ಮಧುಗಿರಿ ರೋಟರಿ ಸಂಸ್ಥೆಗೆ 22 ಪ್ರಶಸ್ತಿ
ಮಧುಗಿರಿ: ಮಧುಗಿರಿ ರೋಟರಿ ಸಂಸ್ಥೆ 2012-13ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿ ರೋಟರಿ ಜಿಲ್ಲಾ 3190 ವ್ಯಾಪ್ತಿಯ 89 ರೋಟರಿ ಪೈಕಿ ಮಧುಗಿರಿ ರೋಟರಿ ಸಂಸ್ಥೆಗೆ 22 ಪ್ರಶಸ್ತಿ ಪಡೆಯುವ ಮೂಲಕ 3190 ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ರೋಟರಿ ಅಧ್ಯಕ್ಷೆ ಲತಾ ನಾರಾಯಣ ಹಾಗೂ ಕಾರ್ಯದರ್ಶಿ ಎಂ.ವೆಂಕಟರಾಮು ತಿಳಿಸಿದ್ದಾರೆ. ಬೆಂಗಳೂರಿನ ನಿಮಾನ್ ಕನ್ವೆನ್ಷನ್ನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್.ಐ. ಜಿಲ್ಲೆ 3190 ವ್ಯಾಪ್ತಿಯಲ್ಲಿ 89 ರೋಟರಿ ಕ್ಲಬ್ಗಳಿವೆ. ಇದರಲ್ಲಿ ಉತ್ತಮ ಸಮಾಜ ಸೇವೆ ಮಾಡಿರುವ ಮಧುಗಿರಿ ರೋಟರಿ ಸಂಸ್ಥೆಗೆ 22 ಅವಾರ್ಡ್ಗಳು ಇದೇ ಪ್ರಥಮ ಬಾರಿಗೆ ಪ್ರಶಸ್ತಿ ಲಭಿಸಿದೆ. ಈ ಪೈಕಿ 5 ಸ್ಟಾರ್ ಅವಾರ್ಡ್ ಪಡೆದಿರುವುದು ಅತ್ಯಂತ ಸಂತಸ ತಂದಿದೆ ಎಂದು ಲತಾ ತಿಳಿಸಿದರು. ಮಧುಗಿರಿ ರೋಟರಿ ಸಂಸ್ಥೆಗೆ ಈ ಪ್ರಶಸ್ತಿ ದೊರೆಯುವಲ್ಲಿ ಕಾರ್ಯದರ್ಶಿ ಎಂ.ವೆಂಕಟರಾಮು, ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರ ಪರಿಶ್ರಮವಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿ ರೋಟರಿ ಸಂಸ್ಥೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಶಸ್ತಿಗಳು ದೊರೆಯಲು ಕಾರಣವಾಗಿವೆ. ಇದೇ ರೀತಿ ಮುಂಬರುವ ಅಧ್ಯಕ್ಷರಿಗೂ ಸಹಕಾರ ನೀಡುವಂತೆ ಲತಾ ನಾರಾಯಣ ಮನವಿ ಮಾಡಿದರು. ಪ್ರಶಸ್ತಿ ಪಡೆದ ಸಂತಸದ ಸಂದರ್ಭ ಕಾರ್ಯದರ್ಶಿ ಎಂ.ವೆಂಕಟರಾಮು, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಕೆ.ಎಂ.ಮಧು, ಎಂ.ಎಲ್. ಪ್ರಕಾಶ್ಬಾಬು, ಹನುಮಪ್ಪ, ನಿರ್ದೇಶಕರಾದ ಎಂ.ಶಿವಲಿಂಗಪ್ಪ, ಎಂ.ಇ. ಕರಿಯಣ್ಣ, ಗುರುರಾಜು, ಅನ್ನಪೂರ್ಣಮ್ಮ, ರಂಗನಾಥ್ ಮತ್ತಿತರರು ಉಪಸ್ಥಿತರಿರದ್ದರು.
ಕೌನ್ಸೆಲಿಂಗ್ನಿಂದ ಮುಖ್ಯಶಿಕ್ಷಕರ ನೇಮಕ
ಮಧುಗಿರಿ: ಇಲ್ಲಿನ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪದವಿಧರೇತರ ಮುಖ್ಯ ಶಿಕ್ಷಕರ ಕೌನ್ಸಿಲಿಂಗ್ ನಡೆಸಲಾಯಿತು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ತಾಲೂಕುಗಳಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 200 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಯ ಪದವಿಧರೇತರ ಮುಖ್ಯ ಶಿಕ್ಷಕರನ್ನು 200ಕ್ಕಿಂತ ಮೇಲ್ಪಟ್ಟು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳಿಗೆ ಸ್ಥಳಾಂತರಿಸಿ ಕೌನ್ಸೆಲಿಂಗ್ ಮೂಲಕ ಮುಖ್ಯ ಶಿಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಲಾಯಿತು ಎಂದು ಕಚೇರಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

