ಸೋಲಿಗೆ ನಾನೇ ಹೊಣೆ
ತುಮಕೂರು: ನನ್ನ ಸೋಲಿಗೆ ನಾನೇ ಹೊಣೆ. ಸೋಲಿಗೆ ಕಾರಣ ಹುಡುಕುತ್ತಿದ್ದೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವ್ಯವಸ್ಥೆಯೊಳಗೆ ತಪ್ಪಾಗಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಸೋಲು- ಗೆಲವು ಸಹಜ. ಸೋಲಿಗೆ ತಲೆ ಕೆಡಿಸಿಕೊಳ್ಳಬಾರದು. ಸೋಲನ್ನು ಗೆಲವಿನಷ್ಟೇ ಸಹಜವಾಗಿ ಸ್ವೀಕರಿಸಬೇಕು ಎಂದರು. ತಮ್ಮ ಸೋಲಿಗೆ ಕೆಜೆಪಿ ನೇರ ಕಾರಣವಲ್ಲವೇ ಎಂಬ ಪ್ರಶ್ನೆಗೆ, ಕೆಜೆಪಿ ಬಗ್ಗೆ ಮಾತನಾಡಲಾರೆ ಎಂದರು. ಡಾ.ಜಿ. ಪರಮೇಶ್ವರ್ ಸೋತಿದ್ದು ತಮಗೆ ನೋವಾಗಿದೆ. ಸಿಎಂ ಅಭ್ಯರ್ಥಿ ರೇಸ್‌ನಲ್ಲಿದ್ದ ವ್ಯಕ್ತಿ ಸೋಲಬಾರದಿತ್ತು. ಏನು ಮಾಡುವುದು ಮತದಾರರ ತೀರ್ಪನ್ನು ಗೌರವಿಸಬೇಕು ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರುವುದು ಸಂತಸದ ವಿಷಯ. ಅವರೊಬ್ಬ ಹೋರಾಟಗಾರ. ಉತ್ತಮ ಆಡಳಿತಗಾರ. ಅವರಿಗೆ ಅಭಿನಂದಿಸುತ್ತೇನೆ ಎಂದರು.
ತುಮಕೂರು ನಗರ ಶಾಸಕರಾಗಿ ಆಯ್ಕೆಯಾಗಿರುವ ಡಾ. ರಫಿಕ್ ಅಹಮದ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಸೊಗಡು, ತುಮಕೂರಿನಲ್ಲಿ 185 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಎರಡನೇ ಹಂತದ ಯುಜಿಡಿ, ಶೆಟ್ಟಿಹಳ್ಳಿ ಅಂಡರ್ ಪಾಸ್, ಅಮಾನಿಕೆರೆ ಗಾಜಿನ ಮನೆ ಸೇರಿದಂತೆ ಮತ್ತಿತರೆ ಕೆಲಸ ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿದ ಸೊಗಡು, ಒಳ್ಳೆಯ ಕೆಲಸಗಳಿಗೆ ತಮ್ಮ ಬೆಂಬಲ ಯಾವಾಗಲೂ ಇದ್ದೇ ಇದೆ. ಜಾತಿ, ಧರ್ಮ ದುರುಪಯೋಗ ಬೇಡ. ಶಾಂತಿಯನ್ನು ಕಾಪಾಡುವುದು ಮಂತ್ರಿ, ಶಾಸಕರ ಹೊಣೆ. ತಮ್ಮ ಅವಧಿಯಲ್ಲಿ ಒಟ್ಟು 900 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿಗಳು ನಡೆದಿವೆ ಎಂದು ಸೊಗಡು ತಿಳಿಸಿದರು. ತಾವು 20 ವರ್ಷಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಒದಗಿಸಿದ ಜನತೆ, ಕಾರ್ಯಕರ್ತರು, ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸೊಗಡು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

