ತುಮಕೂರು

ಬಿಜೆಪಿಯೇ ನಮಗೆ ಎದುರಾಳಿ: ಸಿ.ಬಿ.ಸುರೇಶ್‌ಬಾಬು

Published On :

ಕ.ಪ್ರ. ವಾರ್ತೆ  ಪಾವಗಡ  ಮೇ 2
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯೇ ನಮಗೆ ಎದುರಾಳಿ, ಕೆಜೆಪಿ ಅಲ್ಲ ಎಂದು ಜೆಡಿಎಸ್ ಅಭ್ಯರ್ಥಿ, ಶಾಸಕ ಸಿ.ಬಿ.ಸುರೇಶ್‌ಬಾಬು ನುಡಿದರು.
ಗುರುವಾರ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, 26 ಕೆರಗಳಿಗೆ ನೀರುಣಿಸುವ ಹೇಮಾವತಿ ಯೋಜನೆಯ ಸಂಪೂರ್ಣ ಯಶಸ್ಸು ನನ್ನದೇ. ಇದರಲ್ಲಿ ಯಾವುದೇ ಸಂಶಯ ಬೇಡ. ನಾನು ಹಿಂದೆ ಪ್ರಥಮಬಾರಿ ಶಾಸಕನಾಗಿದ್ದ ಕಾಲದಲ್ಲಿ ಎಚ್.ಕೆ.ಪಾಟೀಲರಿಂದ ಸರ್ವೆ ಕಾರ್ಯಕ್ಕೆ 3 ಲಕ್ಷ ಬಿಡುಗಡೆ ಮಾಡಿಸಿದ್ದೆ. ಈ ಬಗ್ಗೆ ನನ್ನಲ್ಲಿ ದಾಖಲೆಯಿದೆ. ಆದರೆ ಇತ್ತೀಚೆಗೆ ಬಿಜೆಪಿ ಸರ್ಕಾರ ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದು, ಹಣ ಬಿಡುಗಡೆ ಮಾಡಿತು. ಅದನ್ನೇ ದೊಡ್ಡದಾಗಿ ಇದು ನನ್ನದೇ ಸಾಧನೆ ಎಂಬಂತೆ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಮುಂದೆಯು ಸಹ ಬರಪೀಡಿತ ಪ್ರದೇಶಗಳಾದ ಕಂದಿಕೆರೆ, ಬುಕ್ಕಾಪಟ್ಣ, ಹಂದನಕೆರೆ ಹೋಬಳಿಯ 80 ಕೆರೆಗಳಿಗೆ ನೀರೊದಗಿಸುವ ಯೋಜನೆ ಜಾರಿಗೊಳಿಸುವ ಬಗ್ಗೆ ಕಾರ್ಯಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಾಲೂಕಿನಲ್ಲಿ 20 ಸಾವಿರ ಮಹಿಳೆಯರಿಗೆ ಉದ್ಯೋಗ ಒದಗಿಸಲು ಸಿದ್ಧ ಉಡುವು ಘಟಕ ಸ್ಥಾಪನೆ ಮಾಡುವುದು ನನ್ನ ಗುರಿ. ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಿ ಇಲ್ಲಿ ಸಿಗುವ ಗಣಿ ಅದಿರಿನಿಂದ ಸ್ಥಳೀಯರಿಗೆ ಉದ್ಯೋಗ ಒದಗಿಸಲಾಗುವುದು. ವಿದ್ಯುತ್ ಅಭಾವ ನೀಗಲು ಗಾಳಿ ವಿದ್ಯುತ್ ಉತ್ಪಾದಿಸಿ ತಾಲೂಕಿಗೆ ಹಂಚಲಾಗುವುದು ಎಂದರು. ಈ ಚುನಾವಣೆಯಲ್ಲಿ ನನಗೆ ಗೆಲವು. ನನಗೆ ಜನ ಬೆಂಬಲ ಕುಗ್ಗಿಲ್ಲ, ನನ್ನ ಸರಳತೆಗೆ ಜನ  ಪ್ರೀತಿಸುತ್ತಾರೆ. ನನ್ನ ಪುನರಾಯ್ಕೆ ಬಗ್ಗೆ ನನಗೆ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಕೆ.ಎಸ್. ಕಿರಣ್‌ಕುಮಾರ್ ನನಗೆ ಎದುರಾಳಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.