ಮದಲೂರು ಕೆರೆ ಕಾಮಗಾರಿ ಶೀಘ್ರ ಪೂರ್ಣ: ಜಯಚಂದ್ರ
ಕ.ಪ್ರ.ವಾರ್ತೆ ಶಿರಾ ಜು. 29
ತಾಲೂಕಿನ ಕಳ್ಳಂಬೆಳ್ಳ ಭಾಗದ ರೈತರು ಔದಾರ್ಯ ತೋರಿಸಿದರೆ ಇನ್ನೆರಡು ತಿಂಗಳಲ್ಲಿ ಮದಲೂರು ಕೆರೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ರಾಜ್ಯದ ಗಡಿ ಗ್ರಾಮ ಬರಗೂರಿನಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಶೈಕ್ಷಣಿಕ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೀರಿನ ಬಗ್ಗೆ ಮಾತನಾಡುವವರೆಲ್ಲರೂ ನೀರು ಹರಿಸುವುದಿದ್ದರೆ ಇಷ್ಟೊತ್ತಿಗೆ ಇಡೀ ಶಿರಾ ತಾಲೂಕೇ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು ಎಂದ ಸಚಿವರು ನೀರು ಹರಿಸುವ ವಿಚಾರ ಅತ್ಯಂತ ಸೂಕ್ಷ್ಮವಾದುದು. ಹಾಗೆ ನೋಡಿದರೆ ತುಮಕೂರು ಜಿಲ್ಲೆಗೆ ಕಾನೂನಿನಂತೆ ಹೇಮಾವತಿ ನೀರನ್ನು ಹರಿಸುವುದು ತುಂಬಾ ಕಷ್ಟವೆ ಆಗಿತ್ತು. ಆದರೂ ಹೇಮಾವತಿಯನ್ನು ತುಮಕೂರು-ಕಳ್ಳಂಬೆಳ್ಳ-ಶಿರಾ ಇನ್ನಿತರೆ ಕೆರೆಗಳಿಗೆ ಹರಿಸಲು ಹೆಚ್ಚಿನ ಪರಿಶ್ರಮ ಕಾರಣವಾಗಿದೆ ಎಂದರು.
ಬಹುತೇಕ ಪೂರ್ಣ: ಈಗ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಚಾನಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕಳ್ಳಂಬೆಳ್ಳ ಭಾಗದ ಕೆಲವೇ ರೈತರು ಮನಸ್ಸು ಮಾಡಿದರೆ ಮದಲೂರು ಚಾನಲ್ ಕಾಮಗಾರಿ ಪೂರ್ಣಗೊಳ್ಳುತ್ತದೆ. ಈಗಾಗಲೇ ಚಾನಲ್‌ಗೆ ಜಮೀನು ನೀಡಿದ ರೈತರಿಗೆ ಸರ್ಕಾರದ ನಾಲ್ಕು ಪಟ್ಟು ಬೆಲೆಯಲ್ಲಿ ಪರಿಹಾರದ ಹಣ ನೀಡಲು ಅಧಿಸೂಚನೆ ಹೊರಡಿಸಿದೆ ಎಂದರು.
ಉದ್ಯೋಗ ಅಗತ್ಯ: ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ ನಿರುದ್ಯೋಗಿಗಳಾಗಿ ಪರಿತಪಿಸುತ್ತಿರುವ ಶಿರಾ ಭಾಗದ ಯುವಕರಿಗೆ, ರೈತರಿಗೆ ಈಗ ಉದ್ಯೋಗದ ಅಗತ್ಯವಿದೆ. ಇಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗದಿದ್ದರೆ ಜನ ಗುಳೇ ಹೋಗುವುದು ಖಚಿತ. ಸರ್ಕಾರ ಕೈಗಾರಿಕೆಗಳ ಸ್ಥಾಪನೆಯತ್ತ ಗಮನ ಹರಿಸಬೇಕು. 1 ರು. ಗೆ ಅಕ್ಕಿ ನೀಡುತ್ತಿರುವುದು ಸರಿಯಾದ ಕ್ರಮ ಅನ್ನಿಸಿದರು ನಾವು ಸರ್ಕಾರದ ಹಂಗಿನಲ್ಲಿ ಬದುಕುತ್ತಿದ್ದೇವೆ ಅನ್ನಿಸುತ್ತಿದೆ ಎಂದು ತಿಳಿಸಿ ಸರ್ಕಾರ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾದರೆ ಈ ಹಿಂದಿನ ಕಮ್ಯುನಿಟಿ ಹೇಲ್ತ್ ಸೆಂಟರ್‌ಗಳನ್ನು ಸರ್ಕಾರ ಮತ್ತೆ ಪ್ರಾರಂಭಿಸಲಿ ಎಂದರು.
ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚಮಾರಯ್ಯ, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ, ಡಿ.ಸಿ. ಅಶೋಕ್, ಲಕ್ಷ್ಮೀ ನರಸಿಂಹ ಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ನರಸಪ್ಪ, ಡಾ.ಮುದ್ದರಂಗಪ್ಪ, ಡಾ.ಕೆ.ರಾಮಕೃಷ್ಣ, ಬಿ.ಹಲುಗುಂಡೇಗೌಡ, ಡಾ.ಕೆ.ತಿಮ್ಮರಾಜು, ಡಾ.ಮುಬಾರಕ್, ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

