆ ಬರಬೇಕು. 1 ರಿಂದ 4ನೇ ತರಗತಿ, 5 ರಿಂದ 7 ಮತ್ತು 8 ರಿಂದ 10ನೇ ತರಗತಿವರೆಗೆ ಮೂರು ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಭಾವಗೀತೆ ಸ್ಪರ್ಧೆ ಮತ್ತು ಚಿತ್ರಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚು ಬಹುಮಾನ ಗಳಿಸಿದ ಶಾಲೆಗೆ ಪರ್ಯಾಯ ಪಾರಿತೋಷಕ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9886764542, 9886054999 ಸಂಪರ್ಕಿಸ ಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

