ತುಮಕೂರು

ಸಿದ್ದುಗೆ ಮೊಯ್ಲಿ ಶ್ಲಾಘನೆ

Published On :

ತುಮಕೂರು: ಪ್ರಗತಿಪರ, ಸಮಾಜವಾದಿ ಮುಖ್ಯಮಂತ್ರಿ ಕರ್ನಾಟಕಕ್ಕೆ ಸಿಕ್ಕಿರುವುದರಿಂದ ಯೋಜನೆಗಳು ಶೀಘ್ರದಲ್ಲೇ ಜಾರಿಯಾಗವ ವಿಶ್ವಾಸವಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳುವುದರ ಮೂಲಕ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಕ್ತಕಂಠದಿಂದ ಪ್ರಶಂಶಿಸಿದರು.
ಮನಸ್ಸಿದ್ದರೆ ಮಾರ್ಗವಿದೆ ಎನ್ನುವ ಮಾತಿನಂತೆ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೊಯ್ಲಿ ಶ್ಲಾಘಿಸಿದರು. ಕೈಗಾರಿಕೆಯಲ್ಲಿ ಗುಜರಾತನ್ನು ಹಿಂದೆ ಹಾಕಿ ಇಡೀ ರಾಷ್ಟ್ರದಲ್ಲೇ ಮೊದಲ ಸ್ಥಾನಕ್ಕೆ ಬಂದು ನಿಲ್ಲುವ ಅವಕಾಶ ಕರ್ನಾಟಕಕ್ಕಿದೆ. ಗ್ಯಾಸ್ ಪೈಲ್ ಲೈನ್  ರಾಜ್ಯದ ವಿವಿಧೆಡೆ ಹಾದು ಹೋಗಲಿದೆ. ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕಷ್ಟೆ ಎಂದರು.
ರತ್ನಗಿರಿಯಿಂದ  ಬೆಂಗಳೂರು, ಕೊಚ್ಚಿನ್ನಿಂದ ಮಂಗಳೂರು, ಹಿಂದೂಪುರದಿಂದ ಬೆಂಗಳೂರು, ಚಿತ್ರದುರ್ಗದಿಂದ ಬೆಂಗಳೂರಿಗೆ ಗ್ಯಾಸ್ ಪೈಪ್ ಲೈನ್ ಹಾದು ಹೋಗಲಿದೆ. ಪೈಪ್ಲೈನ್ ಮೂಲಕ ಮನೆ-ಮನೆಗೆ ಗ್ಯಾಸ್ ಪೂರೈಕೆಯಾಗಲಿದೆ ಎಂದು ಮೊಯ್ಲಿ ಮಾಹಿತಿ ನೀಡಿದರು.
ಕೆರೋಸಿನ್ ರಹಿತ ನಗರ: ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳನ್ನು ಕೆರೋಸಿನ್ ನಗರಗಳನ್ನಾಗಿ ಮಾರ್ಪಡಿಸುವ ಇರಾದೆ ತಮ್ಮದು. ಇದಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕೆರೋಸಿನ್ ರಹಿತ ನಗರಗಳನ್ನಾಗಿ ಮಾಡಲು ಗ್ಯಾಸ್ ಸಹಕಾರಿ. ಇದರಲ್ಲಿ ಗ್ಯಾಸ್ಪೈಪ್ ಲೈನ್ ಕೂಡ ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಮೊಯ್ಲಿ ತಿಳಿಸಿದರು.
ಜಿಎಸ್ಬಿ ಸಿಟ್ಟು: ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಅವರ ಹೆಸರು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಬಿಟ್ಟು ಹೋಗಿರುವುದು ತೀವ್ರ ಚರ್ಚೆಗೆ ಕಾರಣವಾಯಿತು. ನಿಯಮದ ಪ್ರಕಾರ ಸಂಸದರ ಹೆಸರು ಆಹ್ವಾನ ಪತ್ರಿಕೆಯಲ್ಲಿರಬೇಕಿತ್ತು. ಇಲ್ಲದ್ದಕ್ಕೆ ಸಂಸದ ಬಸವರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಮೊಯ್ಲಿ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಬಸವರಾಜು ಹೇಳುತ್ತಿರುವುದು ಸರಿಯಾಗಿದೆ. ಅವರ ಸಿಟ್ಟಿಗೆ ಅರ್ಥವಿದೆ ಎಂದು ಬಸವರಾಜು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.