ಕೆಜೆಪಿ ಅಧಿಕಾರಕ್ಕೆ ತಂದರೆ ಶಾಶ್ವತ ಕುಡಿವ ನೀರು ಖಚಿತ
ಕ.ಪ್ರ. ವಾರ್ತೆ ಪಾವಗಡ ಮಾ.25
ಕೆಜಿಪಿಯನ್ನು ಅಧಿಕಾರಿಕ್ಕೆ ತಂದರೆ ಶಾಶ್ವತ ಕುಡಿಯುವ ನೀರು, ನಿರುದ್ಯೋಗ ಸಮಸ್ಯೆ ನಿವಾರಣೆ ಸೇರಿದಂತೆ ತಾಲೂಕಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬದ್ಧರಾಗಿರುವುದಾಗಿ ಮಾಜಿ ಸಿಎಂ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.
ವಿಧಾನ ಸಭಾ ಅಭ್ಯರ್ಥಿ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕೆಜೆಪಿ ಕಾರ್ಯಕರ್ತರು ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಇಲ್ಲಿನ ಫ್ಲೋರೈಡ್ ಯುಕ್ತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬಿಜೆಪಿ ಸೇರಿದಂತೆ ಯಾವ ಪಕ್ಷದ ಮುಖಂಡರು ಪ್ರಸ್ತಾವಿಸಲಿಲ್ಲ. ನೀರಿನ ಸಮಸ್ಯೆ ನಿವಾರಣೆ ಬಗ್ಗೆ ದಂಡೋರ ಎಂಬ ಸಂಘಟನೆಯೊಂದಿಗೆ ಬೆಂಗಳೂರು ವಿಧಾನ ಸೌಧದವರೆಗೆ ಪಾದಯಾತ್ರೆ ಮಾಡುವ ಮೂಲಕ ಪಾವಗಡ ಶ್ರೀರಾಮ್ ಧ್ವನಿ ಎತ್ತಿದ್ದರು ಎಂದ ಅವರು, ಯೋಜನೆ ಅನುಷ್ಠಾನ ಮಾಡುವ ಆಸಕ್ತಿ ವಹಿಸಿದ್ದ ಸಂದರ್ಭದಲ್ಲಿ ಜನಪರ ಅಭಿವೃದ್ಧಿ ಸಹಿಸದ ಬಿಜೆಪಿ ಮುಖಂಡರು ಕುತಂತ್ರ ಮಾಡಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದರು.
ಬೆಂಬಲಿಸಿ: ಎಸ್ಸಿ ಎಸ್‌ಟಿ ಸೇರಿದಂತೆ ಎಲ್ಲ ಜನರ ಕಷ್ಟ ನಿವಾರಣೆ ಕುರಿತು ಪಾವಗಡದಿಂದ ಬೆಂಗಳೂರು ವಿಧಾನ ಸೌಧದ ವರೆಗೆ ನಿರಂತರ ಹೊರಾಟ ಮಾಡುತ್ತಿರುವ ಪಾವಗಡ ಶ್ರೀರಾಮ್ ಅವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಅವರಿಗೆ ಪಾವಗಡ ವಿಧಾನ ಸಭಾ ಕ್ಷೇತ್ರಕ್ಕೆ ಕೆಜೆಪಿಯಿಂದ ಟಿಕೆಟ್ ನೀಡಿರುವುದಾಗಿ ತಿಳಿಸಿದರು. ಅತ್ಯಧಿಕ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸುವ ಮೂಲಕ ಯಡಿಯೂರಪ್ಪ ಸರ್ಕಾರ ಆಡಳಿತಕ್ಕೆ ತನ್ನಿ ಎಂದು ಮನವಿ ಮಾಡಿದರು.
ಗೆಲ್ಲಿಸಿ: ಪಾವಗಡ ಶ್ರೀರಾಮ್ ಅವರನ್ನು ಗೆಲ್ಲಿಸುವ ಮೂಲಕ ಕೆಜೆಪಿ ಸರ್ಕಾರ ತಂದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನದಿ ಮೂಲದ ನೀರು, ರೈತರ ನೀರಾವರಿಗಳಿಗೆ ಸಮರ್ಪಕ ವಿದ್ಯುತ್, ನಿರುದ್ಯೋಗ ಸಮಸ್ಯೆ ನಿವಾರಣೆ ಸೇರಿದಂತೆ ಇಲ್ಲಿನ ಜ್ವಲಂತ ಸಮಸ್ಯೆ ನಿವಾರಣೆಗೆ ಬದ್ಧರಾಗುವುದಾಗಿ ಅವರು ತಿಳಿಸಿದರು.
ಎಸ್‌ಸಿ, ಎಸ್‌ಟಿಗಳಿಗೆ ಸಾವಿರಾರು ಕೊಳವೆಬಾವಿ ಹಾಕಿಕೊಟ್ಟಿರುವುದು ಸೇರಿದಂತೆ ತಮ್ಮ ಸಿಎಂ ಅವಧಿಯಲ್ಲಿ ಅನುಷ್ಠಾನ ಮಾಡಿದ ಸಂಧ್ಯಾ ಸುರಕ್ಷೆ ಸೈಕಲ್ ವಿತರಣೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಬಿಜೆಪಿ ವಿರುದ್ಧ ಲೇವಡಿ ಮಾಡಿದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮುಕ್ಕಡಪ್ಪ, ಪಾವಗಡ ಶ್ರೀರಾಮ್ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಚ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸ್ಮಿತಾನಾಯ್ಡು, ಜಿಲ್ಲಾಧ್ಯಕ್ಷ ರವಿ, ಮುಖಂಡ ಶಿವಕುಮಾರ್, ತಾಲೂಕು ಅಧ್ಯಕ್ಷ ರವಿಶಂಕರ್ ನಾಯಕ್, ಕಾರ್ಯದರ್ಶಿ ರಂಗಸಮುದ್ರ ಜಯರಾಮ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

