ತುಮಕೂರು

ತಿಪಟೂರು: ಇಂದು ಶಂಕರೇಶ್ವರಸ್ವಾಮಿ ರಥೋತ್ಸವ

Published On :

ಕ.ಪ್ರ. ವಾರ್ತೆ  ತಿಪಟೂರು  ಮಾ.24
ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ  ಶಂಕರೇಶ್ವರ ಸ್ವಾಮಿ ರಥೋತ್ಸವವು  ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಸೋಮವಾರ ನಡೆಯಲಿದೆ.  ಮಧ್ಯಾಹ್ನ 12ಗಂಟೆಗೆ ಶಂಕರೇಶ್ವರಸ್ವಾಮಿ ರಥೋತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಅಂದೇ ರಾತ್ರಿ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮಾ.26ರಂದು ಬೆಳ್ಳಿ ಪಾಲಕಿ ಉತ್ಸವ ಹಾಗೂ ಅಗ್ಗುಂದ ರಾಜ್‌ಕಮಲ್ ಫೈರ್ ವರ್ಕ್ಸ್ ಅವರಿಂದ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ. ಮಾ.27ರಂದು ಉಪ್ಪರಿಗೆ ಉತ್ಸವ, ತೀರ್ಥಸ್ನಾನ, ಭೂತ ವಾಹನ, ಮಾ.28ರಂದು ಬಿಲ್ವವೃಕ್ಷೋತ್ಸವ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಏಳು ಮಂದಕ್ಕ, ಲಕ್ಷ್ಮೀನರಸಿಂಹಸ್ವಾಮಿ 7 ನೇ ವರ್ಷದ ವಾರ್ಷಿಕೋತ್ಸವ
ಶಿರಾ: ತಾಲೂಕಿನ ತೊಗರುಗುಂಟೆ ಗ್ರಾಮದ  ಏಳು ಮಂದಕ್ಕ,  ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಅಮ್ಮಾಜಮ್ಮ ದೇವರ ಏಳನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಮಾ. 27 ಮತ್ತು 28 ರಂದು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ದೊಡ್ಡೇಗೌಡರು ತಿಳಿಸಿದ್ದಾರೆ.  ಇದೇ ಸಂದರ್ಭದಲ್ಲಿ ಸರಳ ಸಾಮೂಹಿಕ ವಿವಾಹವು ನಡೆಯಲಿದೆ. ಮಾ. 27 ರಂದು ಬೆಳಿಗ್ಗೆ ದೇವರುಗಳಿಗೆ ಗಂಗಾಸ್ನಾನ, ಬೆಳ್ಳಿ ಕವಚದ ಅಲಂಕಾರ ಮಧ್ಯಾನ್ಹ 12 ಗಂಟೆಗೆ ಭಕ್ತಾದಿಗಳಿಂದ ಅಕ್ಕಿ ಅಳೆಯುವುದು ಹಾಗೂ ಮಂಡೆ ಅರ್ಪಣೆ ಸಂಜಂ 4 ಗಂಟೆಗೆ ದೇವರುಗಳ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.  ಮಾ. 28 ರಂದು ಏಳು ಮಂದಕ್ಕ ದೇವರಿಗೆ ಪಂಚಾಮೃತ ಅಭಿಷೇಕ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿದೆ.  ಮಾ.28 ರಂದು ಬೆಳಿಗ್ಗೆ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಮಾಹಿತಿಗಾಗಿ 9900936246, 9901987005 ಈ ದೂರವಾಣಿ  ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.