ತುಮಕೂರು

ಸರ್ಕಾರ ಅಗ್ಗದ ಮದ್ಯ ಮಾರಾಟ ಯೋಜನೆ ಕೈ ಬಿಡಲು ಕರೆ

Published On :

ಕ.ಪ್ರ.ವಾರ್ತೆ ತುಮಕೂರು ಮೇ 22
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯಾದ್ಯಂತ ಮದ್ಯ ವ್ಯಸನಿಗಳನ್ನು ಗುರುತಿಸಿ, ಪರಿವರ್ತನೆಗೆ ಮಾರ್ಗದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಸರಕಾರ ಅಗ್ಗದ ಮದ್ಯ ಮಾರಾಟ ಯೋಜನೆ ಕೈಬಿಡಬೇಕೆಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಸಲಹೆ ನೀಡಿದರು.
ಅವರು ತುಮಕೂರಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಹೆಬ್ಬೂರು ಇವುಗಳ ಸಂಯುಕ್ತಾಶ್ರಯದಲ್ಲಿ 586 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರ ಬಡತನಕ್ಕೆ ಮೂಲ ಸಮಸ್ಯೆಯೇ ಮದ್ಯಪಾನದಂತಹ ದುಶ್ಚಟ. ದುಶ್ಚಟದಿಂದ ಮುಕ್ತರಾಗಲು ಪ್ರೇರಣೆ ಕೊಡುವ ಬದಲು ಪ್ರೋತ್ಸಾಹಿಸುವುದು ಸರಿಯಲ್ಲ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಡಾ. ಸಂಜಯ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ನಿರ್ದೇಶಕ  ಪಿ. ಗಂಗಾಧರ ಪೈ ಮಾತನಾಡಿ ಸಮಾಜದಲ್ಲಿನ ಬಡವರ, ಕೂಲಿ ಕಾರ್ಮಿಕರ ಅಭಿವೃದ್ಧಿಗಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಕೃಷಿ, ಹೈನುಗಾರಿಕೆ, ಸ್ವ ಉದ್ಯೋಗಕ್ಕಾಗಿ ತರಬೇತಿ, ಸಾಲ ನೀಡುವ ಜೊತೆಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಕಳೆದ 20 ವರ್ಷಗಳಿಂದ 586 ಮದ್ಯವರ್ಜನ ಶಿಬಿರದ ಮೂಲಕ 40 ಸಾವಿರಕ್ಕೂ ಕ್ಕೂ ಮಿಕ್ಕಿ ಜನ ವ್ಯಸನ ಮುಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ತರಲಾಗಿದೆ ಎಂದು ತಿಳಿಸಿದರು.
ಮದ್ಯವರ್ಜನ ಶಿಬಿರದಲ್ಲಿ ಸೇರಿದ 62 ಮಂದಿ ಮದ್ಯ ಮುಕ್ತರಿಗೆ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಅವರು ಕೌಟುಂಬಿಕ ಸಲಹೆಯನ್ನು ನೀಡಿದರು. ಪ್ರಾಸ್ತಾವಿಕವಾಗಿ ಶಿಬಿರಾಧಿಕಾರಿ ಭಾಸ್ಕರ್ ರವರು ಶಿಬಿರದ ಬಗ್ಗೆ ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಧರ್ಮದರ್ಶಿ ಪಾಪಣ್ಣ, ರೋಟರಿ ಅಧ್ಯಕ್ಷ ಗಂಗಾಧರ ಶಾಸ್ತ್ರಿ, ಪ್ರೆಸ್ ರಾಜಣ್ಣ, ಪಾಂಡುರಂಗ ಶೆಟ್ಟಿ, ಅಧ್ಯಕ್ಷರಾದ ಯತೀಶ್, ರಾಘವೇಂದ್ರ, ನಂಜುಂಡಿ, ಪ್ರಕಾಶ್, ಯೋಜನಾಧಿಕಾರಿ ಸದಾಶಿವ ಕುಲಾಲ್, ಮೇಲ್ವಿಚಾರಕ ಮಾಧವ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.