ತುಮಕೂರು

ಮಾಜಿ ಪ್ರೇಮಿಯ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ

Published On :

ಕುಣಿಗಲ್: ಶಾಲಾ ದಿನಗಳಿಂದ ಪ್ರಾರಂಭಗೊಂಡು, ಮದುವೆಯಾಗಿ ಮಕ್ಕಳಾದರೂ ಕಾಡುತ್ತಿದ್ದ ಮಾಜಿ ಪ್ರೇಮಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸೋಮವಾರ ನಡೆದಿದೆ.
 ಮಾಜಿ ಪ್ರೇಮಿಯ ಕಿರುಕುಳಕ್ಕೆ ಬಲಿಯಾದ ಮಹಿಳೆಯನ್ನು ಭಾಗ್ಯ (25) ಎಂದು ಗುರುತಿಸಲಾಗಿದ್ದು, ಈಕೆ ಮೂಲತಃ ಕರೆಕಲ್ಲುಪಾಳ್ಯ ಗ್ರಾಮದವಳಾಗಿದ್ದು, ಈಕೆಯ ಶಾಲಾ ದಿನಗಳಿಂದಲೂ ವಾಣಿಗೆರೆ ಗ್ರಾಮದ ಅಭಿಷೇಕ್ ಎಂಬಾತ ಪರಿಚಿತನಾಗಿ ಪ್ರೇಮಿಸುತ್ತಿದ್ದ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳ ಕೆಳಗೆ ಭಾಗ್ಯಳನ್ನು ಕಪಿನಿಪಾಳ್ಯದ ರಂಗಸ್ವಾಮಿ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈಗ ಮೂರು ವರ್ಷದ ಹೆಣ್ಣು ಮಗು ಸಹ ಇದೆ. ವೃತ್ತಿಯಲ್ಲಿ ಆಟೋ ಚಾಲಕನಾದ ರಂಗಸ್ವಾಮಿ, ಕುಟುಂಬ ಸಂತೋಷವಾಗಿಯೇ ಇತ್ತು.
 ಕೆಲ ತಿಂಗಳ ಹಿಂದೆ ಇವರು ಹೌಸಿಂಗ್ ಬೋರ್ಡ್ ಕಾಲೋನಿಯ ಮನೆಯೊಂದರಲ್ಲಿ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನದಂದು, ರಂಗಸ್ವಾಮಿ ಮನೆಯಲ್ಲಿಲ್ಲದ ವೇಳೆ, ಅಭಿಷೇಕ್ ಆಗಮಿಸಿ ಭಾಗ್ಯಳೊಂದಿಗೆ ಮಾತನಾಡಲು ಯತ್ನಿಸುತ್ತಿದ್ದ ಸಮಯದಲ್ಲಿ, ಪತಿ ರಂಗಸ್ವಾಮಿ ಅಕಸ್ಮಾತ್ ಬಂದರು. ಅಭಿಷೇಕ್ ಏಕಾಏಕಿ ಪರಾರಿಯಾದ.  ದಿಢೀರ್ ಪರಾರಿಯಾದ್ದರಿಂದ ಅನುಮಾನಗೊಂಡು ರಂಗಸ್ವಾಮಿ, ನೆರೆಹೊರೆಯವರು, ಅಭಿಷೇಕ್‌ನನ್ನು ಹಿಡಿಯಲು ಅಟ್ಟಿಸಿಕೊಂಡು ಹೋದಾಗ, ವಿಚಲಿತಳಾದ ಭಾಗ್ಯ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಳು.
ಸಾರ್ವಜನಿಕರ ಸಹಕಾರದೊಂದಿಗೆ ಅಭಿಷೇಕ್‌ನನ್ನು ಹಿಡಿದ ಪತಿ, ಆತನನ್ನು ಕುಣಿಗಲ್ ಪೊಲೀಸರ ವಶಕ್ಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪತಿ ರಂಗಸ್ವಾಮಿ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.