ತುಮಕೂರು

ತಿಂಗಳೊಳಗೆ ಶಂಕುಸ್ಥಾಪನೆಗೆ ಸಂಸದ ಬಸರಾಜ್ ಒತ್ತಾಯ

Published On :

ದೊಡ್ಡಗುಣಿ ಕೆರೆಯಿಂದ ಕುಡಿಯುವ ನೀರೊದಗಿಸುವ ಏತ ನೀರಾವರಿ ಯೋಜನೆ
ಕ.ಪ್ರ.ವಾರ್ತೆ ತುಮಕೂರು ಜೂ.27
ಗುಬ್ಬಿ ತಾಲೂಕಿನ ದೊಡ್ಡಗುಣಿ ಕೆರೆಯಿಂದ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಹೇಮಾವತಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಸಂಬಂಧಪಟ್ಟ ಗುಬ್ಬಿ ತಾಲೂಕಿನ ಹಲವು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸುವಂತೆ ತುಮಕೂರು ಸಂಸದ ಜಿ.ಎಸ್. ಬಸವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೊಡ್ಡಗುಣಿ ಕೆರೆ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ಲೈನ್ ಕೊರತೆ ಹಿನ್ನೆಲೆಯಲ್ಲಿ 36 ಲಕ್ಷ  ಮಂಜೂರು ಮಾಡಲಾಗಿದೆ. ಗುಬ್ಬಿ ತಾಲೂಕಿನ ವಿವಿಧ ಕೆರೆಗಳಿಗೆ ನೀರುಣಿಸುವ ಯೋಜನೆಗೆ 78.20 ಕೋಟಿ  ವೆಚ್ಚವಾಗಲಿದೆ. ಇದರಲ್ಲಿ 3ನೇ ಒಂದು ಭಾಗ ಅಂದರೆ 25.20 ಕೋಟಿ ಹಣವನ್ನು ಮುಂಗಡಪತ್ರದಲ್ಲಿ ಮೀಸಲಿಟ್ಟಿರುವುದರಿಂದ ಟೆಂಡರ್ ಕರೆದು ಸಚಿವ ಸಂಪುಟದ ಅನುಮೋದನೆ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಗುಬ್ಬಿ ತಾಲೂಕಿನ ಮತ್ತಿಕೆರೆ, ಹೊಸಹಳ್ಳಿ, ಶಿವನಹಳ್ಳಿ, ಕೊಡಿಯಾಲ, ಅಳಿಲುಘಟ್ಟ -2 ಕೆರೆ, ಹೊಸಕೆರೆ, ಚೇಳೂರು, ಹಾಗಲವಾಡಿ, ಭೋಗಸಂದ್ರ, ಹರದಗೆರೆ, ಶಿವಸಂದ್ರ, ಸೋಪನಹಳ್ಳಿ, ಮುಸುಕೊಂಡ್ಲಿ, ಕೊಂಡ್ಲಿ, ಹರೇನಹಳ್ಳಿ, ಎಮ್ಮೇದೊಡ್ಡಿ, ಬಿಕ್ಕೇಗುಡ್ಡ ಹಾಗೂ ಇತರೆ 22 ಕೆರೆ ಇನ್ನೂ ಮುಂತಾದ ಗ್ರಾಮಗಳ ಕೆರೆಗಳಿಗೆ ಹೇಮಾವತಿ ಕಾಲುವೆಯಿಂದ ಲಿಫ್ಟ್ ಮತ್ತು ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ ಯೋಜನೆಗೆ 22.20 ಕೋಟಿ ಹಾಗೂ ದೊಡ್ಡಗುಣಿ ಕೆರೆಗೆ ಹೇಮಾವತಿ ಕಾಲುವೆಯಿಂದಲೇ ಲಿಫ್ಟ್ ಮೂಲಕ ನೀರು ಹರಿಸುವ ಯೋಜನೆಯ ಮುಂದುವರಿದ ಕಾಮಗಾರಿಗೆ 80 ಲಕ್ಷ ಮತ್ತು ಚಿಕ್ಕನಾಯಕನಹಳ್ಳಿ ಕೆರೆಗಳಿಗೆ ನೀರುಣಿಸುವ ಯೋಜನೆಗೆ 35 ಕೋಟಿ ನೀಡಿರುವುದಕ್ಕೆ ಜಿಎಸ್‌ಬಿ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಗುಬ್ಬಿ ತಾಲೂಕಿನ ಹಾಗಲವಾಡಿಯ ಮಠದ ಹಳ್ಳ ಕೆರೆಗೆ ಹೇಮಾವತಿ ನೀರು ಹರಿಸಿ, ಸುಮಾರು 20 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯ ಸುಮಾರು 24 ಕೋಟಿ ರು. ಯೋಜನಾ ವರದಿ ಸಿದ್ದಗೊಂಡಿದೆ. ಸರ್ಕಾರ ಶೀಘ್ರವಾಗಿ ಮಂಜೂರಾತಿ ಮಾಡಲಿದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಯೋಜನೆ ಮಂಜೂರಾತಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಹಕರಿಸಿದ ಸಂಬಂಧಪಟ್ಟ ಅಧಿಕಾರಿಗಳಿಗೆ ಬಸವರಾಜ್ ಅಭಿನಂದಿಸಿದ್ದಾರೆ.
ಜಯಚಂದ್ರಗೆ ಒತ್ತಾಯ:  ಮೇಲ್ಕಂಡ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸುಮಾರು 82 ಕೋಟಿ  ವೆಚ್ಚದ್ದಾಗಿದೆ. ಈ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಶೀಘ್ರವಾಗಿ ದಿನಾಂಕ ನಿಗಧಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಅವರನ್ನು ಬಸವರಾಜ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.