'ಟಿಕೆಟ್ ನೀಡಿದಲ್ಲಿ ಸ್ಪರ್ಧೆಗೆ ಸಿದ್ಧ'
ಕುಣಿಗಲ್: ತಾಲೂಕು ಜೆಡಿಎಸ್ ಮುಖಂಡನಾಗಿ, ಪಕ್ಷಕ್ಕೆ ತಾವು ಸೇವೆ ಸಲ್ಲಿಸಿದ್ದು, ಇಬ್ಬರು ಮುಖಂಡರ ನಡುವೆ ಏನೆ ಗೊಂದಲಗಳಿದ್ದರೂ, ತಮಗೆ ಟಿಕೆಟ್ ನೀಡಿದಲ್ಲಿ ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಕಸಬಾ ಜಿಪಂ ಸದಸ್ಯೆ ಸುಮಿತ್ರಮ್ಮನವರ ಪತಿ, ಗುತ್ತಿಗೆದಾರ ಕುಲುಮೆಪಾಳ್ಯ ಶಿವಣ್ಣ ತಿಳಿಸಿದರು.
ತಾವು ಕಳೆದ ಕೆಲ ವರ್ಷಗಳಿಂದಲೂ ತಾಲೂಕು ಜೆಡಿಎಸ್ನಲ್ಲಿ ಸಕ್ರಿಯ ಕಾರ್ಯನಿರ್ವಹಿಸುತ್ತಿದ್ದು,ಕಳೆದ ಜಿಪಂ ಚುನಾವಣೆಯಲ್ಲಿ ಬಿಜೆಪಿ ಮುಖಂಡರ ಎದುರು ಸೆಣೆಸಿ, ಕಸಬಾ ಹೋಬಳಿಯ ಜಿಪಂ ಸ್ಥಾನವನ್ನು ಜೆಡಿಎಸ್ ಪಾಲಾಗಲು ಶ್ರಮಿಸಿ, ಹಲವು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದು, ಪ್ರಸಕ್ತ ಸನ್ನಿವೇಶದಲ್ಲಿ, ತಾಲೂಕು ಜೆಡಿಎಸ್ನಲ್ಲಿ ಇಬ್ಬರು ಪ್ರಮುಖ ಮುಖಂಡರ ನಡುವಿನ ಟಿಕೆಟ್ ಗೊಂದಲಗಳಿಂದ, ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲಗಳಉಂಟಾಗಿವೆ. ಚುನಾವಣೆಯಲ್ಲಿ ಪಕ್ಷದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿ, ಪಕ್ಷದ ಮುನ್ನಡೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ತಾವು ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ತಮಗೆ ಟಿಕೆಟ್ ನೀಡುವಂತೆ ಈ ಹಿಂದೆಯೂ ಮನವಿ ಸಲ್ಲಿಸಿದ್ದು, ರಾಜ್ಯಾಧ್ಯಕ್ಷರು ಸಹ ಪೂರಕವಾಗಿ ಭರವಸೆ ನೀಡಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

