ಸವಾಲು ಎದುರಿಸುವ ತಾಕತ್ತಿರುವುದು ಯುವಜನತೆಗೆ ಮಾತ್ರ
ತುಮಕೂರು: ಜಗತ್ತಿನ ಯಾವುದೇ ಸವಾಲನ್ನು ಎದುರಿಸುವ ತಾಕತ್ತಿರುವುದು ಯುವಜನತೆಗೆ ಮಾತ್ರ ಎಂದು ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಕೆ. ಅಭಿಪ್ರಾಯಪಟ್ಟರು. ಅವರು ನಗರದ ಟೌನ್ಹಾಲ್ ಸರ್ಕಲ್ನಲ್ಲಿ ಎಬಿವಿಪಿ ಆಯೋಜಿಸಿದ್ದ ಭಗತ್ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನದ ಕುರಿತು ಮಾತನಾಡಿದರು. ಯುವಜನತೆಯಲ್ಲಿ ಅರ್ಥ ಮಾಡಿಕೊಳ್ಳುವ ಶಕ್ತಿಯಿದ್ದರೂ ಸುಜ್ಞಾನ, ವಿವೇಕ ಇಲ್ಲದೆ ಭೋಗದ ಬೆನ್ನು ಹತ್ತಿರುವುದು ದುರಂತ. ಜಗತ್ತಿನ ಯಾವುದೇ ಸವಾಲಿಗೂ ಎದೆಯೊಡ್ಡುವ ಶಕ್ತಿ ಇರುವುದು ಯುವಶಕ್ತಿಗೆ ಮಾತ್ರ ಎಂದರು. ಪ್ರತಿಭೆ, ಕ್ರಿಯಾಶೀಲತೆ, ಇಚ್ಛಾಶಕ್ತಿ, ಸ್ಮರಣಶಕ್ತಿ, ನಿತ್ಯವೂ ಹೊಸತನ್ನು ಸೃಷ್ಟಿಸುವ ಗುಣ ಯುವ ಮನಸ್ಸುಗಳಲ್ಲಿವೆ. ದೇಶದಲ್ಲಿರುವ ಸಂಘಟಿತ ಯುವ ಶಕ್ತಿಯ ಶ್ರಮ ಅನೇಕ ಕ್ಷೇತ್ರಗಳಲ್ಲಿ ನಾವು ಗಮನಿಸಬಹುದು ಎಂದರು.ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ಸಿಂಗ್, ರಾಜಗುರು, ಸುಖದೇವರ ಆದರ್ಶನದಲ್ಲಿ ನಾವೆಲ್ಲಾ ನಡೆಯೋಣ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹರಿಪ್ರಸಾದ್ ಮಾತನಾಡಿ ಭಾರತ ಸೂಪರ್ ಪವರ್ ದೇಶವಾಗಲು, ಭ್ರಷ್ಟಾಚಾರಿಗಳು, ಭಯೋತ್ಪಾದಕರೇ ತೊಡಕಾಗಿದ್ದಾರೆ. ಭಾರತ ಜ್ಞಾನಶಕ್ತಿಯಾಗಿ ಹೊರ ಹೊಮ್ಮಬೇಕು. ದೇಶದಲ್ಲಿನ ವ್ಯವಸ್ಥೆ ಪರಿವರ್ತನೆಗೆ ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಈ ಮಹಾನ್ ನಾಯಕರ ಆದರ್ಶವನ್ನು ಮೈಗೂಡಿಸಿಕೊಳ್ಳೋಣ ಎಂದರು. ಭಗತ್ ಸೇನೆಯ ಮುಖಂಡ ಆರಾಧ್ಯ, ಎಬಿವಿಪಿ ಜಿಲ್ಲಾ ಸಹ ಸಂಚಾಲಕ ನವೀನ್ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋಲಾರ ಸಂಘಟನಾ ಕಾರ್ಯದರ್ಶಿ ಕೇದಾರನಾಥ್, ರಾಜ್ಯಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಚೇತನ್, ತರುಣೇಶ್ ಮುಂತಾದವರು ಇದ್ದರು.
'ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ'
ಚನ್ನರಾಯಪಟ್ಟಣ: ಸಮಾಜದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅತ್ಯಾಚಾರ ರಹಿತ ಭಾರತ ನಿರ್ಮಾಣ ಮಾಡಬೇಕೆಂದು ಹಾಸನದ ಡಯಟ್ ಉಪನ್ಯಾಸಕಿ ಐಷಾಸುಲ್ತಾನ ತಿಳಿಸಿದರು. ಅವರು ಪಟ್ಟಣದ ಇರ್ಫಾನ್ ಶಾವಲ್ಲಿ ಶಾದಿ ಮಹಲ್ನಲ್ಲಿ ಇತ್ತೀಚೆಗೆ ಮುಸ್ಲಿಂ ಮಹಿಳಾ ಸಂಘಟನೆಗಳು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ವೈದ್ಯೆ ಡಾ. ಶೋಭಾರಾಣಿ, ಡಾ. ಭಾರತಿ ರವೀಂದ್ರನಾಥ್, ತಬನವತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

