ತುಮಕೂರು

ಜೆಡಿಎಸ್ ಮುಖಂಡ ಸೋಮಣ್ಣಗೆ ಜಾಮೀನು ಮಂಜೂರು

Published On :

ಕ.ಪ್ರ.ವಾರ್ತೆ  ತುರುವೇಕೆರೆ  ಮಾ.27
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್‌ನ ಮುಖಂಡ ಬಿ.ಕೆ. ಸೋಮಣ್ಣನವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇದೇ ತಿಂಗಳ 6 ರಂದು ತಾಲೂಕಿನ ಬ್ಯಾಲಹಳ್ಳಿ ಗ್ರಾಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಬಿ.ಕೆ.ಸೋಮಣ್ಣನವರ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಶಾಸಕರ ಚಿನ್ನದ ಸರ ಹಾಗೂ ನಗದನ್ನು ಅಪಹರಿಸಲಾಗಿದೆ ಎಂದು ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿ.ಕೆ.ಸೋಮಣ್ಣ ನವರನ್ನು ನ್ಯಾಯಾಂಗ ಬಂಧನ ಮಾಡಲಾಗಿತ್ತು.
ಶಾಸಕರ ದೂರಿನ ಸಂಬಂಧದ ಪ್ರಕರಣದಲ್ಲಿ ಜಾಮೀನು ಈಗಾಗಲೇ ಮಂಜೂರಾಗಿತ್ತು. ಆದರೆ ಶಾಸಕ ಎಂ.ಟಿ. ಕೃಷ್ಣಪ್ಪನವರೊಂದಿಗೆ ಬಸ್ ನಿಲ್ದಾಣದ ಸಂಬಂಧ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು ಎಂದು ಆದೇಶಿಸಲಾಗಿತ್ತು. ಆದರೆ ನ್ಯಾಯಾಧೀಶರು ರಜಾದಲ್ಲಿದ್ದುದರಿಂದ ಜಾಮೀನು ಅರ್ಜಿ ವಿಚಾರಣೆ ತಡವಾಗಿತ್ತು ಎಂದು ಹೇಳಲಾಗಿದೆ. ಬುಧವಾರ ಸ್ಥಳೀಯ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಜಿಲ್ಲಾ ಕಾರಾಗೃಹ ಅಧಿಕಾರಿಗಳಿಗೆ ನೀಡಿದ ನಂತರವೇ ಸೋಮಣ್ಣನವರನ್ನು ಬಿಡುಗಡೆ ಮಾಡಲಾಗುವುದು. ಸೋಮಣ್ಣನವರ ವಕೀಲರು ಆದೇಶ ಪತ್ರವನ್ನು ಪಡೆದುಕೊಂಡು ಕಾರಾಗೃಹಾಧಿಕಾರಿಗಳಿಗೆ ತಲುಪಿಸಲು ತೆರಳಿದ್ದಾರೆ. ಗುರುವಾರ ಬೆಳಗ್ಗೆ ಸೋಮಣ್ಣನವರಿಗೆ ಬಿಡುಗಡೆಯ ಭಾಗ್ಯ ದೊರೆಯಲಿದೆ ಎಂದು ತಿಳಿದು ಬಂದಿದೆ. ಸೋಮಣ್ಣ ಬಿಡುಗಡೆಗೊಂಡ ನಂತರ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.
ಮರಳು ಕಾಂತರಾಜ್‌ಗೂ ಜಾಮೀನು: ಅಕ್ರಮವಾಗಿ ಮರಳನ್ನು ನದಿತಟದಿಂದ ಹೊರತೆಗೆಯಲಾಗುತ್ತಿದೆ ಎಂಬ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಮರಳು ಕಾಂತರಾಜ್‌ಗೂ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.

ನೂತನ ಅಧ್ಯಕ್ಷ ಪಾಂಡುರಂಗಪ್ಪ
ಪಾವಗಡ:
ಬೊಮ್ಮತನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಲಾ, ಕ್ರೀಡಾ ಗ್ರಾಮೀಣಾಭಿವೃದ್ಧಿ ಯುವಕ ಸಂಘ ಆಸ್ತಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ಪಾಂಡುರಂಗಪ್ಪ, ಕಾರ್ಯದರ್ಶಿಯಾಗಿ ಗಂಗಯ್ಯ ಆಯ್ಕೆಯಾಗಿದ್ದಾರೆ. ಯುವಕ ಸಂಘದ ಪದಾಧಿಕಾರಿಗಳಾಗಿ ಬೊಮ್ಮತನಹಳ್ಳಿ ಗ್ರಾಮದ ಬಸವರಾಜ್ , ತಿಪ್ಪೇಸ್ವಾಮಿ, ಶ್ರೀನಿವಾಸ್,ದುರ್ಗಪ್ಪ, ಓಬಳಯ್ಯ, ಬಸಯ್ಯ, ಸಿದ್ದಯ್ಯ, ಬಸವರಾಜ್, ಸಿದ್ದಪ್ಪ ನಾಗರಾಜು, ಬಿ.ಎಸ್.ಸಿದ್ದರಾಮಪ್ಪ, ದುರುಗನ್ನ, ಬಸವರಾಜು, ಕರಿಯಪ್ಪ, ನಾಗರಾಜು, ಬಸಪ್ಪ, ನೇಮಕಗೊಂಡಿದ್ದಾರೆ.  ಡಾ.ಬಿ.ಆರ್ ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಸಂಘವನ್ನು ಅಸ್ತಿತ್ವಕ್ಕೆ ತಂದಿರುವುದಾಗಿ ಅಧ್ಯಕ್ಷ ಪಾಂಡುರಂಗಪ್ಪ ಹಾಗೂ ಕಾರ್ಯದರ್ಶಿ ಗಂಗಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.