ತುಮಕೂರು

ಆರ್ಯವೈಶ್ಯ ಸಮುದಾಯದವರಿಂದ ವಿವಿಧ ಪೂಜೆ

Published On :

ಕ.ಪ್ರ.ವಾರ್ತೆ ಕೊರಟಗೆರೆ  ಮೇ 22
ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಆರ್ಯವೈಶ್ಯ ಸಮುದಾಯದವರಿಂದ ವಿವಿಧ ಪೂಜೆಯೊಂದಿಗೆ ವಿಜೃಂಭಣೆಯಿಂದ ವಾಸವಿ ಜಯಂತಿ ಆಚರಿಸಿದರು.
ಜಯಂತ್ಯುತ್ಸವ ಅಂಗವಾಗಿ ಕಳೆದ ಎರಡು ದಿನಗಳಿಂದ ವಿಶೇಷ ಪೂಜೆ, ಹಾಲಿನ ಅಭಿಷೇಕ, ಹೂವಿನ ಅಲಂಕಾರ, ಹೋಮಹವನಗಳು ನೆರೆವೇರಿದವು. ನಂತರ ಸುಮಂಗಲಿಯರು ತಂಬಿಟ್ಟಿನ ಆರತಿಯನ್ನು ದೇವಿಗೆ ಬೆಳಗಿ ಪ್ರಾರ್ಥಿಸಿದರು. ನಂತರ ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಘೋಷ್ಠಿ, ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ವಾಸವಿ ದೇವಿಯ ಉತ್ಸವ ನಡೆಸಿದರು.
ಉತ್ಸವದಲ್ಲಿ ವಾಸವಿ ಮಹಿಳಾ  ಸದಸ್ಯರು ಹಾಗೂ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎಸ್. ವೆಂಕಟೇಶ್, ಅಶೋಕ್, ವಿ.ಸಿ. ರಮೇಶ್, ಕೆ.ಎಸ್. ಶ್ರೀನಿವಾಸ ಮೂರ್ತಿ ಸೇರಿದಂತೆ ಆರ್ಯವೈಶ್ಯ ಸಮುದಾಯದ ಮುಖಂಡರು ಭಾಗವಹಿಸಿದ್ದು ವಾಸವಿ ಜಯಂತಿ ಅಂಗವಾಗಿ ಒಂದು ದಿನ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದರು.

ಮಹಿಳಾ ಶೌಚಾಲಯವಿಲ್ಲದ ತಿಪಟೂರು ಬೆಸ್ಕಾಂ ಕಚೇರಿ
ಕ.ಪ್ರ.ವಾರ್ತೆ ತಿಪಟೂರು ಮೇ 22
ವಿಶ್ವದಾದ್ಯಂತ ಎಲ್ಲೆಲ್ಲೂ ಮಹಿಳೆಗೆ ಪ್ರಥಮ ಸ್ಥಾನ ನೀಡುತ್ತಿರುವುದರ ಜೊತೆಗೆ ದೇಶದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ಬಹುದಿನಗಳಿಂದ ಕೇಳಿಬರುತ್ತಿದೆ. ಮೀಸಲಾತಿ ನೀಡಬೇಕೆಂಬುದು ಹೆಗ್ಗಳಿಕೆಯ ವಿಷಯವೇ ಹೌದಾದರೂ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯೂ ಕೆಲಸ ನಿರ್ವಹಿಸುವ ಸಾಕಷ್ಟು ಕಚೇರಿಗಳಲ್ಲಿ ಮಹಿಳೆಗೆ ಅವಶ್ಯವಿರುವ ಶೌಚಾಲಯಗಳೇ ಇಲ್ಲದೆ ಆಕೆಯನ್ನು ಅವಮಾನಿಸುವುದು ಅದೆಷ್ಟು ಸರಿ. ಇಂತಹ ಸಮಸ್ಯೆಗೆ ತಾಜಾ ಉದಾಹರಣೆ ಎಂದರೆ ತಿಪಟೂರು ನಗರದಲ್ಲಿರುವ ಸಹಾಯಕ ಬೆಸ್ಕಾಂ ಕಚೇರಿ. ಈ ಕಚೇರಿಯಲ್ಲಿ 12ಕ್ಕೂ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು ಈ ಕಚೇರಿಯಲ್ಲಿ ಒಂದೂ ಮಹಿಳಾ ಶೌಚಾಲಯವಿಲ್ಲ. ಆಕಸ್ಮಾತ್ ಇವರು ಶೌಚಕ್ಕೆ ಹೋಗಬೇಕೆಂದರೆ ಕಚೇರಿ ಆವರಣದಲ್ಲಿರುವ ಕ್ವಾಟರ್ಸ್‌ನ ಯಾರದಾದರೂ ಮನೆಗೆ ಹೋಗಬೇಕಾದ ದಯನೀಯ ಸ್ಥಿತಿ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. 12ಕ್ಕೂ ಹೆಚ್ಚು ಮಹಿಳೆಯರೇ ಕಾರ್ಯನಿರ್ವಹಿಸುತ್ತಿರುವ ಈ ಬೆಸ್ಕಾಂ ಕಚೇರಿ ಅಧಿಕಾರಿ ಅಥವಾ ಮೇಲಾಧಿಕಾರಿಗಳಾಗಲಿ ಈಗಲಾದರೂ ತಮ್ಮ ಕಚೇರಿಯ  ಮಹಿಳಾ ಸಿಬ್ಬಂದಿಗೆ ಶೌಚಾಲಯ ನಿರ್ಮಿಸಿ ಕೊಡಲು ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದು ಕುತೂಹಲದ ಸಂಗತಿ.

ಎಸ್.ಎಸ್.ಎಲ್.ಸಿಯಲ್ಲಿ ಮೌನ ಶ್ರೇಷ್ಠ ಸಾಧನೆ
ತಿಪಟೂರು: ತಾಲೂಕಿನ ಕೊನೇಹಳ್ಳಿಯ ಕೆ.ಎಲ್. ಶೇಖರ್ ಹಾಗೂ ವೈ.ಬಿ. ಮಮತಾರವರ ಪುತ್ರಿಯಾದ ಎಸ್. ಮೌನ ಎಸ್.ಎಸ್.ಎಲ್.ಸಿ ಪರೀಕ್ಷೆಯ್ಲಲಿ ಒಟ್ಟು 612 (ಶೇ.97.92) ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದಾಳೆ.
ಎಸ್.ಮೌನ ಕಡೂರಿನ ಎಂ.ಎಸ್.ಆರ್ ಇಂಗ್ಲಿಷ್ ಶಾಲೆಯಲ್ಲಿ ಓದಿದ್ದು, ಕನ್ನಡ 124, ಇಂಗ್ಲಿಷ್ 96, ಹಿಂದಿ 98, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನ 97 ಅಂಕಗಳನ್ನು ಗಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಮೌನ ನನ್ನ ಈ ಸಾಧನೆಗೆ ನನ್ನ ತಾತ ಬಾಲಕೃಷ್ಣರವರ ಪ್ರೋತ್ಸಾಹ, ಶಿಕ್ಷಕರು ಹಾಗೂ ತಂದೆ ತಾಯಿಯವರ ಮಾರ್ಗದರ್ಶನ ಮತ್ತು ಪರಿಶ್ರಮದಿಂದ ಓದಿದ ಫಲದಿಂದಾಗಿ ಇಷ್ಟು ಅಂಕಗಳಿಸಲು ಸಾಧ್ಯವಾಯಿತು ಎಂದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.