ನಾಡಿಗೆ ಉತ್ತಮ ಮಳೆ-ಬೆಳೆಯಾಗಲಿ: ರಂಗಾಪುರ ಶ್ರೀ
ಕ.ಪ್ರ. ವಾರ್ತೆ ತಿಪಟೂರು ಮಾ.25
ಕಲ್ಪತರು ನಾಡಿಗ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರ ಶ್ರೀ ಕೆರೆಗೋಡಿ-ರಂಗಾಪುರ ಶ್ರೀ ಶಂಕರೇಶ್ವರ ಸ್ವಾಮಿಯವರ ರಥೋತ್ಸವ ಸೋಮವಾರ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.
ರಥೋತ್ಸವ ನಂತರ ಶ್ರೀಗಳು ಮಾತನಾಡಿ, ಕಲ್ಪತರು ನಾಡು ಭೀಕರ ಬರಗಾಲಕ್ಕೀಡಾಗಿದ್ದು, ಶ್ರೀ ಕ್ಷೇತ್ರದ ಆರಾಧ್ಯ ದೈವ ಶಂಕರೇಶ್ವರ ಮತ್ತು ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಉತ್ತಮ ಮಳೆಯಾಗಲಿದೆ. ತಾಲೂಕಿನ ಜೀವನಾಡಿ ವಾಣಿಜ್ಯ ಬೆಳೆ ತೆಂಗು ಮಳೆ ಇಲ್ಲದ್ದರಿಂದ ಕುಂದಿದೆ. ಕೊಬ್ಬರಿ ಬೆಲೆಯೂ ಹಿಂದೆಂದೂ ಕಾಣದಷ್ಟು ಕುಸಿತ ಕಂಡಿದ್ದು ತೆಂಗು ಬೆಳೆಗಾರರು ಆತಂಕದ ಬದುಕು ಬದುಕುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೆ ಮಧ್ಯೆ ಪ್ರವೇಶಿಸಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಕೊಳ್ಳುವ ವ್ಯವಸ್ಥೆ ಮಾಡಬೇಕಿದೆ. ಜೊಗೆತೆ ಕೂಡಲೆ ರಾಜ್ಯ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 1ಸಾವಿರ ರು. ಪ್ರೋತ್ಸಾಹ ಧನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ತೆಂಗು ಬೆಳೆಗಾರರಿಗೆ ನೆರವಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ರೈತರ ಸದ್ಯದ ಆತಂಕ ದಿನಗಳು ದೂರವಾಗಿ, ಭವಿಷ್ಯದ ದಿನಗಳು ರೈತರಿಗೆ ಆಶಾದಾಯದ ದಿನಗಳಾಗಲಿವೆ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ನುಡಿದರು. ರಥೋತ್ಸವದಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ, ಜಿ.ಪಂ.ಸದಸ್ಯ ತ್ರಿಯಂಬಕ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜ ಎಚ್.ಬಿ. ದಿವಾಕರ್, ಎಂ.ಆರ್. ಸಂಗಮೇಶ್, ತಾ.ಜೆಡಿಎಸ್ ಅಧ್ಯಕ್ಷ ತಡಸೂರು ಗುರುಮೂರ್ತಿ, ಕಾಂಗ್ರೆಸ್ ಮುಖಂಡ ಹುಲ್ಲುಕಟ್ಟೆ ರಾಜಣ್ಣ, ಕೆಜೆಪಿ ತಾ.ಮುಖಂಡ ಮಾರನಗೆರೆ ನಿರಂಜನ್ ಸೇರಿದಂತೆ ಶ್ರೀ ಮಠದ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ ಮತ್ತಿತರಿದ್ದರು. ಮುಖಂಡರುಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

