ತುಮಕೂರು

ನಾಳೆ ಶನೇಶ್ವರಸ್ವಾಮಿಯ 16ನೇ ವರ್ಷದ ಕುಂಭಾಭಿಷೇಕ

Published On :

ಹುಳಿಯಾರು: ಹೋಬಳಿ ವಳಗೆರೆಹಳ್ಳಿ ಶ್ರೀ ಶನೇಶ್ವರಸ್ವಾಮಿಯ 16ನೇ ವರ್ಷದ ಕುಂಭಾಭಿಷೇಕ ಪರಶುರಾಮಗಿರಿಯ ಬಾವಾಜಿಸ್ವಾಮಿಯವರ ಹಾಗೂ ಕುಲದ ಯಜಮಾನರಾದ ವಿ.ಜಿ.ಲಕ್ಷ್ಮಣರಾವ್ ಮಾರ್ಗದರ್ಶನದಲ್ಲಿ  ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಮೇ 18ರ ಶನಿವಾರ ನಡೆಯಲಿದೆ. ಕುಂಭಾಭಿಷೇಕದ ಅಂಗವಾಗಿ ಶುಕ್ರವಾರ ಬೆಂಗಳೂರಿನ ಪುಟ್ಟೋಜಿರಾವ್ ಅವರಿಂದ ಕಾಕವಾಹನ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ಮೇ 18ರ ಶನಿವಾರ ಬೆಳಿಗ್ಗೆ ಪುಣ್ಯಾಹ, ದೇವನಾಂದಿ, ಕಳಸಸ್ಥಾಪನೆ, ನವಗ್ರಹ ಆರಾಧನೆ, ಗಣಪತಿ ಹೋಮ, ಶನೇಶ್ವರಹೋಮ, ಮೃತ್ಯುಂಜಯಹೋಮ, ಪಂಚಾಮೃತಾಭಿಷೇಕ, ಸಹಸ್ರನಾಮ ಅರ್ಚನೆ ಹುಳಿಯಾರಿನ ಎಚ್.ಎಸ್. ಲಕ್ಷ್ಮೀನರಸಿಂಹಯ್ಯನವರ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ ಶನೇಶ್ವರ ಸ್ವಾಮಿಗೆ ಕುಂಭಾಭಿಷೇಕ ನಂತರ ಪಾನಕ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಇದೇ ದಿನ ರಾತ್ರಿ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಮೇ 19ರ ಭಾನುವಾರ ಗೆಳೆಯರ ಬಳದವರು ತುಮಕೂರಿನ ಜ್ಯೋತಿ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಸಚಿವ ಸ್ಥಾನ ನೀಡಲು ಲಿಂಗರಾಜು ಒತ್ತಾಯ
ತಿಪಟೂರು: ತಿಪಟೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ 2ನೇ ಬಾರಿಗೆ ಆಯ್ಕೆಯಾಗಿರುವ ಹಿರಿಯ ಸಹಕಾರಿ ಧುರೀಣ, ಹಾಲಿ ನ್ಯಾಷನಲ್ ಫೆಡರೇಷನ್ ಬ್ಯಾಂಕ್ ಡೈರೆಕ್ಟರ್, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೆ. ಷಡಕ್ಷರಿಯವರಿಗೆ ಸಚಿವ ಖಾತೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಹಾಗೂ ಎಲ್ಲಾ ಕಾಂಗ್ರೆಸ್ ನಾಯಕರಿಗೆ ನಗರಸಭಾ ಸದಸ್ಯ ಟಿ.ಜೆ. ಲಿಂಗರಾಜು ಒತ್ತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.