ತುಮಕೂರು

ದಲಿತರ ಮತದಾನ ಜಾಗೃತಿ ಸಮಾರಂಭ

Published On :

ತುಮಕೂರು: ಕೊರಟಗೆರೆ ತಾಲೂಕು ಸಿ.ಎನ್. ದುರ್ಗ ಹೋಬಳಿ, ಜಟ್ಟಿ ಅಗ್ರಹಾರದಲ್ಲಿ ಪ್ರಥಮವಾಗಿ ದಲಿತರ ಮತದಾನ ಜಾಗೃತಿ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾದಿಗ ದಂಡೋರ ಯುವಸೇನೆ ಜಿಲ್ಲಾಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜು ಅವರು ದಲಿತ ಜಾಗೃತಿ ಕಾರ್ಯಕ್ರಮಗಳು ತುಂಬಾ ಅವಶ್ಯಕ ಎಂದರು. ಒಳಮೀಸಲಾತಿ ವಿರೋಧಿಗಳನ್ನು ಯಾವುದೇ ಕಾರಣಕ್ಕೂ ಕಾಲೋನಿಗೆ ಬಿಟ್ಟುಕೊಳ್ಳಬಾರದು ಎಂದರು. ಕಾಲೋನಿಗೆ ಬರುವ ಯಾವುದೇ ಅಭ್ಯರ್ಥಿಗಳನ್ನು ನೀವು ಮೊದಲು ನೀವು ಒಳಮೀಸಲಾತಿ ಪರ ಇದ್ದೀರ ಎಂದು ಪ್ರಶ್ನಿಸಿ ಒಳಗೆ ಬಿಟ್ಟುಕೊಳ್ಳಿ ಎಂದರು. ಒಳಮೀಸಲಾತಿ ಪರ ಯಾರು ಇರುತ್ತೇವೆ ಎಂದು ಕಾಲೋನಿಗೆ ಬಂದು ಸಹಿ ಹಾಕುತ್ತಾರೋ ಅಂತಹವರಿಗೆ ಮತ ಹಾಕುತ್ತೇವೆ ಎಂದು ಹೇಳಿ ಎಂದು ಸಲಹೆ ನೀಡಿದರು. ಇದು ಒಂದು ಊರು, ಒಂದು ಹೋಬಳಿ, ಒಂದು ತಾಲೂಕಿಗೆ ಸೀಮಿತವಲ್ಲ. ಇದೇ ತರಹದ 224 ಕ್ಷೇತ್ರಗಳಲ್ಲೂ ಬರೆಸಿಕೊಂಡರೆ ಮಾತ್ರ ಒಳಮೀಸಲಾತಿ ಪಡೆಯುತ್ತೇವೆ. ಅಗ್ರಿಮೆಂಟ್ ಮಾಡಿಸಿಕೊಟ್ಟರೆ ಮತ ಎಂದು ಬಹಿರಂಗವಾಗಿ ಹೇಳಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.